- Home
- Entertainment
- TV Talk
- ಸುಶ್ಮಿತ್ ಜೈನ್ ಜೊತೆಗಿರುವವರು ಯಾರು ಗೆಸ್ ಮಾಡಿ... ಹೌದು… ಇವರು ಅವರೇ ಜಿಮ್ ಸೀನಾ ಅಮ್ಮ!
ಸುಶ್ಮಿತ್ ಜೈನ್ ಜೊತೆಗಿರುವವರು ಯಾರು ಗೆಸ್ ಮಾಡಿ... ಹೌದು… ಇವರು ಅವರೇ ಜಿಮ್ ಸೀನಾ ಅಮ್ಮ!
ಅಣ್ಣಯ್ಯ ಸೀರಿಯಲ್ ನಟ ಸುಶ್ಮಿತ್ ಜೈನ್ ಜೊತೆ ಇರುವವರು ಯಾರು ಎಂದು ನಿಮಗೂ ಅಚ್ಚರಿಯಾಗಿರಬಹುದು ಅಲ್ವಾ? ಸರಿಯಾಗಿ ನೋಡಿ… ಇವರು ಅವರೇ ಜಿಮ್ ಸೀನಾ ಅಮ್ಮ.

ಈ ಫೋಟೊ ನೋಡಿದ ತಕ್ಷಣ ನೀವು ಅಣ್ಣಯ್ಯ ಸೀರಿಯಲ್ ಜಿಮ್ ಸೀನಾ ಖ್ಯಾತಿಯ ಸುಶ್ಮಿತ್ ಜೈನ್ ಅವರನ್ನು ಗುರುತು ಹಿಡಿಯುತ್ತೀರಿ ಅಲ್ವಾ? ಆದರೆ ಅವರ ಜೊತೆಗೆ ಇರುವ ಈ ಹುಡುಗಿ ಯಾರಾಪ್ಪಾ ಎಂದು ಯೋಚನೆ ಮಾಡ್ತಿದ್ದೀರಾ? ಸರಿಯಾಗಿ ನೋಡಿ ಗೆಸ್ ಮಾಡಿ ಯಾರು ಎಂದು.
ಇನ್ನೂ ಗೊತ್ತಾಗ್ಲಿಲ್ಲಾ ಅಂದ್ರೆ ನಾವೇ ಹೇಳ್ತೀವಿ ನೋಡಿ… ಜಿಮ್ ಸೀನಾ ಅಂದ್ರೆ ಸುಶ್ಮಿತ್ ಜೈನ್ ಜೊತೆಗಿರೋದು ಬೇರಾರು ಧಾರಾವಾಹಿಯಲ್ಲಿ ಜಿಮ್ ಸೀನಾ ತಾಯಿಯ ಪಾತ್ರದಲ್ಲಿ, ಸ್ವಲ್ಪ ಕಾಮಿಡಿ ಟಚ್ ಇರುವ ಲೀಲಾ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಶ್ರುತಿ ಕುಶಾಲ್.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಹಾಗೂ ಟಿಆರ್’ಪಿಯಲ್ಲೂ ನಂ 1 ಇರುವ ಧಾರಾವಾಹಿ ಅಣ್ಣಯ್ಯ. ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಸಹ ನೆನಪಿಟ್ಟುಕೊಳ್ಳುವಂತದ್ದೇ, ಅದು ನಾಯಕ, ನಾಯಕಿ ಇರಲಿ, ಪೋಷಕ ಪಾತ್ರಗಳೇ ಇರಲಿ ಎಲ್ಲವೂ ಫೇಮಸ್.
ಅದರಲ್ಲೂ ಜಿಮ್ ಸೀನಾ ಹಾಗೂ ತನ್ನ ಮಗನ ಎಲ್ಲಾ ಕೆಲಸಕ್ಕೆ ಸಾತ್ ನೀಡುತ್ತಾ, ಕೆಲಸಕ್ಕೆ ಹೋಗದ ಮಗನಿಗೆ ತಾನು ಉಳಿಸಿದ ದುಡ್ಡನ್ನು ನೀಡುತ್ತಾ, ಮುದ್ದು ಮಾಡಿ ಬೆಳೆಸಿ, ತನಗೆ ಸೊಸೆಯಾಗಿ ಬರೋಳು ಹೀರೋಯಿನ್ ಥರ, ತೆಳ್ಳಗೆ, ಬೆಳ್ಳಗೆ ಇರಬೇಕು ಎಂದು ಬಯಸುವ ತಾಯಿ ಲೀಲಾ ಪಾತ್ರ ಜನರಿಗೆ ಸಿಕ್ಕಾಪಟ್ಟೆ ಇಷ್ಟ.
ಲೀಲಾ ಪಾತ್ರದ ಮೂಲಕ ತಾಯಿಯಾಗಿ, ಕಾಮಿಡಿ ಪಂಚ್ ಕೊಡುತ್ತಾ, ಗಂಡ ಮಾದಪ್ಪಣ್ಣ ಹೇಳಿದ ಹಾಗೆ ಕೇಳುವ ಹೆಂಡತಿಯಾಗಿ, ಮಗನನ್ನು ಅತಿಯಾದ ಮುದ್ದಿನಿಂದ ಸಾಕುವ ತಾಯಿಯಾಗಿ ಶ್ರುತಿ ಕುಶಾಲ್ ಅದ್ಭುತವಾಗಿ ನಟಿಸುತ್ತಿದ್ದಾರೆ. ಇವರು ರಂಗ ಭೂಮಿ ಕಲಾವಿದರು ಹಾಗೂ ಕ್ಲಾಸಿಕಲ್ ಡ್ಯಾನ್ಸರ್ ಕೂಡ ಹೌದು.
ಇದು ಶ್ರುತಿಯವರ ಮೊದಲ ಸೀರಿಯಲ್ ಅಲ್ಲ, ಆದರೆ, ಅಣ್ಣಯ್ಯ ಸೀರಿಯಲ್ ಮೂಲಕ ಇವರಿಗೆ ಹೆಚ್ಚಿನ ಜನಪ್ರಿಯತೆ ಸಿಕ್ಕಿದೆ. ಶ್ರುತಿ ಇದಕ್ಕೂ ಮುನ್ನ ಯುಗಾಂತರ, ಪುಣ್ಯವತಿ, ನಿನ್ನ ಜೊತೆ ನನ್ನ ಕಥೆ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ಶುರುವಾದ ಭಾರ್ಗವಿ ಎಲ್ ಎಲ್ ಬಿ ಧಾರಾವಾಹಿಯಲ್ಲೂ ಇವರು ನಟಿಸುತ್ತಿದ್ದಾರೆ.
ಧಾರಾವಾಹಿಯಲ್ಲಿ ವಯಸ್ಸಾದವರಂತೆ ಸೀರೆಯುಟ್ಟು, ತಲೆತುಂಬಾ ಹೂವು ಮುಡಿದು, ಹಣೆ ತುಂಬಾ ಕುಂಕುಮ ಹಚ್ಚುವ ಲೀಲಾ, ನಿಜ ಜೀವನದಲ್ಲಿ ಸಂಪೂರ್ಣ ವಿಭಿನ್ನ. ತುಂಬಾನೆ ಯಂಗ್ ಆಗಿರುವ ಶ್ರುತಿ ವಯಸ್ಸಿಗೆ ಮೀರಿದ ಅಭಿನಯ ಮಾಡುತ್ತಿದ್ದಾರೆ. ಇವರಿಗೆ ಇರೋದು 6-7 ವರ್ಷದ ಪುಟ್ಟ ಮಗಳು. ಶೃತಿ ರಂಗಭೂಮಿ ಕಲಾವಿದೆಯಾಗಿದ್ದು, ಅದಕ್ಕಾಗಿ ಪ್ರತಿಯೊಂದು ಪಾತ್ರಗಳಿಗೂ ಜೀವ ತುಂಬಿ ನಟಿಸುತ್ತಾರೆ ಶೃತಿ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಶ್ರುತಿ ಅಲ್ಲಿ ವಿವಿಧ ಹಾಡುಗಳಿಗೆ, ಡ್ಯಾನ್ಸ್, ರೀಲ್ಸ್ ಮಾಡುತ್ತಾ ವಿಡಿಯೋ ಪೋಸ್ಟ್ ಮಾಡುತ್ತಿರುತ್ತಾರೆ. ಈ ವಿಡಿಯೋ ನೋಡಿದ್ರೆ, ಇವರೇನಾ ಅವರು ಎನ್ನುವಷ್ಟು ವಿಭಿನ್ನವಾಗಿ ಕಾಣುತ್ತಾರೆ. ಇದನ್ನು ನೋಡಿ ಜನ ಕೂಡ ಹುಡುಗಿಯನ್ನು ಆಂಟಿಯನ್ನಾಗಿ ತೋರಿಸ್ತೀರಲ್ಲಾ ಯಾಕೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.