MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Diwali 2021: ಏಕ್ತಾ ಕಪೂರ್‌ ಪಾರ್ಟಿಯಲ್ಲಿ ಸಲ್ಮಾನ್‌, ಕಾರ್ತಿಕ್‌ ಸೇರಿ ಬಾಲಿವುಡ್‌ ತಾರೆಗಳ ರಂಗು!

Diwali 2021: ಏಕ್ತಾ ಕಪೂರ್‌ ಪಾರ್ಟಿಯಲ್ಲಿ ಸಲ್ಮಾನ್‌, ಕಾರ್ತಿಕ್‌ ಸೇರಿ ಬಾಲಿವುಡ್‌ ತಾರೆಗಳ ರಂಗು!

ಟಿವಿಯ ಖ್ಯಾತ ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ತಮ್ಮ ಮನೆಯಲ್ಲಿ ದೀಪಾವಳಿಯ (Diwali) ಗ್ರ್ಯಾಂಡ್ ಪಾರ್ಟಿಯನ್ನು ಇಟ್ಟುಕೊಂಡಿದ್ದರು. ಇದರಲ್ಲಿ ಕಿರು ತೆರೆಯ ಸ್ಟಾರ್ಸ್‌ ಒಟ್ಟುಗೂಡಿದರು. ಹಿನಾ ಖಾನ್ (Hina Khan),ಕರಿಷ್ಮಾ ತನ್ನಾ (Karishma Tanna),ಮಂದಿರಾ ಬೇಡಿ (Mandira Bedi) ಸೇರಿದಂತೆ ಹಲವು ತಾರೆಯರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಬಾಲಿವುಡ್‌ನ ಹಲವು ಸ್ಟಾರ್‌ಗಳು ಸಹ  ಏಕ್ತಾ ಕಪೂರ್‌ ಪಾರ್ಟಿಯಲ್ಲಿ ಭಾಗವಹಿಸಿ ಹಬ್ಬದ ಕಳೆ ಹೆಚ್ಚಿಸಿದ್ದಾರೆ. ಸಲ್ಮಾನ್‌ ಖಾನ್‌ (Salman Khan), ಕಾರ್ತಿಕ್‌ ಆರ್ಯನ್‌(Kartik Aryan) ಮೌನಿ ರಾಯ್‌ (Mouni Roy) ಮುಂತಾದವರು ಇದ್ದರು. ಈ ಸಮಯದ ಫೋಟೋಗಳು ಸಖತ್‌ ವೈರಲ್‌ ಆಗಿವೆ.    

2 Min read
Suvarna News
Published : Nov 05 2021, 04:08 PM IST| Updated : Nov 05 2021, 04:32 PM IST
Share this Photo Gallery
  • FB
  • TW
  • Linkdin
  • Whatsapp
111

ಏಕ್ತಾ ಕಪೂರ್ ಅವರ ದೀಪಾವಳಿ ಪಾರ್ಟಿಗಳು ಯಾವಾಗಲೂ ಬಿ ಟೌನ್‌ನ ಚರ್ಚೆಯ ವಿಷಯವಾಗಿದೆ. ಇವರ ಪಾರ್ಟಿಗಳು ಸಖತ್‌  ಗ್ಲಾಮರಸ್‌ ಆಗಿರುತ್ತದೆ. ಈ ವರ್ಷವೂ ಏಕ್ತಾ  ಅದ್ದೂರಿ ಪಾರ್ಟಿಯನ್ನು ಆಯೋಜಿಸಿದ್ದರು. ಇದರಲ್ಲಿ ಕಿರುತೆರೆ ನಟ ನಟಿಯರ ಜೊತೆ ಬಾಲಿವುಡ್‌ನ ಸ್ಟಾರ್ಸ್‌ ಸಹ ಉಪಸ್ಥಿತರಿದ್ದರು. 

211

ತನ್ನ ಸ್ಟೈಲ್‌ನಿಂದ ಜನರ ನಿದ್ರೆಗೆಡಿಸಿರುವ ಹಿನಾ ಖಾನ್, ಏಕ್ತಾ ಕಪೂರ್ ಅವರ ಪಾರ್ಟಿಗೆ ಆಗಮಿಸಿದ್ದರು. ಹಿನಾ ಖಾನ್‌ ತನ್ನ ಸ್ಟೈಲ್‌ನಿಂದ ಇಡೀ ಪಾರ್ಟಿಯ ಗಮನ ಸೆಳೆದರು. ಹೀನಾ ಮಾದಕ ನೀಲಿ ಬಣ್ಣದ ಲೆಹೆಂಗಾದಲ್ಲಿ ಕಾಣಿಸಿಕೊಂಡರು.

311

ಕಿರು ತೆರೆಯ ತಾರೆ ಕರಿಷ್ಮಾ ತನ್ನಾ (Karishma Tanna) ಕೂಡ ಏಕ್ತಾ ಪಾರ್ಟಿಗೆ ಬಂದರು. ಗುಲಾಬಿ ಬಣ್ಣದ ಮಿರರ್ ವರ್ಕ್ ಲೆಹೆಂಗಾದಲ್ಲಿ ಕರಿಷ್ಮಾ ತನ್ನಾ  ಯಾವುದೇ ಏಜೆಂಲ್‌ಗಿಂತ ಕಡಿಮೆ ಕಾಣುತ್ತಿರಲಿಲ್ಲ. ಅವರು ಕೂದಲು ಕಟ್ಟದೆ ಹಾಗೇ ಬಿಟ್ಟಿದ್ದರು ಮತ್ತು ಕ್ಲಚ್‌ ಹಿಡಿದು ತಮ್ಮ ಲುಕ್‌ ಪೂರ್ಣ ಗೊಳಿಸಿದ್ದರು. 

411

ಏಕ್ತಾ ಕಪೂರ್ ಅವರ ಅತ್ಯಂತ ಆತ್ಮೀಯ ಸ್ನೇಹಿತೆ ಅನಿತಾ ಹಸನಂದಾನಿ ತಮ್ಮ ಪತಿ ಪತಿ ರೋಹಿತ್ ರೆಡ್ಡಿ  ಜೊತೆ ದೀಪಾವಳಿಯ ಪಾರ್ಟಿಗೆ ಆಗಮಿಸಿದ್ದರು.  ಕೆಂಪು ಬಣ್ಣದ ಸೂಟ್ ಅನ್ನು ಧರಿಸಿದ್ದ ಅನಿತಾ ಹಸನಂದಾನಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. 

511

ಸಾಕ್ಷಿ ತನ್ವಾರ್ ಕೂಡ ತನ್ನ ಸ್ನೇಹಿತೆ ಏಕ್ತಾರ ಪಾರ್ಟಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಹ್ಯಾಂಡ್‌ಲೂಮ್‌  ಸೀರೆ ಜೊತೆ ಜಂಕ್‌ ಜ್ಯುವೆಲ್ಲರಿ ಮ್ಯಾಚ್‌ ಮಾಡಿಕೊಂಡಿದ್ದರು. ಸಾಕ್ಷಿ ತನ್ವರ್ ಅವರು ಈ ಸಂದರ್ಭಕ್ಕಾಗಿ ಆರಿಸಿದ ಕಪ್ಪು ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದರು.

611

ಏಕ್ತಾ ಅವರ ನೆಚ್ಚಿನ ತಾರೆಗಳಲ್ಲಿ ಒಬ್ಬರಾದ ಕರಣ್ ಪಟೇಲ್ ಕೂಡ ತಮ್ಮ ಪತ್ನಿ ಅಂಕಿತಾ ಭಾರ್ಗವ ಅವರ ಜೊತೆ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅವರು ತಮ್ಮ ಹೆಂಡತಿಯೊಂದಿಗೆ ಮ್ಯಾಚಿಂಗ್ ಕುರ್ತಾ ಧರಿಸಿದ್ದರು.

711

ಏಕ್ತಾ ಕಪೂರ್ ಅವರ ಪಾರ್ಟಿಯಲ್ಲಿ ಮಂದಿರಾ ಬೇಡಿ ಕೂಡ ಭಾಗವಹಿಸಿದ್ದರು. ಮಂದಿರಾ ಬೇಡಿ ತನ್ನ ಮಕ್ಕಳೊಂದಿಗೆ ದೀಪಾವಳಿ ಪಾರ್ಟಿಗೆ ಆಗಮಿಸಿದ್ದರು. ಮಂದಿರಾ ಕೈಮಗ್ಗದ ಸೀರೆ ಉಟ್ಟಿದ್ದರು .

811

ಏಕ್ತಾ ಕಪೂರ್ ಅವರ ದೀಪಾವಳಿ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಸ್ಟೈಲ್ ಆಗಿ ಗ್ರ್ಯಾಂಡ್ ಎಂಟ್ರಿ ನೀಡುತ್ತಿರುವುದು ಕಂಡುಬಂದಿದೆ.ಅವರು ಫಾರ್ಮಲ್ಸ್‌ನಲ್ಲಿ ಬೋಲ್ಡ್‌ ಆಗಿ ಕಾಣುತ್ತಿದ್ದರು. ಈ ಸಮಯದಲ್ಲಿ ಸಲ್ಲೂ ಬಾಯ್‌ ಡಾರ್ಕ್‌ ನೇವಿ ಬ್ಲ್ಯೂಶರ್ಟ್‌ ಜೊತೆ ಬ್ಲ್ಯಾಕ್‌ ಪ್ಯಾಂಟ್‌ ಮ್ಯಾಚ್‌ ಮಾಡಿಕೊಂಡಿದ್ದಾರೆ. 

911

ಕೆ ಜಿ ಎಫ್‌ ನಟಿ ಮೌನಿ ರಾಯ್ ಬೇಬಿ ಪಿಂಕ್ ಬಣ್ಣದ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. shimmery sequins ಲೆಹೆಂಗಾದಲ್ಲಿ ಮೌನಿ ರಾಯ್‌ ಪಾರ್ಟಿಯ ಕಳೆ ಹೆಚ್ಚಿಸಿದರು. 

1011

ಮೋಹಿತ್ ಸೆಹಗಲ್, ಸನಯಾ ಇರಾನಿ  ಮತ್ತು  ರಿದ್ಧಿಮಾ ಪಂಡಿತ್ ಅನೇಕರು ಏಕ್ತಾ ಅವರ ಪಾರ್ಟಿಯಲ್ಲಿದ್ದರು. ಮೋಹಿತ್ ಮತ್ತು ಸನಾಯಾ ಭಾರತೀಯ ಉಡುಗೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ರಿದ್ಧಿಮ ಪಂಡಿತ್ ಹಳದಿ ಬಣ್ಣದ ಲೆಹೆಂಗಾ ಧರಿಸಿದ್ದರು.

1111

ದೀಪಾವಳಿ ಪಾರ್ಟಿಗೆ ಸೂಕ್ತವಾದ ಇಂಡಿಯನ್‌ ಔಟ್‌ಫಿಟ್‌ನಲ್ಲಿ  ಕಾರ್ತಿಕ್ ಆರ್ಯನ್ ಹ್ಯಾಂಡ್‌ಸಮ್‌ ಆಗಿ ಕಾಣುತ್ತಿದ್ದರು. ಕಪ್ಪು ಪ್ಯಾಂಟ್‌ನೊಂದಿಗೆ ಅವರು ಮರೂನ್ ಬಣ್ಣದ ಶೆರ್ವಾನಿ ಧರಿಸಿದ್ದರು. ಅವರ ಈ ಎಥ್ನಿಕ್‌  ಲುಕ್‌   ಎಲ್ಲರ ಗಮನ ಸೆಳೆಯಿತು. 

About the Author

SN
Suvarna News
ಸಲ್ಮಾನ್ ಖಾನ್
ಬಾಲಿವುಡ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved