Ganesh to Vijay Suriya: ಕಿರುತೆರೆಗೆ ಮತ್ತೆ ಕಮ್‌ಬ್ಯಾಕ್ ಮಾಡುತ್ತಿರುವ ಸೆಲೆಬ್ರಿಟಿಗಳು!
ಹೊಸ ವರ್ಷಕ್ಕೆ ಶುರುವಾಯ್ತು ಹೊಸ ಶೋ, ಹೊಸ ಧಾರಾವಾಹಿ. ಕಮ್ ಬ್ಯಾಕ್ ಮಾಡುತ್ತಿದ್ದಾರೆ ಜನಪ್ರಿಯ ಸೆಲೆಬ್ರಿಟಿಗಳು....
ಗಣೇಶ್ : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೋಲ್ಡನ್ ಗ್ಯಾಂಗ್ ಮಾತುಕತೆ ಕಾರ್ಯಕ್ರಮದ ಮೂಲಕ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಸೂಪರ್ ಮಿನಿಟ್ ನಂತರ ದೊಡ್ಡ ಯಶಸ್ಸು ಕಾಣುತ್ತಿದೆ ಈ ಕಾರ್ಯಕ್ರಮ.
ವಿಜಯ್ ಸೂರ್ಯ : ಅಗ್ನಿಸಾಕ್ಷಿ, ಪ್ರೇಮಲೋಕ ಧಾರಾವಾಹಿ ಮೂಲಕ ಹುಡುಗಿಯರ ಮನಸ್ಸು ಕದ್ದಿರುವ ಹೀರೋ ವಿಜಯ್ ಸೂರ್ಯ ಡಾಕ್ಟರ್ ಕರ್ಣ ಧಾರಾವಾಹಿ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಸಿನಿಮಾ ಚಿತ್ರೀಕರಣದ ಜೊತೆ ಇದನ್ನು ಬ್ಯಾಲೆನ್ಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಮಯೂರಿ ಉಪಧ್ಯಾಯ: ಕನ್ನಡ ಕಿರುತೆರೆಯಲ್ಲಿ ನಡೆಯುವ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಮೊದಲು ತೀರ್ಪುಗಾರರಾಗಿ ಕಾಣಿಸಿಕೊಳ್ಳುವುದು ಮಯೂರಿ. ನೃತ್ಯದ ಬಗ್ಗೆ ಅದ್ಭುತವಾಗಿ ಜ್ಞಾನ ಇರುವ ಮಯೂರಿ ಪ್ರತಿಯೊಬ್ಬ ಸ್ಪರ್ಧಿಗೂ ಪ್ರೋತ್ಸಾಹ ನೀಡಿ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.
ಸಿರಿಜಾ: ಕನ್ನಡ ಚಿತ್ರರಂಗದಲ್ಲಿಅದ್ಭುತವಾದ ನಟಿಯಾಗಿ ಗುರುತಿಸಿಕೊಂಡಿರುವ ಸಿರಿಜಾ 'ರಾಮಚಾರಿ' ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ ಆದರೆ ಇನ್ನೂ ಸಣ್ಣ ಪುಟ್ಟ ಕ್ಲಿಪಿಂಗ್ ರಿವೀಲ್ ಮಾಡಿದ್ದಾರೆ.
ನಿರಂಜನ್ ದೇಶಪಾಂಡೆ: ಈ ಹಿಂದೆ ಲೂಸ್ ಮಾದ ಯೋಗಿ ನಡೆಸಿಕೊಡುತ್ತಿದ್ದ ಗಾನ ಬಜಾನ ಕಾರ್ಯಕ್ರಮದ ಮತ್ತೊಂದು ಸೀಸನ್‌ನ ನಿರಂಜನ್ ದೇಶಪಾಂಡೆ ನಿರೂಪಣೆ ಮಾಡುತ್ತಿದ್ದಾರೆ. ಕೊನೆಯ ಬಾರಿ 'ತುತ್ತ ಮುತ್ತ'ದಲ್ಲಿ ಕಾಣಿಸಿಕೊಂಡಿದ್ದರು.