ಮೋಕ್ಷಿತಾ ಕೈ ಸೇರಿದ ಬಿಗ್ ಬಾಸ್ ಟ್ರೋಫಿ; ಫೋಟೋ ನೋಡಿ ವೀಕ್ಷಕರು ಶಾಕ್
ಮೋಕ್ಷಿತಾ ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಅಭಿಮಾನಿಗಳು ಕ್ರಿಯೇಟ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಪಾರು ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಪರಿಚಯವಾದ ಸೋನು ಶ್ರೀನಿವಾಸ್ ಗೌಡ ಇದೀಗ ಬಿಗ್ ಬಾಸ್ ಸೀಸನ್ 11ರ ಫಿನಾಲೆ ವಾರಕ್ಕೆ ಕಾಲಿಟ್ಟಿರುವ ಸ್ಪರ್ಧಿ.
ಕೇವಲ ಮೂರು ದಿನಗಳಲ್ಲಿ ಬಿಗ್ ಬಾಸ್ ಫಿನಾಲೆ ಆರಂಭವಾಗಲಿದ್ದು ಸ್ಪರ್ಧಿಗಳು ವಿನ್ನರ್ ಟ್ರೋಫಿ ಹೇಗಿದೆ ಎಂದು ನೋಡಲು ಬಿಗ್ ಬಾಸ್ ಅವಕಾಶ ಮಾಡಿಕೊಟ್ಟಿದ್ದರು.
ಈ ವರ್ಷದ ಬಿಗ್ ಬಾಸ್ ವಿನ್ನರ್ ಟ್ರೋಫಿಯಲ್ಲಿ ಎರಡು ರೆಕ್ಕೆ ಇದೆ. ಇದನ್ನು ನೋಡಿ ಗೆಲ್ಲಲೇ ಬೇಕು ಎಂದು ಧೈರ್ಯ ತೆಗೆದುಕೊಂಡ ಮೋಕ್ಷಿತಾಗೆ ಬಿಗ್ ಸಪೋರ್ಟ್ ಆಗಿ ನಿಂತಿರುವುದು ಅಭಿಮಾನಿಗಳು.
ಮೋಕ್ಷಿತಾ ಪೈ ವೀಕೆಂಡ್‌ನಲ್ಲಿ ಧರಿಸಿರುವ ಗ್ರ್ಯಾಂಡ್ ಡ್ರೆಸ್‌ನಲ್ಲಿ ನಡೆದುಕೊಂಡು ಹೋಗುತ್ತಿರುವ ಫೋಟೋಗೆ ಟ್ರೋಫಿ ಫೋಟೋವನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ.
ಅಯ್ಯೋ ವಿನ್ನರ್ ಮಾತ್ರ ಬಿಗ್ ಬಾಸ್ ಟ್ರೋಫಿ ಮುಟ್ಟಬೇಕು ಹೇಗೆ ಮೋಕ್ಷಿತಾ ಅದನ್ನು ಎತ್ತಿಕೊಂಡು ಓಡಾಡುತ್ತಿದ್ದಾರೆ ಎಂದು ಕೆಲವರು ಕಿಡಿಕಾರಿದ್ದಾರೆ. ಆದರೆ ಇದು ಗ್ರಾಫಿಕ್ ಫೋಟೋ.
ಈ ವರ್ಷ ಮಹಿಳಾ ಸ್ಪರ್ಧಿ ಬಿಗ್ ಬಾಸ್ ವಿನ್ನರ್ ಆಗಬೇಕು ಅನ್ನೋದು ವೀಕ್ಷಕರ ಆಸೆ. ಹೀಗಾಗಿ ಬಾಳೆ ಹಣ್ಣಿನ ಮೇಲೆ ಮೋಕ್ಷಿತಾ ಹೆಸರು ಬರೆದು ದೇವರ ರಥೋತ್ಸವಕ್ಕೆ ಅರ್ಪಿಸುತ್ತಿದ್ದಾರೆ.