- Home
- Entertainment
- TV Talk
- ಕನ್ನಡ ಕಿರುತೆರೆಯ ರಜನಿಕಾಂತ್, ವೀಕ್ಷಕರ ಮೆಚ್ಚಿನ ದರಿದ್ರ ಸುಂದ್ರನ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ
ಕನ್ನಡ ಕಿರುತೆರೆಯ ರಜನಿಕಾಂತ್, ವೀಕ್ಷಕರ ಮೆಚ್ಚಿನ ದರಿದ್ರ ಸುಂದ್ರನ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಕಾಂತಮ್ಮನ ಮಗ ಸುಂದರ ಖ್ಯಾತಿಯ ರಜನಿಕಾಂತ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಧಾರಾವಾಹಿಯಲ್ಲಿ ಕಾಂತಮ್ಮ ಹಾಗೂ ಸುಂದರನ ಜೋಡಿಯನ್ನು ಇಷ್ಟಪಡದೇ ಇರದವರು ಯಾರೂ ಇಲ್ಲ. ಇವರು ಇರೋದೇ ಹೀಗೆ ಅನ್ನೋವಷ್ಟು ಅದ್ಭುತವಾಗಿ ನಟಿಸುತ್ತಾರೆ ಈ ಜೋಡಿ.
ಅದರಲ್ಲೂ ಸುಂದರ ಅಂತೂ ದರಿದ್ರ ಸುಂದರನಾಗಿ (Daridra Sundara), ಕುಡುಕನಾಗಿ, ದುಡ್ಡಿಗಾಗಿ ಏನು ಬೇಕಾದರೂ ಮಾಡುವ ಆದರೆ ಕೈಯಲ್ಲಿ ಕೆಲಸ ಇಲ್ಲದೇ, ಹೆಂಡತಿ ಮನೆಯಲ್ಲಿ ತಾಯಿಯ ಸಮೇತ ಬಂದು ಕುಳಿತಿರುವ ಶತ ಮೂರ್ಖ ಸುಂದರ ಪಾತ್ರವನ್ನು ಅದು ತಾನೇ ಎನ್ನುವಷ್ಟು ಚೆನ್ನಾಗಿ ಮಾಡುತ್ತಿದ್ದಾರೆ.
ಸುಂದರನ ಪಾತ್ರದಲ್ಲಿ ನಟಿಸುತ್ತಿರುವ ನಟನ ಹೆಸರು ರಜನಿಕಾಂತ್ (Rajinikanth). ಹೌದು, ಇವರು ಕನ್ನಡ ಕಿರುತೆರೆಯ ರಜನಿಕಾಂತ್. ಇವತ್ತು ರಜನಿಕಾಂತ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಜನಿಕಾಂತ್ ಕುರಿತು ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.
ರಜನಿಕಾಂತ್ ಅವರಿಗೆ ಈ ಹೆಸರು ಇರೋದರಿಂದ ಪಜೀತಿಗೆ ಸಿಕ್ಕಾಕ್ಕೊಂಡಿದ್ದು ಇದೆಯಂತೆ. ಇವರು ರಾತ್ರಿಯಲ್ಲಿ ಹುಟ್ಟಿದ್ದರಿಂದ ಇವರ ಪೋಷಕರು ಇವರಿಗೆ ರಜಿನಿಕಾಂತ್ ಅಂದ್ರೆ ಕತ್ತಲೆಯಲ್ಲಿ ಹೊಳೆಯುವವರು ಎನ್ನುವ ಹೆಸರನ್ನು ಇಟ್ಟಿದ್ದರಂತೆ.
ಮೈಸೂರಿನ ಕಾವಾದಲ್ಲಿ ಫೋಟೊಗ್ರಫಿ ಜನ್ಮಲಿಸಂ (photography journalism) ಮಾಡಿ ಮುಗಿಸಿರುವ ರಜಿನಿಕಾಂತ್, ನಂತರ ಪ್ರವೃತ್ತಿಯಾಗಿ ರಂಗಭೂಮಿಯನ್ನು ಆಯ್ಕೆ ಮಾಡಿಕೊಂಡರು. ಇವರು ಮಂಡ್ಯ ರಮೇಶ್ ಅವರ ನಟನ ತಂಡದ ವಿದ್ಯಾರ್ಥಿ ಕೂಡ ಹೌದು.
ರಜಿನಿಕಾಂತ್, ಹಲವು ನಾಟಕಗಳು, ಸಿನಿಮಾಗಳು, ಸೀರಿಯಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ಕಾಮಿಡಿ ಪಾತ್ರಗಳನ್ನೂ (comedy roles)ನಿರ್ವಹಿಸಿದ್ದಾರೆ, ಇದರ ಜೊತೆ ಜೊತೆಗೆ ವಿಲನ್ ಪಾತ್ರಗಳನ್ನು ಸಹ ನಿರ್ವಹಿಸಿದ್ದಾರೆ. ಸದ್ಯಕ್ಕಂತೂ ಕಾಮಿಡಿ ವಿಲನ್ ಆಗಿ ನಟಿಸುತ್ತಿದ್ದಾರೆ.
ಇವರಿಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು, ನಾಗತಿಹಳ್ಳಿ ಚಂದ್ರಶೇಖರ್ (Nagathi Halli Chandrashekhar) ನಿರ್ದೇಶನದ ಒಲವೇ ಜೀವನ ಲೆಕ್ಕಾಚಾರ ಮೂಲಕ, ಇದಾದ ನಂತರ ರಜಿನಿಕಾಂತ್ ವೆಂಕಟ ಇನ್ ಸಂಕಟ, ಕ್ರೇಜಿ ಕುಟುಂಬ, ಕ್ರಿಸ್ಮಸ್, ಜಾಕ್ಸನ್, ಕೃಷ್ಣ ಗಾರ್ಮೆಂಟ್ಸ್, ಮಂಗಳವಾರ ರಜಾದಿನ, ಬಡ್ಡಿಮಗನ ಲೈಫ್, ಟಕ್ಕರ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನು ಕಿರುತೆರೆಯ ಬಗ್ಗೆ ಹೇಳೋದಾದರೆ ರಜಿನಿಕಾಂತ್, ಗುಪ್ತಗಾಮಿನಿ, ದೇವಿ ಸೇರಿ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಇದೀಗ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಸಣ್ಣ ಪಾತ್ರವಾದರೂ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಅತ್ಯುತ್ತಮ ನಟ ಎಂದು ರೂಪಿಸಿದ್ದಾರೆ.