- Home
- Entertainment
- TV Talk
- CJ Roy Death: ತಿಂಗಳುಗಳ ಹಿಂದೆ, ವಿಶ್ವದಲ್ಲೇ ಅಪರೂಪದ ರೋಲ್ಸ್ ರಾಯ್ಸ್ ಖರೀದಿಸಿದ್ದ ರಾಯ್; ಅಷ್ಟು ಹುಚ್ಚು ಯಾಕೆ?
CJ Roy Death: ತಿಂಗಳುಗಳ ಹಿಂದೆ, ವಿಶ್ವದಲ್ಲೇ ಅಪರೂಪದ ರೋಲ್ಸ್ ರಾಯ್ಸ್ ಖರೀದಿಸಿದ್ದ ರಾಯ್; ಅಷ್ಟು ಹುಚ್ಚು ಯಾಕೆ?
CJ Roy Death Reason: ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ, ಅಧ್ಯಕ್ಷ ಸಿ.ಜೆ. ರಾಯ್ ಅವರು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದವರು. ಒಂದು ಕಾಲದಲ್ಲಿ ಅವರ ಮನೆಯಲ್ಲಿ ಕಾರ್ ಕೂಡ ಇರಲಿಲ್ಲ.

ದುಬಾರಿ ಕಾರ್‌ಗಳಿತ್ತು
ಕಾರ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ರಾಯ್ ಅವರು ದುಬೈ ಮತ್ತು ಭಾರತದಲ್ಲಿ ಹಲವಾರು ಐಷಾರಾಮಿ, ಸ್ಪೋರ್ಟ್ಸ್ ಕಾರುಗಳನ್ನು ಹೊಂದಿದ್ದಾರೆ.
ಮೊದಲ ರೋಲ್ಸ್ ರಾಯ್ಸ್ ಖರೀದಿಸಿದ್ದು ಯಾವಾಗ?
2008 ರಲ್ಲಿ ಸಿಜೆ ರಾಯ್ ಅವರು ಮೊದಲ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿದ್ದರು. ಅಂದಿನಿಂದ ಇಂದಿನವರೆಗೆ ಅವರು ಒಟ್ಟು 12 ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿ ಮಾಡಿದ್ದಾರೆ. ಇವುಗಳಲ್ಲಿ ಕೆಲವು ಕಾರ್ ಈಗ ಅವರ ಬಳಿ ಇಲ್ಲ. ಹೊಸ ಹೊಸ ಮಾಡೆಲ್ ಬಂದಂತೆ ಅವರು ಕಾರ್ ಖರೀದಿ ಮಾಡ್ತಿದ್ದರು.
ರೋಲ್ಸ್ ರಾಯ್ಸ್ ಫ್ಯಾಂಟಮ್ VIII
ಸಿಜೆ ರಾಯ್ ಗ್ಯಾರೇಜ್‌ನಲ್ಲಿ ರೋಲ್ಸ್ ರಾಯ್ಸ್, ಲ್ಯಾಂಬೋರ್ಗಿನಿ, ಬುಗಾಟ್ಟಿ ವೇರಾನ್‌ನಂತಹ ದುಬಾರಿ ಮೌಲ್ಯದ ಕಾರುಗಳಿವೆ. ಕಳೆದ ನವೆಂಬರ್‌ನಲ್ಲಿ ಉದ್ಯಮಿ ರಾಯ್ ಅವರು ತಮ್ಮ 12ನೇ ರೋಲ್ಸ್ ರಾಯ್ಸ್ ಕಾರ್ ಖರೀದಿಸಿದ್ದಾರೆ, ಅದುವೇ 'ರೋಲ್ಸ್ ರಾಯ್ಸ್ ಫ್ಯಾಂಟಮ್ VIII'.
12ನೇ ರೋಲ್ಸ್ ರಾಯ್ಸ್ ಕಾರ್
ಹೆಸರಾಂತ 'ಬಿಗ್ ಬಾಯ್ ಟಾಯ್ಜ್' (Big Boy Toyz) ನಿಂದ ಕಾರ್ ಖರೀದಿ ಮಾಡಿದ್ದರು. ಸಿಜೆ ರಾಯ್ ಅವರು ಇದು ನನ್ನ ಜೀವನದ 12ನೇ ರೋಲ್ಸ್ ರಾಯ್ಸ್ ಎಂದು ಹೇಳಿದ್ದಾರೆ.
ಕಾರ್ ಬೆಲೆ ಎಷ್ಟು?
ಬಿಳಿ ಬಣ್ಣದ ಈ ಐಷಾರಾಮಿ ಕಾರ್, ಫ್ಯಾಂಟಮ್ VIII ನ ಎಕ್ಸ್ ಶೋರೂಂ ಬೆಲೆ ಸುಮಾರು 10 ಕೋಟಿ ರೂಪಾಯಿಗಳಿಂದ ಆರಂಭವಾಗುತ್ತದೆ. ವಿಶ್ವದ ಅತ್ಯಂತ ಸ್ತಬ್ಧ (quietest) ಕಾರ್‌ಗಳಲ್ಲಿ ಒಂದು ಎಂದು ಹೆಸರುವಾಸಿಯಾಗಿದೆ. ಸ್ಟಾರ್‌ಲೈಟ್ ರೂಫ್, ಶಾಂಪೇನ್ ಚಿಲ್ಲರ್, ಅತ್ಯಾಧುನಿಕ ಸೌಂಡ್ ಪ್ರೂಫಿಂಗ್ ವ್ಯವಸ್ಥೆಯೂ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

