- Home
- Entertainment
- TV Talk
- Brahmagantu ಸೀರಿಯಲ್ ಮುಗಿವ ಹೊತ್ತಲ್ಲೇ ವೀಕ್ಷಕರಿಗೆ ಗುಡ್ನ್ಯೂಸ್ ಕೊಟ್ಟ ದೀಪಾ, ಚಿರು
Brahmagantu ಸೀರಿಯಲ್ ಮುಗಿವ ಹೊತ್ತಲ್ಲೇ ವೀಕ್ಷಕರಿಗೆ ಗುಡ್ನ್ಯೂಸ್ ಕೊಟ್ಟ ದೀಪಾ, ಚಿರು
ಎರಡು ವರ್ಷಗಳ ಕಾಲ ಪ್ರಸಾರವಾದ 'ಬ್ರಹ್ಮಗಂಟು' ಸೀರಿಯಲ್ ಮುಕ್ತಾಯದ ಹಂತ ತಲುಪಿದೆ. ದೀಪಾಳ ಸತ್ಯ ಚಿರುಗೆ ತಿಳಿದಿದ್ದು, ಸೌಂದರ್ಯಳ ಬಣ್ಣ ಬಯಲಾಗಿದೆ. ಸೀರಿಯಲ್ ಅಂತ್ಯದ ಕುರಿತು ಮತ್ತು ಮುಂದಿನ ಪ್ರಾಜೆಕ್ಟ್ ಬಗ್ಗೆ ನಟರು ವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ.

ಬ್ರಹ್ಮಗಂಟು ಸೀರಿಯಲ್ ಮುಕ್ತಾಯ
ಜೂನ್ 17, 2024ರಲ್ಲಿ ಮೊದಲ ಕಂತು ಪ್ರಸಾರ ಮಾಡಿದ್ದ ಬ್ರಹ್ಮಗಂಟು ಸೀರಿಯಲ್ (Brahmagantu Serial) ಇದಾಗಲೇ ಎರಡು ವರ್ಷ ಪೂರೈಸಿದೆ. ಟಾಪ್ ಸೀರಿಯಲ್‌ಗಳಲ್ಲಿ ಒಂದೆನಿಸಿದ್ದ ಬ್ರಹ್ಮಗಂಟು ಮುಗಿಯಲು ಇನ್ನೇನು ಕೆಲವೇ ಎಪಿಸೋಡ್‌ಗಳಿವೆ. ಈಚೆಗಷ್ಟೇ ನಿಧನರಾದ ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್ ಅವರ ನಿರ್ಮಾಣದಲ್ಲಿ ಈ ಸೀರಿಯಲ್ ಮೂಡಿಬಂದಿದೆ ಈ ಸೀರಿಯಲ್.
ಅಂದುಕೊಂಡಂತೆ ಮುಕ್ತಾಯ
ಎಲ್ಲರೂ ಅಂದುಕೊಂಡ ರೀತಿಯಲ್ಲಿಯೇ ಸೀರಿಯಲ್ ಮುಗಿಯುತ್ತಿದೆ. ಇದರಲ್ಲಿ ಮಹಾ ಟ್ವಿಸ್ಟ್ ಏನೂ ಇಲ್ಲ. ಇದಾಗಲೇ ಚಿರುಗೆ ದಿಶಾನೇ ದೀಪಾ ಎನ್ನುವ ಸತ್ಯ ತಿಳಿದಿದ್ದು, ಸೌಂದರ್ಯಳ ಬಣ್ಣ ಬಯಲಾಗಿದೆ. ಅವಳದ್ದೇ ಭಾಷೆಯಲ್ಲಿ ಅವಳಿಗೆ ಬುದ್ಧಿ ಕಲಿಸುತ್ತಿದ್ದಾನೆ ಚಿರು.
ಸತ್ಯ ತಿಳಿದ ಚಿರು
ಸತ್ಯ ಗೊತ್ತಾಗಬೇಕಿದ್ದುದು ಸೌಂದರ್ಯಗೆ ಮಾತ್ರವಾಗಿತ್ತು. ಅವಳಿಗೆ ತನ್ನ ಗಂಡ ಬದುಕಿರುವ ವಿಷ್ಯ, ದಿಶಾಳೇ ದೀಪಾ ಎನ್ನೋ ವಿಷಯವೂ ತಿಳಿದಿದೆ. ಚಿರು ಎಲ್ಲರ ಮುಂದೆ ದೀಪಾ ಮತ್ತು ಸೌಂದರ್ಯಳ ರಹಸ್ಯ ತೆರೆದಿಟ್ಟಿದ್ದಾನೆ. ಬೇರೆ ದಾರಿ ಕಾಣದೇ ಸೌಂದರ್ಯ ಕುಸಿದು ಬಿದ್ದಿದ್ದಾಳೆ.
ಮುಂದೇನು?
ಇನ್ನು ಚಿರು ಸೌಂದರ್ಯಳನ್ನು ಜೈಲಿಗೆ ಕಳಿಸ್ತಾನಾ ಅಥವಾ ಮನೆಬಿಟ್ಟು ಹಾಕ್ತಾನಾ ಎನ್ನುವುದು ಒಂದು ಟ್ವಿಸ್ಟ್ ಇದೆ ಬಿಟ್ಟರೆ, ಎಲ್ಲವೂ ಅಂದುಕೊಂಡಂತೆಯೇ ನಡೆದಿದೆ.
ಎಲ್ಲರಿಗೂ ಧನ್ಯವಾದ
ಇದರ ನಡುವೆಯೇ, ದೀಪಾ, ಸೌಂದರ್ಯ ಮತ್ತು ಚಿರು ಬಂದು ವೀಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇದೇ ವೇಳೆ ಅವರು ಗುಡ್ನ್ಯೂಸ್ ಕೂಡ ಕೊಟ್ಟಿದ್ದಾರೆ. ಮತ್ತೊಂದು ಪ್ರಾಜೆಕ್ಟ್ ಜೊತೆ ನಿಮ್ಮ ಮುಂದೆ ಬರುವುದಾಗಿ ತಿಳಿಸಿದ್ದಾರೆ.
ವೀಕ್ಷಕರ ಕಮೆಂಟ್ಸ್
ಈ ಸೀರಿಯಲ್ ಅನ್ನು ಮಿಸ್ ಮಾಡಿಕೊಳ್ತಿರೋದಾಗಿ ಹಲವರುಕಮೆಂಟ್ಸ್ ಮೂಲಕ ತಿಳಿಸುತ್ತಿದ್ದಾರೆ. ಇದೇ ವೇಳೆ ದೀಪಾಗೆ ವಾಟರ್ಪ್ರೂಫ್ ಮೇಕಪ್ ಯಾಕೆ ಸಿಗಲಿಲ್ಲ. ಸ್ವಲ್ಪ ನೀರು ಹಾಕಿದ್ರೂ ಮೇಕಪ್ ಹೋಗ್ತಿಗ್ತಲ್ಲಾ ಎಂದು ಕಾಲೆಳೆಯುತ್ತಿದ್ದಾರೆ. ಹೀಗೆ ಮಾಡದಿದ್ದರೆ ಸೀರಿಯಲ್ ಮುಂದೆ ಹೋಗ್ತಿರಲಿಲ್ಲ ಎನ್ನೋದು ಅವರಿಗೆ ಗೊತ್ತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

