ಚಾರುನ ಎತ್ಕೊಂಡು ದೇವಸ್ಥಾನದ ಮೆಟ್ಟಿಲೇರ್ತಾನ ರಾಮಾಚಾರಿ : ಮದ್ವೆ ಗುಟ್ಟು ರಟ್ಟಾಗುತ್ತಾ?
ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿರುವ ರಾಮಾಚಾರಿ -ಚಾರು ಮದ್ವೆ ಕಥೆಗೆ ಒಂದು ಟ್ವಿಸ್ಟ್ ಸಿಗಲಿದೆ. ದೇವಾಲಯಕ್ಕೆ ಬಂದ ಜೋಡಿ ಹರಕೆ ತೀರಿಸುತ್ತಾರೋ? ಅಲ್ಲಿಗೆ ಬಂದಿದ್ದ ರಾಮಾಚಾರಿ ಮನೆಯವರ ಎದುರು ಇಬ್ಬರ ನಾಟಕ ಬಯಲಾಗುತ್ತಾ ಕಾದು ನೋಡಬೇಕು.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿ ರಾಮಾಚಾರಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರಾಮಾಚಾರಿ ಸೀರಿಯಲ್ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುವಂತೆ ಮಾಡಿದೆ. ಮುಂದೇನಾಗಲಿದೆ ಎಂದು ಪ್ರೇಕ್ಷಕರು ಕಾಯುವಂತೆ ಎಪಿಸೋಡ್ ಗಳನ್ನು ಬಿಡುಗಡೆಯಾಗ್ತಿದೆ.
ರಾಮಾಚಾರಿ ಮತ್ತು ಚಾರು ಜೋಡಿಯನ್ನು ಸಹ ಜನರು ತುಂಬಾ ಮೆಚ್ಚಿಕೊಂಡಿದ್ದಾರೆ. ಉತ್ತರ -ದಕ್ಷಿಣ ಧ್ರುವಗಳಂತೆ ಶತ್ರುಗಳಾಗಿದ್ದ ಈ ಜೋಡಿ, ಇದೀಗ ಕದ್ದು ಮುಚ್ಚಿ ಮದ್ವೆನೂ ಆಗಿದ್ದಾರೆ, ಮುಂದೇನಾಗಬಹುದು ಎನ್ನುವ ಕುತೂಹಲವನ್ನು ಸಹ ಮೂಡಿಸಿದ್ದಾರೆ.
ಇಂದಿನ ಎಪಿಸೋಡ್ ನಲ್ಲಿ (Ramachari serial episode) ರಾಮಚಾರಿ ಮತ್ತು ಚಾರು ಜೋಡಿ ದೇವಸ್ಥಾನಕ್ಕೆ ತೆರಳಿದ್ದು, ಅಲ್ಲಿನ ಸಂಪ್ರದಾಯದಂತೆ ರಾಮಚಾರಿ ತನ್ನ ಪತ್ನಿ ಚಾರುವನ್ನು ಎತ್ತಿಕೊಂಡು ಮೆಟ್ಟಿಲು ಹತ್ತಿ ದೇವಾಲಯಕ್ಕೆ ಹೋಗೋದಕ್ಕೆ ತಯಾರಿ ನಡೆಸಿದ್ದಾರೆ.
ಪ್ರೀತಿಯ ಗಂಡನ ಜೊತೆ ದೇಗುಲಕ್ಕೆ ಬಂದ ಚಾರು, ಈ ದೇಗುಲದ ವೈಬ್ ತುಂಬಾನೆ ಚೆನ್ನಾಗಿದೆ. ಇದೊಂದು ಸೇವೆ ಆದ್ರೆ, ನಮ್ಮಿಬ್ರ ಸಂಬಂಧ ಬಿಡಿಸಲಾರದ ಅನುಬಂಧ ಆಗುತ್ತೆ ಎಂದು ಸಂತೋಷದಿಂದ ಗಂಡನ ಬಳಿ ಹೇಳಿದ್ದಾಳೆ.
ಇಂಥಾ ಒಳ್ಳೆಯ ದೇಗುಲದ ಬಗ್ಗೆ ಹೇಳಿದ ಅಜ್ಜಿಗೆ ಥ್ಯಾಂಕ್ಸ್ ಹೇಳುತ್ತಾ ಚಾರು, ಅಪ್ಪ ಬೆಟ್ಟದ ಮಂಜಪ್ಪ, ನನ್ನ ಗಂಡನಿಗೆ ಮೇಡಂ ಮೇಡಂ ಅಂತಾ ಹೇಳೋದನ್ನು ಬಿಟ್ಟು ಪ್ರೀತಿಯಿಂದ ಹೆಂಡ್ತಿ, ಹೆಂಡ್ತಿ ಎಂದು ಹೇಳುವ ಮನಸು ಕೊಡಪ್ಪಾ ಎಂದು ದೇವರಲ್ಲಿ ಪ್ರಾರ್ಥಿಸ್ತಾಳೆ.
ಮತ್ತೊಂದೆಡೆ ರಾಮಾಚಾರಿಯ ಅಪ್ಪ, ಅಮ್ಮ, ಅಜ್ಜಿ ಸೇರಿ ಕುಟುಂಬದ ಎಲ್ಲಾ ಸದಸ್ಯರು ಅದೇ ದೇಗುಲಕ್ಕೆ ಬಂದು, ದೇವರ ದರ್ಶನ ಪಡೆಯಲು ಹೋಗುತ್ತಿದ್ದಾರೆ, ಜೊತೆಗೆ ದೇವರ ಮೂರ್ತಿಯನ್ನು ಹೊರಲು ರಾಮಚಾರಿ ಬರುವನೆಂದು ಕಾಯುತ್ತಿದ್ದಾರೆ.
ಇದ್ಯಾವುದೂ ಗೊತ್ತಿಲ್ಲದ ಚಾರು ಮತ್ತು ರಾಮಚಾರಿ ಏನು ಮಾಡ್ತಾರೆ? ರಾಮಾಚಾರಿ ಸಂಪ್ರದಾಯದಂತೆ ಹೆಂಡತಿ ಚಾರುವನ್ನು ಎತ್ತಿಕೊಂಡು ಮೆಟ್ಟಿಲು ಹತ್ತಿ ದೇಗುಲಕ್ಕೆ ಕರೆದುಕೊಂಡು ಹೋಗುತ್ತಾನಾ? ಮನೆಯವರೆಲ್ಲರಿಗೂ ಇವರಿಬ್ಬರ ಮದುವೆಯ ಗುಟ್ಟು ತಿಳಿಯುತ್ತಾ? ಸೀರಿಯಲ್ ನೋಡಿನೆ ತಿಳಿಯಬೇಕು…