ಕಿರುತೆರೆಯ ಕಪಲ್ Debina Bonnerjee ಮತ್ತು Gurmeet Choudharyಗೆ ಹೆಣ್ಣು ಮಗು!
ಮನರಂಜನಾ ಉದ್ಯಮದಿಂದ ಮತ್ತೊಮ್ಮೆ ಒಳ್ಳೆಯ ಸುದ್ದಿ ಕೇಳಿಬರುತ್ತಿದೆ. ಒಂದೆಡೆ, ಕಾಮಿಡಿಯನ್ ಭಾರ್ತಿ ಸಿಂಗ್ (Bharti Singh) ಭಾನುವಾರ ಮಗನಿಗೆ ಜನ್ಮ ನೀಡಿದರೆ, ಮತ್ತೊಂದೆಡೆ, ಟಿವಿಯ ಸೀತಾ ಮುಖದ ಡೆಬಿನಾ ಬೋನರ್ಜಿ (Debina Bonerjee) ಕೂಡ ಮಗಳಿಗೆ ತಾಯಿಯಾದರು. ಡೆಬಿನಾ ಪತಿ ಗುರ್ಮೀತ್ ಚೌಧರಿ(Gurmeet Choudhary) ಟ್ವೀಟ್ ಮಾಡಿ ಮನೆಗೆ ಬಂದ ಪುಟ್ಟ ದೇವತೆಯ ಮಾಹಿತಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಗುರ್ಮೀತ್ ಚೌಧರಿ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಮಗುವನ್ನು ತೋರಿಸುತ್ತಿದ್ದಾರೆ. ಆದರೆ, ಈ ವಿಡಿಯೋದಲ್ಲಿ ದಂಪತಿಯ ಮಗಳ ಕೈ ಮಾತ್ರ ಕಾಣಿಸುತ್ತಿದೆ. ನಾವು ನಮ್ಮ ಹೆಣ್ಣು ಮಗುವನ್ನು ಈ ಜಗತ್ತಿಗೆ ಸ್ವಾಗತಿಸಲು ಬಹಳ ಸಂತೋಷವಾಗಿದೆ. 3.4.2022 ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು. ಗುರ್ಮೀತ್ ಮತ್ತು ಡೆಬಿನಾ ಎಂದು ವೀಡಿಯೊವನ್ನು ಹಂಚಿಕೊಂಡ ಗುರ್ಮೀತ್ ಬರೆದಿದ್ದಾರೆ.
Image: Gurmeet Choudhary, Debina Bonnerjee/Instagram
ಮದುವೆಯಾದ ಸುಮಾರು 11 ವರ್ಷಗಳ ನಂತರ ಡೆಬಿನಾ ತಾಯಿಯಾಗಿದ್ದಾರೆ. ಗುರ್ಮೀತ್ ಮತ್ತು ಡೆಬಿನಾ ಟ್ಯಾಲೆಂಟ್ ಹಂಟ್ ಸಮಯದಲ್ಲಿ ಭೇಟಿಯಾದರು.. ವಾಸ್ತವವಾಗಿ, ಗುರ್ಮೀತ್ ಡೆಬಿನಾ ಅವರ ಸ್ನೇಹಿತೆಯ ಬಾಯ್‌ಫ್ರೆಂಡ್‌ನ ಗೆಳೆಯ ಮತ್ತು ಅವರು ಆಗಾಗ್ಗೆ ಮನೆಗೆ ಭೇಟಿ ನೀಡುತ್ತಿದ್ದರು. ಇದಾದ ನಂತರ 2008 ರಲ್ಲಿ ಬಂದ ರಾಮಾಯಣ ಧಾರಾವಾಹಿಯಲ್ಲಿ ಡೆಬಿನಾ ಮತ್ತು ಗುರ್ಮೀತ್ ಕೆಲಸ ಮಾಡಿದರು.
Image: Gurmeet Choudhary, Debina Bonnerjee/Instagram
ಈ ಧಾರಾವಾಹಿಯಲ್ಲಿ ಇಬ್ಬರೂ ಪ್ರಮುಖ ಪಾತ್ರದಲ್ಲಿ ಅಂದರೆ ರಾಮ-ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿಗೆ ಕೆಲಸ ಮಾಡುವಾಗ ಇಬ್ಬರ ನಡುವೆ ಬೆಳೆದ ಸ್ನೇಹ ನಂತರ ಪ್ರೀತಿಗೆ ತಿರುಗಿತು. ಇದಾದ ನಂತರ ಗುರ್ಮೀತ್ ಅವರು ಧಾರಾವಾಹಿಯೊಂದರ ಸೆಟ್‌ನಲ್ಲಿ ಡೆಬಿನಾ ಅವರಿಗೆ ಪ್ರಪೋಸ್ ಮಾಡಿದರು ಮತ್ತು ಅವರು ತಕ್ಷಣ ಯೆಸ್ ಎಂದು ಹೇಳಿದರು.
Image: Gurmeet Choudhary, Debina Bonnerjee/Instagram
ಕುಟುಂಬ ಸದಸ್ಯರಿಗೆ ತಿಳಿಸದೆ 2009 ರಲ್ಲಿ ಡೆಬಿನಾ ಬೋನರ್ಜಿ ಮತ್ತು ಗುರ್ಮೀತ್ ಚೌಧರಿ ದೇವಸ್ಥಾನದಲ್ಲಿ ರಹಸ್ಯವಾಗಿ ವಿವಾಹವಾದರು. ಅವರ ವಿಶೇಷ ಸ್ನೇಹಿತರು ಮಾತ್ರ ಈ ಮದುವೆಯಲ್ಲಿ ಭಾಗವಹಿಸಿದ್ದರು.
ದಂಪತಿಗಳು ತಮ್ಮ ದುವೆಯ ವಿಷಯವನ್ನು ಸುಮಾರು ಎರಡು ವರ್ಷಗಳಿಂದ ಕುಟುಂಬದಿಂದ ಮುಚ್ಚಿಟ್ಟಿದ್ದರು. ಎರಡು ವರ್ಷಗಳ ನಂತರ, ಇಬ್ಬರೂ ತಮ್ಮ ತಮ್ಮ ಮನೆಯವರೊಂದಿಗೆ ಮದುವೆಯ ಬಗ್ಗೆ ತಿಳಿಸಿದಾಗ ಅವರ ಮದುವೆಗೆ ಎಲ್ಲರೂ ಒಪ್ಪಿದರು. ನಂತರ ದಂಪತಿಗಳು 2011 ರಲ್ಲಿ ಮತ್ತೆ ವಿವಾಹವಾದರು.
ಈ ದಂಪತಿಗಳು ತಮ್ಮ ಈ ಮಗುವಿಗೆ ಜನ್ಮ ನೀಡುವ ಮೊದಲು ಇಬ್ಬರೂ ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದರು. ದೇಬಿನಾ ಮತ್ತು ಗುರ್ಮೀತ್ ದಂಪತಿಗಳು ಆ ಮಕ್ಕಳ ಪೋಷಣೆಯ ವೆಚ್ಚವನ್ನು ಭರಿಸುತ್ತಾರೆ.