ಧಾರಾವಾಹಿಯಲ್ಲಿ ಮಾತ್ರ ಹಾಗೆ… ರಿಯಲ್ ಲೈಫಲ್ಲಿ ಸೌಂದರ್ಯದ ಗಣಿ ದೃಷ್ಟಿಬೊಟ್ಟು ನಾಯಕಿ
ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ದೃಷ್ಟಿ ರಿಯಲ್ ಫೇಸ್ ಯಾವಾಗ ರಿವೀಲ್ ಮಾಡ್ತಾರೋ ಗೊತ್ತಿಲ್ಲ ಆದರೆ ದೃಷ್ಟಿಯಾಗಿ ನಟಿಸುತ್ತಿರುವ ಅರ್ಪಿತಾ ಮೋಹಿತೆ ತಮ್ಮ ಮುದ್ದು ಮುಖವನ್ನು ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ದೃಷ್ಟಿಬೊಟ್ಟು (Drustibottu serial). ಈ ಧಾರಾವಾಹಿಯ ಕಥಾ ನಾಯಕ ದತ್ತಾ ಭಾಯ್, ಆತನ ಪತ್ನಿಯಾಗಿರೋದು ದೃಷ್ಟಿ. ಸ್ಲಂನಲ್ಲಿದ್ದ ಸುಂದರಿ ದೃಷ್ಟಿಯ ಮೇಲೆ ಯಾರದ್ದೇ ಕೆಟ್ಟ ದೃಷ್ಟಿ ಬೀಳದೇ ಇರಲಿ ಎಂದು ಮಗುವಿದ್ದಾಗಲೇ ಆಕೆಯ ಮುಖಕ್ಕೆ ಮಸಿ ಮೆತ್ತಿದವರು ತಾಯಿ.
ದೃಷ್ಟಿ ಬೆಳೆದು ದೊಡ್ಡವಳಾದರೂ ಕೂಡ ಆಕೆಯ ಮುಖದ ಮೇಲಿನ ಮಸಿ ಹಾಗೆಯೇ ಉಳಿಸಿಕೊಂಡಿದ್ದಾಳೆ. ಈಗ ಯಾರು ಏನಾದರೂ ಮಾಡಿದ್ರೆ ಅನ್ನೋ ಭಯದಿಂದ ಅಲ್ಲ, ಸೌಂದರ್ಯವನ್ನೇ ಕಂಡ್ರೆ ಆಗದೇ ಇರೋ ದತ್ತ ಭಾಯ್ ಗೆ ಇಲ್ಲಿವರೆಗೆ ದೃಷ್ಟಿ ಮುಖಕ್ಕೆ ಬಣ್ಣ ಹಚ್ಚಿ ನಾಟಕ ಮಾಡಿದ್ದು ಅಂತ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಇವತ್ತಿಗೂ ಮುಖಕ್ಕೆ ಮಸಿ ಬಳಿದಿದ್ದಾರೆ.
ಸೀರಿಯಲ್ ನಲ್ಲಿ ಇನ್ನು ಯಾವಾಗ ದೃಷ್ಟಿಯ ರಿಯಲ್ ಫೇಸ್ ರಿವೀಲ್ ಮಾಡ್ತಾರೋ ಗೊತ್ತಿಲ್ಲ. ದೃಷ್ಟಿ ಸೀರಿಯಲ್ ಬಿಟ್ಟು ಬೇರೆ ಕಾರ್ಯಕ್ರಮಗಳಿಗೆ ಹೋದರೂ ಸಹ ಅದೇ ಕಪ್ಪು ಬಣ್ಣ ಹಚ್ಚಿಕೊಂಡೇ ಹೋಗಬೇಕು. ಇಲ್ಲಾಂದ್ರೆ ಸೀರಿಯಲ್ ಜನಕ್ಕೆ ಕನೆಕ್ಟ್ ಆಗಲ್ಲ ಎನ್ನೋ ಕಾರಣಕ್ಕೆ ಹೀಗೆ ಮಾಡಲಾಗುತ್ತೆ. ಆದರೆ ಇದೀಗ ದೃಷ್ಟಿ ಪಾತ್ರಧಾರಿ ತಮ್ಮ ರಿಯಲ್ ಫೇಸ್ ತೋರಿಸಿದ್ದಾರೆ.
ದೃಷ್ಟಿ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿರುವ ನಟಿ ಅರ್ಪಿತಾ ಮೋಹಿತೆ (Apritha Mohithe). ರಿಯಲ್ ಲೈಫಲ್ಲಿ ಸೌಂದರ್ಯದ ಗಣಿ ಈಕೆ. ಸೋಶಿಯಲ್ ಮೀಡಿಯಾದಲ್ಲಿ ಆಗೋಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಅರ್ಪಿತಾ ಇದೀಗ ತಮ್ಮ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದು, ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ.
ನೀಲಿ ಬಣ್ಣದ ಜರಿ ಬಾರ್ಡರ್ ಇರುವಂತಹ ಕೇಸರಿ ಬಣ್ಣದ ಸೀರೆಯುಟ್ಟು, ಮೈತುಂಬಾ ಒಡವೆ ಹಾಕಿ ಥೇಟ್ ದಂತದ ಗೊಂಬೆಯಂತೆ ಹೊಳೆಯುತ್ತಿದ್ದಾರೆ ಅರ್ಪಿತಾ ಮೋಹಿತೆ. ಇವರ ಅಂದವನ್ನು ಹೊಗಳಿ ಅಭಿಮಾನಿಗಳು ಸುಂದರಿ, ದೇವತೆ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಸೀರಿಯಲ್ ನಲ್ಲೂ ಆದಷ್ಟು ಬೇಗನೆ ಈ ಮುದ್ದು ಮುಖ ರಿವೀಲ್ ಆಗಲಿ ಎಂದು ಆಶಿಸಿದ್ದಾರೆ.
ಇನ್ನು ಅರೊಇತಾ ಮೋಹಿತೆ ಬಗ್ಗೆ ಹೇಳೋದಾದ್ರೆ ಅರ್ಪಿತಾಗೆ ದೃಷ್ಟಿಬೊಟ್ಟು ಮೊದಲ ಸೀರಿಯಲ್ ಅಲ್ಲ, ಈ ಹಿಂದೆ ಬೇರೆ ಸೀರಿಯಲ್ ಗಳಲ್ಲಿ ನಟಿಸಿದ್ದರು. ದೃಷ್ಟಿ ಪಾತ್ರಕ್ಕಾಗಿ ಅರ್ಪಿತಾ ಅವರಿಗೆ ಬರೋಬ್ಬರಿ 2 ಗಂಟೆಗಳ ಕಾಲ ಪ್ರತಿದಿನ ಮೇಕಪ್ ಮಾಡಲಾಗುತ್ತಂತೆ. ಕೈಕಾಲು, ಮುಖ, ದೇಹ ಎಲ್ಲವೂ ಒಂದೇ ಬಣ್ಣದಲ್ಲಿ ಕಾಣಿಸಿಕೊಳ್ಳಬೇಕಾಗಿರೋದ್ರಿಂದ ಎರಡು ಗಂಟೆಗಳ ಮೇಕಪ್ ಅಗತ್ಯವಂತೆ. ನೋಡಿ ತಮ್ಮ ಮುದ್ದು ಮುಖವನ್ನು ಮರೆಮಾಚೋಕೆ ಎಷ್ಟು ಕಷ್ಟಪಡ್ತಿದ್ದಾರೆ ಅರ್ಪಿತಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.