ಸಿನಿಮಾಗಳಲ್ಲಿ ನಟಿಸಿದ್ರೂ, ಈ ನಟ ಕನ್ನಡಿಗರ ಮನೆ ಮಗ ಆಗಿದ್ದು ಲಕ್ಷ್ಮೀ ನಿವಾಸದ ಸಿದ್ದೇ ಗೌಡರಾಗಿ…
ನಟ ರಂಗಭೂಮಿ ಕಲಾವಿದ, ಡಬ್ಬಿಂಗ್ ಆರ್ಟಿಸ್ಟ್ ಧನಂಜಯ್ ಆಲಿಯಾಸ್ ಡಿಜೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ರೂ ಕನ್ನಡಿಗರ ತುಂಬಾನೆ ಹತ್ತಿರವಾಗಿದ್ದು ಮಾತ್ರ ಲಕ್ಷ್ಮೀ ನಿವಾಸದ ಸಿದ್ದೇ ಗೌಡರ ಪಾತ್ರದಲ್ಲಿ.
ಇವರೊಬ್ಬ ಬಹು ಮುಖಪ್ರತಿಭೆ (multitalented actor) ಅಂತಾನೇ ಹೇಳಬಹುದು. ಯಾಕಂದ್ರೆ ಇವರು ರಂಗಭೂಮಿ ಕಲಾವಿದರೂ ಹೌದು, ಸಿನಿಮಾ ನಟನೂ ಹೌದು, ಡ್ಯಾನ್ಸರ್ ಕೂಡ ಹೌದು, ಕಂಠದಾನ ಕಲಾವಿದನೂ ಹೌದು. ಇಷ್ಟೇಲ್ಲಾ ಟ್ಯಾಲೆಂಟ್ ಇರೋ ಈ ನಟ ಜನಪ್ರಿಯತೆ ಪಡೆದದ್ದು ಕಿರುತೆರೆಯ ಮೂಲಕ.
ಇಲ್ಲಿ ಯಾರ್ ಬಗ್ಗೆ ಹೇಳ್ತಿರೋದು ಅಂತ ಈಗಾಗ್ಲೇ ನಿಮಗೆ ಗೊತ್ತಾಗಿರಬೇಕು ಅಲ್ವಾ? ಇವರ ಹೆಸರು ಧನಂಜಯ್ (Dhananjay). ಫ್ರೆಂಡ್ಸ್ ಪ್ರೀತಿಯಿಂದ ಕರೆಯೋದು ಡಿಜೆ ಅಂತ. ಆದ್ರೆ ಈವಾಗ ಆ ಎರಡು ಹೆಸರುಗಳನ್ನು ಮರೆಮಾಚಿರೋದು ಲಕ್ಷ್ಮೀ ನಿವಾಸ ಧಾರವಾಹಿಯ ಸಿದ್ಧೇ ಗೌಡರ ಪಾತ್ರ.
ಹೌದು ಲಕ್ಷ್ಮೀ ನಿವಾಸದಲ್ಲಿ (Lakshmi Nivasa) ಸಿದ್ದೇ ಗೌಡರ ಪಾತ್ರಕ್ಕೆ ಜೀವ ತುಂಬಿದ ನಟ ಧನಂಜಯ್. ತನಗಿಂತ ವಯಸ್ಸಲ್ಲಿ ತುಂಬಾನೆ ದೊಡ್ಡವಳು ಆಗಿರುವ ಭಾವನಾ ಮೇಲೆ ಪ್ರೀತಿ ಮೂಡಿರುವ ಸಿದ್ದೇ ಗೌಡರು ಅಂದ್ರೆ ವೀಕ್ಷಕರಿಗೆ, ಅಲ್ಲಲ್ಲ ಕನ್ನಡಿಗರಿಗೆ ಅಪಾರ ಪ್ರೀತಿ ಅಂತಾನೆ ಹೇಳಬಹುದು. ಯಾಕಂದ್ರೆ ಗೌಡ್ರು ತಮ್ಮ ಡೈಲಾಗ್, ನಟನೆ, ಸ್ಟೈಲ್ ಮೂಲಕವೇ ಜನರ ಮನ ಗೆಲ್ಲುವ ಮೂಲಕ ಮನೆಮಗನಾಗಿದ್ದಾರೆ.
ರಂಗಭೂಮಿ ಕಲಾವಿದರಾಗಿರುವ ಸಿದ್ದೇ ಗೌಡರಿಗೆ (Sidde Gowda) ಬಾಲ್ಯದಲ್ಲೇ ನಟನೆ ಮೇಲೆ ಸಿಕ್ಕಾಪಟ್ಟೆ ಒಲವು. ಹಾಗಾಗಿ ಕಳೆದ 12 ವರ್ಷಗಳಿಂದ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಧನಂಜಯ್. ಪಾತ್ರಗಳ ಅವಕಾಶಕ್ಕಾಗಿ ತುಂಬಾನೆ ಆಡಿಶನ್ ಕೊಟ್ಟಿದ್ದರಂತೆ, ರಿಜೆಕ್ಟ್ ಆಗಿದ್ದೇ ಹೆಚ್ಚಂತೆ ಡಿಜೆ. ಕೊನೆಗೆ ಲಕ್ಷ್ಮೀ ನಿವಾಸದ ಸಿದ್ದೇ ಗೌಡರ ಪಾತ್ರ ಸಿಕ್ಕಿದ್ದು, 12 ವರ್ಷದ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಂತೆ ಎನ್ನುತ್ತಾರೆ ಧನಂಜಯ್.
ಧನಂಜಯ್ ಗೆ ಈ ಪಾತ್ರ ಸಿಕ್ಕಿರೋದಕ್ಕೆ ತುಂಬಾನೆ ಖುಷಿ ಇದೆಯಂತೆ. ಜನರು ಗುರುತಿಸಿ, ಮನೆಮಗನಂತೆ ಸಿದ್ದೇ ಗೌಡ್ರೆ ಎಂದು ಕರೆದು ಮಾತನಾಡಿಸೋದು, ಪ್ರೀತಿ ಕೊಡುವುದನ್ನು ನೋಡಿದ್ರೆ ಡಿಜೆಗೆ ತುಂಬಾನೆ ಸಂತೋಷವಾಗುತ್ತಂತೆ. ಈ ಪಾತ್ರಕ್ಕೆ ಆಯ್ಕೆಯಾಗಿದ್ದಕ್ಕೂ ಸಾರ್ಥಕ ಅನ್ನುತ್ತಾರೆ ಡಿಜೆ.
ಧನಂಜಯ್ ಈಗಾಗಲೇ ವಾಸಂತಿ ನಲಿದಾಗ, ಜಿಲ್ ಜಿಲ್ ಸೇರಿ ಒಂದಿಷ್ಟು ಸ್ಯಾಂಡಲ್ ವುಡ್ (sandalwood) ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದು, ಇದೀಗ ಮೊದಲ ಬಾರಿಗೆ ಕನಕ ಪುಷ್ಫ ಹೀರೋ ಆಗಿ ಎಂಟ್ರಿ ಕೊಡ್ತಿದ್ದಾರಂತೆ ಡಿಜೆ. ಚಿತ್ರದ ಶೂಟಿಂಗ್ ಮುಗಿದಿದ್ದು, ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆಯಂತೆ. ಕಿರುತೆರೆ ನಟನಾಗಿ ಸೈ ಎನಿಸಿಕೊಂಡ ಡಿಜೆ ಸಿನಿಮಾ ನಾಯಕನಾಗಿ ಸೈ ಎನಿಸಿಕೊಳ್ತಾರಾ ಕಾದು ನೋಡಬೇಕು.
ಇನ್ನು 80ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿರುವ ಹಾಗೂ ಇನ್ನೂರಕ್ಕೂ ಅಧಿಕ ಸಿನಿಮಾಗಳಿಗೆ ಡಬ್ಬಿಂಗ್ ಮಾಡಿರುವ ಲಕ್ಷ್ಮೀ ನಿವಾಸ ಸಿದ್ದೇ ಗೌಡ್ರು ಸೆಪ್ಟೆಂಬರ್ 17ರಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಲಕ್ಷ್ಮೀ ನಿವಾಸದ ಸಹನಟರು ಸೇರಿ ಹಲವರು ಈ ಬಹುಮುಖ ಪ್ರತಿಭೆಗೆ ಶುಭ ಕೋರಿದ್ದಾರೆ.