- Home
- Entertainment
- TV Talk
- 'ನಿನಗಾಗಿ' ಸೀರಿಯಲ್ ಮೂಲಕ ಗಮನ ಸೆಳೆದ ವಜ್ರೇಶ್ವರಿ… ರಿಯಲ್ ಲೈಫಲ್ಲಿ ವಿಶ್ವದ್ಯಾಂತ ಹೆಸರು ಮಾಡ್ತಿರೋ ಡ್ಯಾನ್ಸರ್
'ನಿನಗಾಗಿ' ಸೀರಿಯಲ್ ಮೂಲಕ ಗಮನ ಸೆಳೆದ ವಜ್ರೇಶ್ವರಿ… ರಿಯಲ್ ಲೈಫಲ್ಲಿ ವಿಶ್ವದ್ಯಾಂತ ಹೆಸರು ಮಾಡ್ತಿರೋ ಡ್ಯಾನ್ಸರ್
ನಿನಗಾಗಿ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ರಚನಾ ತಾಯಿಯಾಗಿ ಗತ್ತು, ದರ್ಪದಿಂದ ಇರುವ, ಮಗಳನ್ನು ಮುಂದಿಟ್ಟುಕೊಂಡು ಹಣ ಮಾಡುವ ವಜ್ರೇಶ್ವರಿ ಪಾತ್ರಕ್ಕೆ ಜೀವ ತುಂಬುತ್ತಿರೋ ನಟಿಯ ರಿಯಲ್ ಲೈಫ್ ಸ್ಟೋರಿ ಇಲ್ಲಿದೆ.

ಇತ್ತೀಚೆಗಷ್ಟೇ ಆರಂಭವಾದ ನಿನಗಾಗಿ (Ninagaagi) ಧಾರಾವಾಹಿ ವೀಕ್ಷಕರನ್ನು ಹಿಡಿದಿಡುವಲ್ಲಿ ಗೆದ್ದಿದೆ. ಅದು ನೆಗೆಟಿವ್ ಆಗಿರಲಿ, ಪಾಸಿಟಿವ್ ಪಾತ್ರಗಳು ಆಗಿರಲಿ ಎಲ್ಲಾ ಪಾತ್ರಗಳು ಅದ್ಭುತವಾಗಿ ಅಭಿನಯಿಸುತ್ತಿದ್ದು, ಎಲ್ಲರ ನಟನೆಯೇ ವೀಕ್ಷಕರನ್ನು ಕೂತು ಸೀರಿಯಲ್ ನೋಡುವಂತೆ ಮಾಡಿದೆ.
ನಿನಗಾಗಿ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ನಟಿ ರಚನಾ ತಾಯಿಯಾಗಿ, ಗತ್ತು, ದರ್ಪದ ಕೂಡಿದ ನೆಗೆಟೀವ್ ಶೇಡ್ ಪಾತ್ರದ ಮೂಲಕ, ಮಗಳನ್ನು ತನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಂಡಿರುವ ಅಮ್ಮನ ಪಾತ್ರದ ಮೂಲಕ ಗಮನ ಸೆಳೆದ ನಟಿಯ ಹೆಸರು ಸೋನಿಯಾ ಪೊನ್ನಮ್ಮ ದೇವಯ್ಯ (Sonia Ponnamma Devaiah), ಅಥವಾ ಪೊನ್ನಮ್ಮ ದೇವಯ್ಯ.
ತನ್ನ ಸ್ವಾರ್ಥಕ್ಕಾಗಿ ಮಗಳನ್ನೇ ಬಳಸುತ್ತಿರುವ ತಾಯಿ ಪಾತ್ರ ಸೋನಿಯಾ ಅವರನ್ನು. ಸೂಪರ್ ಸ್ಟಾರ್ ಆಗಿರುವ ತನ್ನ ಮಗಳನ್ನು ಮುಂದಿಟ್ಟುಕೊಂಡು ಕೋಟಿಗಟ್ಟಲೇ ಹಣ ಮಾಡೋದೇ ವಜ್ರೇಶ್ವರಿ ಬಯಕೆ. ಮಗಳ ಮುಂದೆ ಒಳ್ಳೆಯವಳಂತೆ ನಟಿಸಿ, ಆಕೆಗೆ ಮೋಸ ಮಾಡುವ ಈಕೆಯ ಬುದ್ದಿ ಮಗಳಿಗೆ ಯಾವಾಗ ತಿಳಿಯುತ್ತೆ ಎಂದು ಕಾಯ್ತಿದ್ದಾರೆ ವೀಕ್ಷಕರು. ಜೊತೆಗೆ ವಜ್ರೇಶ್ವರಿ ಅಭಿನಯಕ್ಕೆ ಫುಲ್ ಮಾರ್ಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ವಜ್ರೇಶ್ವರಿ ಪಾತ್ರದಲ್ಲಿ ಮಿಂಚುತ್ತಿರುವ ಸೋನಿಯಾ ಪೊನ್ನಮ್ಮ ಯಾರ್ ಗೊತ್ತಾ?
ಸೋನಿಯಾ ಪೊನ್ನಮ್ಮ ಮೂಲತಃ ಮಡಿಕೇರಿಯವರು. ಇವರು ಜನಪ್ರಿಯ ಕ್ಲಾಸಿಕಲ್ ಡ್ಯಾನ್ಸರ್ ಕೂಡಾ ಹೌದು. ಭರತನಾಟ್ಯ ಹಾಗೂ ಕಥಕ್ ನೃತ್ಯವನ್ನು ಕಲಿತಿರುವ ಸೋನಿಯಾ ದೂರದರ್ಶನದ ಎ ಗ್ರೇಡ್ ಕಲಾವಿದೆಯಾಗಿದ್ದು, ದೇಶ - ವಿದೇಶಗಳಲ್ಲಿಯೂ ನೃತ್ಯ ಪ್ರದರ್ಶನ ನೀಡಿ ಜನಪ್ರಿಯತೆ ಪಡೆದಿದ್ದಾರೆ. ಇವರು ಕೊರಿಯೋಗ್ರಾಫರ್ (chorographer) ಕೂಡ ಹೌದು.
ಸೋನಿಯಾ ಪೊನ್ನಮ್ಮ ಕನ್ನಡ ಕಿರುತೆರೆಗೆ ಹೊಸಬರು, ಆದ್ರೆ ಇವರು 22 ವರ್ಷಗಳ ಹಿಂದೆ ಕೊಡಗು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ನೃತ್ಯದಲ್ಲಿ ಬ್ಯುಸಿಯಾಗಿದ್ದ ಸೋನಿಯಾ. ಇದೀಗ ಬರೋಬ್ಬರಿ 22 ವರ್ಷಗಳ ಬಳಿಕ ನಿನಗಾಗಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಮದುವೆಯಾಗಿ ಪತಿಯೊಡನೆ ಸಿಂಗಾಪುರದಲ್ಲಿ ನೆಲೆಸಿರುವ ಸೋನಿಯಾ, ನಿನಗಾಗಿ ಧಾರಾವಾಹಿಯ ವಜ್ರೇಶ್ವರಿ ಪಾತ್ರಕ್ಕೆ ಆಯ್ಕೆಯಾದುದು ವಿಶೇಷ. ಡ್ಯಾನ್ಸ್ ಕಾರ್ಯಕ್ರಮದ ಸಲುವಾಗಿ ಸೋನಿಯಾ ಹೆಚ್ಚಾಗಿ ಸಿಂಗಾಪುರದಿಂದ (Singapore) ಬೆಂಗಳೂರಿಗೆ ಬರುತ್ತಿದ್ದರಂತೆ. ಆ ಸಮಯದಲ್ಲಿ 'ನಿನಗಾಗಿ' ಧಾರಾವಾಹಿಯ ಆಡಿಶನ್‌ನಲ್ಲಿ ಭಾಗವಹಿಸುವಂತೆ ನಿರ್ಮಾಪಕರಿಂದ ಕರೆ ಬಂದಿತಂತೆ. ಆಡಿಶನ್‌ಗೆ ಹೋದ ಸೋನಿಯಾ ಮೊದಲ ಆಡಿಶನ್ ನಲ್ಲಿ ವಜ್ರೇಶ್ಚರಿ ಪಾತ್ರಕ್ಕೆ ಆಯ್ಕೆಯೂ ಆದರಂತೆ.
ನಿನಗಾಗಿ ಧಾರಾವಾಹಿ ಶೂಟಿಂಗ್ ನಲ್ಲಿ ಸದ್ಯ ಬ್ಯುಸಿಯಾಗಿರೋದರಿಂದ ಕೊಂಚ ಡ್ಯಾನ್ಸ್ ನಿಂದ ಈಗ ಸೋನಿಯಾ ಬ್ರೇಕ್ ಪಡೆದಿದ್ದಾರೆ. ಇನ್ನು ಖಡಕ್ ಆಗಿರುವ ವಜ್ರೇಶ್ವರಿ ಪಾತ್ರಕ್ಕೆ ಸೋನಿಯಾ ಅವರಿಗೆ ಪ್ರೇರಣೆ ನೀಡಿದ್ದು, ರಮ್ಯಾಕೃಷ್ಣರ (Ramyakrishna) ಬಾಹುಬಲಿ ಚಿತ್ರದ ಪಾತ್ರವಂತೆ. ವಜ್ರೇಶ್ವರಿ ಪಾತ್ರವನ್ನ ನೋಡಿದ್ರೆ, ಖಂಡಿತವಾಗಿಯೂ ರಮ್ಯಾಕೃಷ್ಣ ಛಾಯೆ ಕಾಣಿಸುತ್ತೆ ಅಂದ್ರೆ ತಪ್ಪಾಗಲ್ಲ.