MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡಿಯುವ ಸೀರಿಯಲ್ ನಟಿ: ಅನುಪಮಾ ಖ್ಯಾತಿಯ ರೂಪಾಲಿ ರಿಯಲ್ ಲೈಫ್‌ನಲ್ಲಿ ಹೇಗೆ?

ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡಿಯುವ ಸೀರಿಯಲ್ ನಟಿ: ಅನುಪಮಾ ಖ್ಯಾತಿಯ ರೂಪಾಲಿ ರಿಯಲ್ ಲೈಫ್‌ನಲ್ಲಿ ಹೇಗೆ?

ಹಿಂದಿ ಕಿರುತೆರೆ ಲೋಕದಲ್ಲಿ ರೂಪಾಲಿ ಗಂಗೂಲಿ ಅಚ್ಚಳಿಯದ ಹೆಸರು ಸಾರಭಾಯ್ ವರ್ಸ್‌ ಸಾರಭಾಯ್‌ನ ಮೋನಿಕಾ ಪಾತ್ರದಿಂದ ಇತ್ತೀಚಿನ ಅನುಪಮಾ ಸೀರಿಯಲ್‌ನ ಅನುಪಮಾದವರೆಗೂ ಅವರು ಗಳಿಸಿರುವ ಅಭಿಮಾನಿಗಳ ಸಂಖ್ಯೆಗೆ ಲೆಕ್ಕವಿಲ್ಲ.  ಮನೆ ಮಕ್ಕಳು ಎಂದು ಇಡೀ ಜೀವನವನ್ನೇ ಸವೆಸುವ ಹೆಣ್ಣು ಮಗಳ ಪಾತ್ರದಲ್ಲಿ ಈ ಸೀರಿಯಲ್‌ನಲ್ಲಿ ಅನುಪಮಾ ನಟಿಸುತ್ತಿದ್ದಾರೆ. 

3 Min read
Anusha Kb
Published : Oct 19 2023, 04:17 PM IST| Updated : Oct 19 2023, 04:18 PM IST
Share this Photo Gallery
  • FB
  • TW
  • Linkdin
  • Whatsapp
116
Rupali Ganguly

Rupali Ganguly

ಇತ್ತೀಚೆಗೆ ಅವರು ಪಿಂಕ್‌ವಿಲ್ಲಾದೊಂದಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಶ್ವಿನ್ ಕೆ ವರ್ಮಾ ಅವರನ್ನು ವಿವಾಹವಾಗಿರುವ ರೂಪಾಲಿ ಗಂಗೂಲಿ ಅವರಿಗೆ ರುದ್ರಾಂಶ್ ಎಂಬ ಪುತ್ರನಿದ್ದಾನೆ. ವಿವಾಹ ಹಾಗೂ ಮಗನ ಜನನದ ನಂತರ ಆರೂವರೆ ವರ್ಷಗಳ ಕಾಲ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಅನುಪಮಾ ಆ ಆರು ವರ್ಷಗಳನ್ನು ಸಂಪೂರ್ಣ ತಮ್ಮ ಕುಟುಂಬ ಪತಿ ಮಗನಿಗಾಗಿ ಮೀಸಲಿಟ್ಟಿದ್ದರು. 

216
Rupali Ganguly

Rupali Ganguly

ಲಿಂಗ ಸಮಾನತೆ ಬಗ್ಗೆ ಮಾತನಾಡಿದ ಅನುಪಮಾ,  ನಾನು ಆರೂವರೆ ವರ್ಷಗಳ ಕಾಲ ಕೆಲಸದಿಂದ ಬ್ರೇಕ್‌ ಪಡೆದು ಕುಟುಂಬದಲ್ಲಿ ಬೆರೆತು ಹೋಗಿದ್ದೆ. ಭಾರತದಲ್ಲಿ ಇದು ಪ್ರತಿಯೊಬ್ಬ ಮಹಿಳೆಯೂ ಬದುಕುವ ರೀತಿ. ನಾನು ಕೇವಲ ಗೃಹಿಣಿಯಾಗಿದ್ದ ಈ  ಆರೂವರೆ ವರ್ಷಗಳ ಕಾಲ ನನ್ನ ಬದುಕು ನನಗೆ ಹೆಚ್ಚು ಒತ್ತಡದಿಂದ ಕೂಡಿದ, ಹೆಚ್ಚು ಕೆಲಸದಿಂದ ಕೂಡಿದ ದಿನಗಳಾಗಿದ್ದವು. 

316
Rupali Ganguly

Rupali Ganguly

ಮನೆಯಲ್ಲಿದ್ದ ಅಷ್ಟು ದಿನವೂ ನಾನು ಎಲ್ಲರೂ ಏಳುವ ಮೊದಲೇ ಬೇಗ ಏಳುತ್ತಿದ್ದೆ. ಬೇಗ ಏಳಬೇಕು ಅಂತ ಯಾರೂ ನನಗೆ ಹೇಳಿರಲಿಲ್ಲ. ನನ್ನ ಪತಿ ನಿಜವಾಗಿಯೂ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಆದರೆ ಗೃಹಿಣಿ ಎನಿಸಿದ ಕೂಡಲೇ ಈ ಜೀವನಶೈಲಿ ನಮಗೆ ಸಹಜವಾಗಿಯೇ ಬರುತ್ತದೆ.  ನಾವು ಅದನ್ನು ಮಾಡಲೇಬೇಕು ಎಂದು ನಮಗೆ ನಾವೇ ಶರತ್ತು ವಿಧಿಸಿಕೊಳ್ಳುತ್ತೇವೆ ಎಂದರು.

416
Rupali Ganguly

Rupali Ganguly

ಮನೆಗೆಲಸವೆಲ್ಲವನ್ನು ಹೆಣ್ಣೆ ಮಾಡಬೇಕೆಂಬ  ನಿಯಮಗಳನ್ನು ಮೀರಿ ತನ್ನ ಪತಿ ಯಾವುದೇ ತ್ರಾಸವಿಲ್ಲದೇ ಮನೆಯ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಅಡುಗೆ ಮಾಡುವುದರಿಂದ ಹಿಡಿದು ಮಗುವನ್ನು ನೋಡಿಕೊಳ್ಳುವವರೆಗೆ ಅವರೇ ಗೃಹಿಣಿಯಂತಾಗಿದ್ದಾರೆ ಎಂದು ರೂಪಾಲಿ ಹೇಳಿಕೊಂಡಿದ್ದಾರೆ. 

516
Rupali Ganguly

Rupali Ganguly

ಇಂದು ನನ್ನ ಪತಿಯೇ ಗೃಹಣಿಯ ಪಾತ್ರ ನಿರ್ವಹಿಸುತ್ತಿದ್ದಾರೆ ಅವರ ಬಗ್ಗೆ ನನಗೆ ಖುಷಿ ಇದೆ. ಅವರ ಈ ಉದಾರತೆಯಿಂದ ದಿನಕ್ಕೆ ಕನಿಷ್ಠ 12 ಗಂಟೆ ಕೆಲಸ ಮಾಡುವ ನಾನು ಕುಟುಂಬದೊಂದಿಗೂ ಸಮಯ ಕಳೆಯುವುದಕ್ಕೆ ಸಾಧ್ಯವಾಗುತ್ತಿದೆ ಎಂದಿದ್ದಾರೆ ರೂಪಾಲಿ

616
Rupali Ganguly

Rupali Ganguly

12 ಗಂಟೆ ಕೆಲಸ ಒಂದು ಗಂಟೆ ಹೋಗುವುದಕ್ಕೆ ಮತ್ತೊಂದು ಗಂಟೆ ಮರಳಿ ಬರಲು ಎರಡು ಗಂಟೆ ಪ್ರಯಾಣದಲ್ಲಿ ಕಳೆಯುವುದರಿಂದ ಬಹುತೇಕ 14 ಗಂಟೆ ಹೊರಗೆಯೇ ಕಳೆದು ಹೋಗುತ್ತದೆ. ನಂತರ ಮನೆ ತಲುಪಿ ಮಗ ಗಂಡನೊಂದಿಗೆ ಕಾಲ ಕಳೆಯುವೆ ಎನ್ನುತ್ತಾರೆ ರೂಪಾಲಿ

716
Rupali Ganguly

Rupali Ganguly

ಅಂದಹಾಗೆ ಹಿಂದಿಯ ಖ್ಯಾತ ಧಾರಾವಾಹಿ ಅನುಪಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ನಟಿ ರೂಪಾಲಿ ಗಂಗೂಲಿ ಅವರು ಧಾರಾವಾಹಿಯ ಒಂದು ಸಂಚಿಕೆಗೆ ಬರೋಬ್ಬರಿ 30 ಲಕ್ಷ ರು. ಸಂಭಾವನೆ ಪಡೆಯುತ್ತಾರೆ.  ಈ ಮೂಲಕ ಇವರು ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಧಾರಾವಾಹಿ ನಟಿಯಾಗಿದ್ದಾರೆ. 

816
Rupali Ganguly

Rupali Ganguly

ಚಿತ್ರ ನಿರ್ದೇಶಕ ಅನೀಲ್‌ ಗಂಗೂಲಿ ಪುತ್ರಿಯಾಗಿರುವ ರೂಪಾಲಿ ಇವರು ಬಾಲನಟಿಯಾಗಿ ವೃತ್ತಿಗೆ ಪಾದಾರ್ಪಣೆ ಮಾಡಿದ್ದರು. ಈ ಹಿಂದೆ ನಟ ಸಲ್ಮಾನ್‌ ಖಾನ್‌ ಹಿಂದಿ ಬಿಗ್‌ ಬಾಸ್‌ ಸೀಸನ್‌ 16ಕ್ಕೆ 1,000 ಕೋಟಿ ರು. ಸಂಭಾವನೆ ಪಡೆದಿದ್ದರು ಎನ್ನಲಾಗಿದೆ.

916
Rupali Ganguly

Rupali Ganguly

ರೂಪಾಲಿ (Rupali Ganguly) ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಅವರು ಜನಿಸಿದ್ದು ಕೋಲ್ಕತ್ತಾದಲ್ಲಿ. 5 ಏಪ್ರಿಲ್ 1977 ರಂದು  ಜನಿಸಿದ ರೂಪಾಲಿ 7 ವರ್ಷದವರಿದ್ದಾಗ  ನಟನಾ ಜಗತ್ತಿಗೆ ಪ್ರವೇಶಿಸಿದ್ದರು. ಆಕೆ ಮೊದಲು ಕಾಣಿಸಿಕೊಂಡಿದ್ದು ಅನಿಲ್ ಕಪೂರ್ ಮತ್ತು ಅಮೃತಾ ಸಿಂಗ್ ಅವರ ಸಾಹೇಬ್ ಚಿತ್ರದಲ್ಲಿ. 

1016
Rupali Ganguly

Rupali Ganguly

ರೂಪಾಲಿ ಅವರ ತಂದೆ ಈ ಚಿತ್ರದ ನಿರ್ದೇಶಕರಾಗಿದ್ದರು. ರೂಪಾಲಿ ತನ್ನ ವೃತ್ತಿಜೀವನದಲ್ಲಿ ಅನೇಕ ಪ್ರಸಿದ್ಧ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಮದುವೆಯಾದ ನಂತರ ನಟನಾ ಲೋಕದಿಂದ ಕೊಂಚ ವಿರಾಮ ತೆಗೆದುಕೊಂಡಿದ್ದರು. ಅವರು ಉದ್ಯಮಿ ಅಶ್ವಿನ್ ವರ್ಮಾ ಅವರನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದರು. 

1116
Rupali Ganguly

Rupali Ganguly

ತಮ್ಮ ಮದುವೆಗೆ 12 ವರ್ಷಗಳ ಮೊದಲೇ ಉದ್ಯಮಿ ಅಶ್ವಿನ್ ವರ್ಮಾ  (Ashwin Verma) ಹಾಗೂ ರೂಪಾ ಗಂಗೂಲಿ (Rupa Ganguli) ಪರಸ್ಪರ ಪರಿಚಯಸ್ಥರಾಗಿದ್ದರು. ಇಬ್ಬರ ನಡುವೆ ಪ್ರೀತಿಯಿಲ್ಲದಿದ್ದರೂ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು.

1216
Rupali Ganguly

Rupali Ganguly

ನಮ್ಮ ನಡುವೆ ಸಾಕಷ್ಟು ಅಂಡರ್‌ಸ್ಟಾಂಡಿಗ್‌ ಇತ್ತು, ಹಾಗಾಗಿ ನಾವು ಒಬ್ಬರನ್ನೊಬ್ಬರು ಪ್ರಪೋಸ್‌ ಮಾಡಲಿಲ್ಲ. ಒಂದು ದಿನ ಮದುವೆಯಾಗಲು ನಿರ್ಧರಿಸಿದೆ ಎಂದು ಅಶ್ವಿನ್ ಜೊತೆಗಿನ ಸಂಬಂಧದ ಬಗ್ಗೆ ರೂಪಾಲಿ ಹೇಳಿಕೊಂಡಿದ್ದಾರೆ

1316
Rupali Ganguly

Rupali Ganguly

ಮದುವೆಯ ನಂತರ ಗರ್ಭಿಣಿಯಾಗಲು (Pregnancy) ರೂಪಾಲಿ ಗಂಗೂಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಅವರಿಗೆ ಥೈರಾಯ್ಡ್ ಸಮಸ್ಯೆ ಇತ್ತು, ಇದರಿಂದಾಗಿ ಅವರು ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ಮತ್ತು ಈ ವಿಷಯದ ಬಗ್ಗೆ ಅವರು ಬಹಳ ಚಿಂತೆ ಮಾಡುತ್ತಿದ್ದರು.

1416
Rupali Ganguly

Rupali Ganguly

ಆದರೆ, ವೈದ್ಯರ ಸಲಹೆಯನ್ನು ಪಾಲಿಸಿ ತುಂಬಾ ಕಷ್ಟದಲ್ಲಿ ಗರ್ಭಿಣಿಯಾದೆ ಎಂದು ರೂಪಾಲಿ ಗಂಗೂಲಿ ಹೇಳಿಕೊಂಡಿದ್ದರು ಮದುವೆಯಾದ ಸುಮಾರು 2-3 ವರ್ಷಗಳ ನಂತರ ಅವಳು ರುದ್ರಾಂಶ್ ಎಂಬ ಮಗನಿಗೆ ಜನ್ಮ ನೀಡಿದ್ದರು. 

1516
Rupali Ganguly

Rupali Ganguly

ಮಗನ ಜನನದ ನಂತರ, ರೂಪಾಲಿ ಗಂಗೂಲಿ ನಟನೆಯಿಂದ ವಿರಾಮ ತೆಗೆದುಕೊಂಡು ತಮ್ಮ ಕುಟುಂಬಕ್ಕೆ ಆದ್ಯತೆ ನೀಡುತ್ತಾ, ಮಗನ ಪಾಲನೆಯಲ್ಲಿ ಸಮಯ ಕಳೆದಿದ್ದರು

1616
Rupali Ganguly

Rupali Ganguly

ನಂತರ ಇದ್ದಕ್ಕಿದ್ದಂತೆ ಅನುಪಮಾ ಧಾರಾವಾಹಿಯ ಆಫರ್ ಬಂದಿದ್ದರಿಂದ ಆಕೆ ಮತ್ತೆ ಟಿವಿಗೆ ಬಂದರು. ಮೇರಾ ಯಾರ್ ಮೇರಾ ದುಷ್ಮನ್ ಚಿತ್ರದಲ್ಲಿ ರೂಪಾಲಿ ಗಂಗೂಲಿ ಬಾಲ ಕಲಾವಿದೆಯಾಗಿ ಕೆಲಸ ಮಾಡಿದ್ದಾರೆ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved