Shorts ಹಾಕ್ಕೊಂಡ ಫೋಟೋ ಪೋಸ್ಟ್ ಮಾಡಿದ ದೀಪಿಕಾ, ರಾಮಾಯಣದ ಸೀತೆ ಟ್ರೋಲ್
1987ರಲ್ಲಿ ರಮಾನಂದ್ ಸಾಗರ್ (Ramanand Sagar) ಅವರ ಪೌರಾಣಿಕ ಧಾರಾವಾಹಿ 'ರಾಮಾಯಣ'ದಲ್ಲಿ (Ramayana) ಮಾತೆ ಸೀತೆಯ ಪಾತ್ರವನ್ನು ನಿರ್ವಹಿಸಿದ ನಟಿ ದೀಪಿಕಾ ಚಿಖ್ಲಿಯಾ ಟೋಪಿವಾಲಾ (Dipika Chikhlia) ಅವರು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಗಿಡ್ಡ ಲಂಗದ ಫೋಟೋ ಪೋಸ್ಟ್ ಆದ ನಂತರ ಟ್ರೋಲರ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ದೀಪಿಕಾ ಬಿಳಿ ಶರ್ಟ್, ಕಪ್ಪು ಶಾರ್ಟ್ ಸ್ಕರ್ಟ್, ನೆಕ್ ಟೈ ಮತ್ತು ಸ್ನೀಕರ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ದೀಪಿಕಾ ಅವರು ಹಂಚಿಕೊಂಡ ಫೋಟೋಗಳನ್ನು ನೋಡಿದರೆ ಯಾವುದೋ ಪಾರ್ಟಿಯಲ್ಲಿ ಕ್ಲಿಕ್ ಮಾಡಿರುವುದು ಎಂದು ಸ್ಪಷ್ಟವಾಗಿ ತೋರುತ್ತದೆ. ಏಕೆಂದರೆ ದೀಪಿಕಾ ಜೊತೆಗೆ ಅವರ ಫ್ರೆಂಡ್ಸ್ ಕೂಡ ಅವರಂತೆಯೇ ಡ್ರೆಸ್ಸಿನಲ್ಲಿ ಕಾಣಿಸಿಕೊಂಡಿದ್ದಾರೆ.
ದೀಪಿಕಾ ಅವರ ಫೋಟೋ ನೋಡಿದ ನಂತರ ಸಾಮಾಜಿಕ ಮಾಧ್ಯಮ (Social Media) ಬಳಕೆದಾರರು ನಟಿಯನ್ನು ಟ್ರೋಲ್ (Troll) ಮಾಡಲು ಪ್ರಾರಂಭಿಸಿದ್ದರು 'ನೀವು ಅಂತಹ ಬಟ್ಟೆಗಳನ್ನು ಧರಿಸಬಾರದು ದೀಪಿಕಾ ಜೀ, ನಾವು ನಿಮಗೆ ದೇವತೆಯ ಸ್ಥಾನಮಾನವನ್ನು ನೀಡಿದ್ದೇವೆ', ಎಂದು ಒಬ್ಬರು ಬರೆದಿದ್ದಾರೆ.
'ತಾಯಿ ಸಿಯಾ, ನೀವು ಯಾವ ರೂಪವನ್ನು ತೆಗೆದುಕೊಂಡಿದ್ದೀರಿ?' ಎಂದು ಮತ್ತೊಬ್ಬ ಬಳಕೆದಾರರು ಬರೆದರು, 'ದೀಪಿಕಾ ಜೀ ಇದನ್ನು ನಿಮ್ಮಿಂದ ನಿರೀಕ್ಷಿಸಿರಲಿಲ್ಲ' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಯಾವ ಅವತಾರ ನಿಮ್ಮದು. ಕ್ಷಮಿಸಿ, ಅದನ್ನು ನೋಡಲು ಇಷ್ಟವಾಗಲಿಲ್ಲ. ಎಂದು ಕಾಮೆಂಟ್ ಮಾಡಿದ್ದಾರೆ.
ದೀಪಿಕಾ ಕೈಯಲ್ಲಿರುವ ಗ್ಲಾಸ್ ಬಗ್ಗೆಯೂ ಕೆಲವು ಬಳಕೆದಾರರು ಪ್ರಶ್ನೆಗಳನ್ನು ಎತ್ತಿದ್ದಾರೆ. ಉದಾಹರಣೆಗೆ, ಒಬ್ಬ ಬಳಕೆದಾರರು 'ಅಮ್ಮಾ, ನಿಮ್ಮ ಕೈಯಲ್ಲಿ ಯಾವ ಪಾನೀಯ (Drinkds) ಇದೆ,' ಎಂದು ಬರೆದಿದ್ದಾರೆ. ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಟ್ರೋಲ್ ಮಾಡಿದ ನಂತರ ದೀಪಿಕಾ ಅವರ ಖಾತೆಯಿಂದ ಫೋಟೋಗಳು ಆಗಿವೆ.
ರಾಮಾಯಣ' ಧಾರಾವಾಹಿಯ ಜೊತೆಗೆ, ದೀಪಿಕಾ 'ಭಗವಾನ್ ದಾದಾ', 'ಘರ್ ಕಾ ಚಿರಾಗ್', 'ರೂಪಾಯಿ ದಸ್ ಕರೋಡ್', 'ಖುದಾಯಿ', 'ಗಾಲಿಬ್' ಮತ್ತು 'ಬಾಲಾ' ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ .
ದೀಪಿಕಾ ಅವರು ಶೃಂಗಾರ್ ಬಿಂದಿ ಮತ್ತು ಟಿಪ್ಸ್ & ಟಾಪ್ಸ್ ಕಾಸ್ಮೆಟಿಕ್ಸ್ ಮಾಲೀಕ ಹೇಮಂತ್ ಟೋಪಿವಾಲಾ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ನಿಧಿ ಮತ್ತು ಜೂಹಿ ಟೋಪಿವಾಲಾ ಎಂಬ ಇಬ್ಬರು ಹೆಣ್ಣು ಮಕ್ಕಳಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.