ಸುಧಾರಾಣಿ- ವಿಜಯ್ ಸೂರ್ಯ ಜೊತೆಯಾಗಿ ನಟಿಸಿದ ಸೀರಿಯಲ್ ಯಾವುದು ನೆನಪಿದ್ಯಾ?
ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ನಟ ವಿಜಯ್ ಸೂರ್ಯ ಹಾಗೂ ಕನ್ನಡದ ಎವರ್ ಗ್ರೀನ್ ನಟಿ ಸುಧಾರಾಣಿ ಜೊತೆಯಾಗಿ ಒಂದು ಧಾರಾವಾಹಿಯಲ್ಲಿ ನಟಿಸಿದ್ದರು. ಆ ಸೀರಿಯಲ್ ನಲ್ಲಿ ಇಬ್ಬರನ್ನು ಜನ ಇಷ್ಟಪಟ್ಟಿದ್ದರು. ಇದೀಗ ಈ ಜೋಡಿಯನ್ನು ಮತ್ತೆ ತೆರೆ ಮೇಲೆ ಜೊತೆಯಾಗಿ ನೋಡೊದಕ್ಕೆ ಬಯಸುತ್ತಿದ್ದಾರೆ.

ಸುಧಾರಾಣಿ -ವಿಜಯ್ ಸೂರ್ಯ
ನೀವು ಸೀರಿಯಲ್ ಪ್ರೇಮಿಗಳಾಗಿದ್ರೆ, ಖಂಡಿತವಾಗಿಯೂ ನಿಮಗೆ ಇವರಿಬ್ಬರ ಹೆಸರು ಜೊತೆಗೆ ಯಾಕೆ ಬಂತು ಅನ್ನೋದು ಗೊತ್ತಿರುತ್ತೆ. ಸುಧಾರಾಣಿ (Sudharani) ಮತ್ತು ವಿಜಯ್ ಸೂರ್ಯ ಜೊತೆಯಾಗಿ ಒಂದು ಧಾರಾವಾಹಿಯಲ್ಲಿ ನಟಿಸಿದ್ದರು. ಆ ಧಾರಾವಾಹಿಯಲ್ಲಿ ಇವರಿಬ್ಬರ ಕಾಂಬಿನೇಶನ್ ಜನ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದರು. ಆ ಧಾರಾವಾಹಿ ಯಾವುದು ನೆನಪಿದ್ಯಾ?
ಜೊತೆ ಜೊತೆಯಲಿ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ನೆನಪಿದೆ ಅಲ್ವಾ? ಈ ಅನುಸಿರಿಮನೆ ಮತ್ತು ರಾಜವರ್ಧನ್ ಜೋಡಿ ಮನೆಮಾತಾಗಿತ್ತು. ಈ ಧಾರಾವಾಹಿಯಲ್ಲಿ ವಿಜಯ್ ಸೂರ್ಯ (Vijay Surya) ಮತ್ತು ಸುಧಾರಾಣಿಯವರನ್ನು ಸಹ ಜನ ಮೆಚ್ಚಿಕೊಂಡಿದ್ದರು.
ಅಮ್ಮ ಮಗನ ಜೋಡಿ
ಜೊತೆ ಜೊತೆಯಲಿ (Jothe Jotheyali) ಧಾರಾವಾಹಿಯಲ್ಲಿ ಸುಧಾರಾಣಿ ಮತ್ತು ವಿಜಯ್ ಸೂರ್ಯ ಗೆಸ್ಟ್ ಎಪಿಯರೆನ್ಸ್ ಕೊಟ್ಟಿದ್ದರು. ಒಂದೆರಡು ತಿಂಗಳು ಇವರು ನಟಿಸಿದ್ದರು. ಸುಧಾರಾಣಿ ತಾಯಿಯ ಪಾತ್ರವನ್ನು ಮಾಡಿದರೆ, ವಿಜಯ್ ಸೂರ್ಯ ಮಗನಾಗಿ ನಟಿಸಿದ್ದರು. ಜೊತೆಗೆ ಅನು ಸಿರಿಮನೆಯನ್ನು ಮದುವೆಯಾಗುವ ಹುಡುಗನಾಗಿ ನಟಿಸಿದ್ದರು.
ಮಿಸ್ ಮಾಡಿಕೊಳ್ಳುತ್ತಿದ್ದಾರೆ ಜನ
ಇದೀಗ ಸೀರಿಯಲ್ ಮುಗಿದು ಹಲವು ವರ್ಷಗಳ ಬಳಿಕ ಇಂದಿಗೂ ಜನ ಈ ಅಮ್ಮ ಮಗನ ಜೋಡಿಯನ್ನು ಮಿಸ್ ಮಾಡಿಕೊಳ್ಳುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಇವರಿಬ್ಬರು ಅಮ್ಮ ಮಗನಾಗಿ ನಟಿಸಿದ ಸೀರಿಯಲ್ ನೆನಪಿದ್ಯಾ ಎಂದು ಕೇಳುತ್ತಿದ್ದಾರೆ.
ಬಿಗ್ ಬಾಸ್ ಗೆ ಎಂಟ್ರಿ ಕೊಡ್ತಿದ್ದಾರೆ?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸುದ್ದಿ ಪ್ರಕಾರ ಸುಧಾರಾಣಿ ಹಾಗೂ ವಿಜಯ್ ಸೂರ್ಯ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ವಿಜಯ್ ಸೂರ್ಯ ಈ ಕುರಿತು ಯಾವುದೇ ರೀತಿಯ ಸ್ಪಷ್ಟನೆ ಕೊಟ್ಟಿಲ್ಲ.
ಹ್ಯಾಂಡ್ಸಮ್ ನಟ ವಿಜಯ್ ಸೂರ್ಯ
ಜೊತೆ ಜೊತೆಯಲಿ ಬಳಿಕ ವಿಜಯ್ ಸೂರ್ಯ ನಮ್ಮ ಲಚ್ಚಿ (Namma Lacchi) ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದರು. ಇದಾದ ಬಳಿಕ ಇತ್ತೀಚಿನವರೆಗೂ ನಟ ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ನಟಿಸಿದ್ದು, ಇತ್ತೀಚೆಗೆ ಸೀರಿಯಲ್ ನಿಂದ ಹೊರ ನಡೆದಿದ್ದಾರೆ. ಸೀರಿಯಲ್ ಶೀಘ್ರದಲ್ಲೇ ಮುಕ್ತಾಯ ಕಾಣುತ್ತಿದ್ದು,
ಎವರ್ ಗ್ರೀನ್ ನಾಯಕಿ ಸುಧಾರಾಣಿ
ಇನ್ನು ಕನ್ನಡದ ಎವರ್ ಗ್ರೀನ್ ನಾಯಕಿ ಸುಧಾರಾಣಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ಕಿರುತೆರೆಯಲ್ಲಿ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿಯಾಗಿ ಅದ್ಭುತವಾದ ಪಾತ್ರವನ್ನು ನಿರ್ವಹಿಸಿದ್ದರು. ಇವರು ಕೂಡ ಬಿಗ್ ಬಾಸ್ ಗೆ (Bigg Boss Kannada) ತೆರಳುವುದಾಗಿ ಸುದ್ದಿ ವೈರಲ್ ಆಗಿದ್ದು, ಆದರೆ ಸ್ವತಃ ಸುಧಾರಾಣಿ ಮೀಮ್ಸ್ ವಿಡಿಯೋ ಮೂಲಕ ತಾವು ದೊಡ್ಮನೆಗೆ ಹೋಗೋದಿಲ್ಲ ಅನ್ನೋದನ್ನ ತಿಳಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

