ಗಗನ ಭಾರಿ ಭರ್ಜರಿ ಆಫರ್ ನೀಡಿದ ಝೀ…. ಹೊಸ ಸೀರಿಯಲ್ ಗೆ ನಾಯಕಿಯಾದ ಮಹಾನಟಿ
ಮಹಾನಟಿ ರಿಯಾಲಿಟಿ ಶೋ ಸ್ಪರ್ಧಿ ಗಗನ ಭಾರಿಗೆ ಝೀ ಭರ್ಜರಿ ಆಫರ್ ನೀಡಿದ್ದು, ಸದ್ಯದಲ್ಲೇ ಹೊಸ ಚಾನೆಲ್ ನಲ್ಲಿ ಪ್ರಸಾರವಾಗಲಿರುವ ಸೀರಿಯಲ್ ಗೆ ನಾಯಕಿಯಾಗಿ ನಿಮ್ಮ ಮುಂದೆ ಬರಲಿದ್ದಾರೆ ಗಗನ.

ಝೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು ಮಹಾನಟಿ. ಇದೀಗ ಎರಡನೇ ಸೀಸನ್ ನಡೆಯುತ್ತಿದೆ. ಮೊದಲನೇ ಸೀಸನ್ ನಲ್ಲಿ ವಿನ್ನರ್ ಪ್ರಿಯಾಂಕಾ ಆಚಾರ್ ಆದರೂ ಸಹ, ಹೆಚ್ಚಿನ ಜನಪ್ರಿಯತೆಯನ್ನು ಪಡೆದವರು ಗಗನ ಭಾರಿ.
ಮಹಾನಟಿ ರಿಯಾಲಿಟಿ ಶೋನಲ್ಲಿ ( Mahanati reality show)ತಮ್ಮ ಮುಗ್ಧ ಮಾತುಗಳಿಂದಲೇ ಜನಪ್ರಿಯತೆ ಪಡೆದರು ಗಗನ. ಆದಾದ ಬಳಿಕ ನಿರಂತರವಾಗಿ ಒಂದಲ್ಲ ಒಂದು ಶೋಗಳಲ್ಲಿ ಗಗನಾಗೆ ಅವಕಾಶಗಳು ದೊರೆಯುತ್ತಾ ಬಂದವು. ಝೀ ಕನ್ನಡದ ಅವಕಾಶಗಳಿಂದಾಗಿ ಗಗನಾ ತಾವು ಕೆಲಸ ಮಾಡುತ್ತಿದ್ದ ಐಟಿ ಕಂಪನಿಯ ಕೆಲಸವನ್ನೇ ಬಿಟ್ಟಿದ್ದರು.
ಮಹಾನಟಿ ಬಳಿಕ ಗಗನಾ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ನೃತ್ಯ ಮಾಡುವ ಮೂಲಕ ಜಲಕ್ ತೋರಿಸಿದರು, ಬಳಿಕ ಸೀರಿಯಲ್ ಗಳಲ್ಲಿ ಗೆಸ್ಟ್ ಎಪಿಯರಿನ್ಸ್ ಕೂಡ ಮಾಡಿದ್ದರು, ಅಷ್ಟೇ ಅಲ್ಲ, ಸರಿಗಮಪದಲ್ಲಿ ಹಾಡು ಕೂಡ ಹಾಡಿದ್ದರು, ಇತ್ತೀಚಿಗಷ್ಟೇ ಮುಕ್ತಾಯವಾದ ಭರ್ಜರಿ ಬ್ಯಾಚುಲರ್ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ (Drone Prathap) ಮೆಂಟರ್ ಕೂಡ ಆಗಿದ್ದರು.
ಹೀಗೆ ಝೀ ಕನ್ನಡದಲ್ಲಿ ಒಂದು ವರ್ಷದಿಂದ ಪೂರ್ತಿಯಾಗಿ ಬ್ಯುಸಿಯಾಗಿದ್ದ ನಟಿ ಗಗನಾ ಭಾರಿ (Gagana Bhari) ಅವರಿಗೆ ಝೀ ಪವರ್ ದೊಡ್ಡದೊಂದು ಆಫರ್ ನೀಡಿದೆ. ಝೀ ಪವರ್ ನಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿರುವ ಧಾರಾವಾಹಿಯೊಂದಕ್ಕೆ ಗಗನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಈಗಾಗಲೇ ಗಗನಾ ಹೊಸ ಸೀರಿಯಲ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ವೈರಲ್ ಆಗುತ್ತಿವೆ. ಅಂದ ಹಾಗೇ ಗಗನಾ ನಟಿಸುತ್ತಿರುವ ಧಾರಾವಾಹಿ ರಾಜಕುಮಾರಿ ಅನ್ನೋದು ಗೊತ್ತಾಗಿದೆ. ಇದು ಯಾವಾಗ ಆರಂಭವಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.
ಇನ್ನು ರಾಜಕುಮಾರಿ ಧಾರಾವಾಹಿ ಝೀ ಬಾಂಗ್ಲಾದ ಮಿಥೈ ಸೀರಿಯಲ್ ರಿಮೇಕ್ ಇದು ಎಂದು ಹೇಳಲಾಗುತ್ತಿದೆ. ಈ ಧಾರಾವಾಹಿಯಲ್ಲಿ ಗಗನ ಲಂಗ ದಾವಣಿ ಧರಿಸಿ, ಎರಡು ಜಡೆ ಹಾಕಿರೋದು ವೈರಲ್ ಅಗಿರುವ ಫೋಟೊದಲ್ಲಿ ಕಾಣಿಸುತ್ತಿದೆ. ಅಂತೂ ಇಂತೂ ಝೀ ವಾಹಿನಿಯಿಂದ ಮಹಾನಟಿಯ ಗಗನಾ ಭರ್ಜರಿ ಆಫರ್ ಸಿಕ್ಕಿರೋದಂತೂ ನಿಜಾ.