ವಯನಾಡಿನಲ್ಲಿ ರಜೆ ಎಂಜಾಯ್ ಮಾಡುತ್ತಿರುವ ಬುಸ್ ಬುಸ್ ನಾಗಿಣಿ ದೀಪಿಕಾ ದಾಸ್!
ನಟಿ ಮತ್ತು ಉದ್ಯಮಿ ದೀಪಿಕಾ ದಾಸ್ ವೀಕೆಂಡ್ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಕಿರುತೆರೆ ಜನಪ್ರಿಯ ನಟಿ, ಬಿಗ್ ಬಾಸ್ ಸ್ಪರ್ಧಿ ಮತ್ತು ಉದ್ಯಮಿ ದೀಪಿಕಾ ದಾಸ್ ಇದೀಗ ವೀಕೆಂಡ್ ಎಂಜಾಯ್ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ದೀಪಿಕಾ ದಾಸ್‌ಗೆ ಟ್ರಾವಲಿಂಗ್ ಮಾಡುವುದು ಅಂದ್ರೆ ತುಂಬಾನೇ ಇಷ್ಟ. ಹೀಗಾಗಿ ಪ್ರತಿ ಸ್ಥಳದ ಡಿಫರೆಂಟ್ ಅಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ವಯನಾಡಿನಲ್ಲಿ ಜನಪ್ರಿಯತೆ ಇರುವ ಆಹಾರಗಳನ್ನು ಸೇವಿಸಿ ಹೇಗಿದೆ ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ ಸಣ್ಣ ಟ್ರೆಕ್ಕಿಂಗ್ ಮಾಡಿದ್ದಾರೆ.
ವಯನಾಡಿಗೆ ಭೇಟಿ ನೀಡಿರುವುದು ಇದೇನು ಮೊದಲಲ್ಲ ಆದರೆ ಪ್ರತಿ ಸಲವೂ ಭೇಟಿ ನೀಡಿದಾಗ ಡಿಫರೆಂಟ್ ಆಗಿರುವ ಔಟ್‌ಫಿಟ್‌ಗಳನ್ನು ಧರಿಸುತ್ತಾರೆ.
ಐಷಾರಾಮಿ ರೆಸಾರ್ಟ್‌ನಲ್ಲಿ ಉಳಿದುಕೊಂಡಿರುವ ದೀಪಿಕಾ ಜೀನ್ಸ್ ಪ್ಯಾಂಟ್, ಟಾಪ್ ಧರಿಸಿ ಡಿಫರೆಂಟ್ ಆಗಿ ಕಾಣಿಸಬೇಕೆಂದು ಕೂದಲಿಗೆ ಕೆಂಪು ಕವಲ್ ಕಟ್ಟಿದ್ದಾರೆ.
ಮತ್ತೊಂದು ಫೋಟೋದಲ್ಲಿ ಕಲರ್ ಕಲರ್ ಶಾರ್ಟ್ಸ್ ಮತ್ತು ಟೀ- ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 'pleasant morning. ಗುಡ್ ವೈಬ್ ಓನ್ಲಿ' ಎಂದು ಬರೆದುಕೊಂಡಿದ್ದಾರೆ.