ಪ್ರೀತಿಸಿದವನೊಂದಿಗೆ ಸಪ್ತಪದಿ ತುಳಿದ ರಂಗನಾಯಕಿ ನಟಿ ಪ್ರೇರಣಾ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಂಗನಾಯಕಿ ಧಾರಾವಾಹಿ ಮತ್ತು ಕನ್ನಡ ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ನಟಿ ಪ್ರೇರಣ ಕಂಬಂ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೆಲವು ವರ್ಷಗಳ ಹಿಂದೆ ಕಲರ್ಸ್ ಕನ್ನಡದಲ್ಲಿ ರಂಗನಾಯಕಿ ಎನ್ನುವ ಸೀರಿಯಲ್ ಪ್ರಸಾರವಾಗುತ್ತಿತ್ತು, ಆ ಸೀರಿಯಲ್ ನಾಯಕಿ ನಕ್ಷತ್ರ ಪಾತ್ರದಲ್ಲಿ ಮಿಂಚಿದ್ದ ಪ್ರೇರಣ ಕಂಬಂ (Prerana Kambam) ತಮ್ಮ ನಟನೆಯ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು.
ಗೋಕರ್ಣ ತೀರದ ಕಳ್ಳಿ ಬಂಗಾರಿಯಾಗಿ, ನಂತರ ನಕ್ಷತ್ರ ಆಗಿ ರಂಗಿನಾಯಕಿ (Ranganayaki Serial) ಸೀರಿಯಲ್ ಮೂಲಕ ಕನ್ನಡಿಗರಿಗೆ ಭರ್ಜರಿ ಮನರಂಜನೆ ನೀಡಿದ್ದ ಪ್ರೇರಣ ಇದೀಗ ತಮ್ಮ ನೆಚ್ಚಿನ ಹುಡುಗನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ತಾರೆಯರು, ಅಭಿಮಾನಿಗಳು ನಟಿಗೆ ಶುಭ ಕೋರಿದ್ದಾರೆ.
ತಮ್ಮ ಬಹುದಿನಗಳ ಗೆಳೆಯ ಶ್ರೀಪಾದ್ ಜೊತೆ ಪ್ರೇರಣ ನಬಂಬರ್ 22 ರಂದು ವೈವಾಹಿಕ ಜೀವನಕ್ಕೆ (married life) ಕಾಲಿಟ್ಟಿದ್ದಾರೆ. ಇವರದ್ದು ಲವ್ ಮ್ಯಾರೇಜ್ ಆಗಿದ್ದು, ಇವರ ಮದುವೆಗೆ ಕನ್ನಡ, ತೆಲುಗು ಕಿರುತೆರೆ ನಟರು ಆಗಮಿಸಿ ಶುಭ ಕೋರಿದ್ದಾರೆ.
ಸಿನಿಮಾಗಳ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ಪ್ರೇರಣ ನಂತರ ಕನ್ನದ ಕಿರುತೆರೆಯ ಮೂಲಕ ಜನಕ್ಕೆ ಹತ್ತಿರವಾದರು. ಹರಹರ ಮಹದೇವ ಸೀರಿಯಲ್ (serial) ನಲ್ಲಿ ಚಂದ್ರನ ಪತ್ನಿ ರೇವತಿಯಾಗಿ ನಟಿಸಿದ್ದರು. ನಂತರ ರಂಗನಾಯಕಿ ಸೀರಿಯಲ್ ಮೂಲಕ ಮನೆಮಾತಾದರು.
ರಂಗನಾಯಕಿ ಮುಗಿದ ನಂತರ ನಮ್ಮನೆ ಯುವರಾಣಿ ಸೀರಿಯಲ್ ನ ಕೆಲವು ಎಪಿಸೋಡ್ ಗಳಲ್ಲೂ ಪ್ರೇರಣ ನಟಿಸಿದ್ದರು. ಸದ್ಯ ತೆಲುಗು ಕಿರುತೆರೆಯಲ್ಲಿ (Telugu Serial) ಬ್ಯುಸಿಯಾಗಿರುವ ಪ್ರೇರಣ, ತೆಲುಗಿನ ಕೃಷ್ಣ ಮುಕುಂದ ಮುರಾರಿಯಲ್ಲಿ ಪ್ರಮುಖ ಪಾತ್ರದಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲೂ ಮಿಂಚುತ್ತಿದ್ದಾರೆ.
ಚೂರಿಕಟ್ಟೆ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡ ಪ್ರೇರಣ, ಬಳಿಕ 'ಪೆಂಟಗನ್', 'ಒಂದಂಕೆ ಕಾಡು', 'ಆನ', 'ಫಿಸಿಕ್ಸ್ ಟೀಚರ್' ಎಂಬ ಸಿನಿಮಾಗಳಲ್ಲೂ ನಟಿಸಿದ್ದು, ಇವರ ನಟನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (Bengaluru International Film Festival) 'ಫಿಸಿಕ್ಸ್ ಟೀಚರ್' ಚಿತ್ರ ಪ್ರದರ್ಶನ ಕಂಡಿತ್ತು.
ಕೆಲ ದಿನಗಳ ಹಿಂದೆಯಷ್ಟೇ ಪ್ರೇರಣ ತಮ್ಮ ಬಾಳ ಸಂಗಾತಿಯ ಹುಟ್ಟು ಹಬ್ಬ ದಿನ ಶ್ರೀಪಾದ್ ಜೊತೆಗಿನ ವಿಡಿಯೋ ಒಂದು ಶೇರ್ ಮಾಡಿ, ನನ್ನ ಜೀವನದ ನಿಜವಾದ ಹೀರೋ ಎಂದು ಬರೆದುಕೊಂಡಿದ್ದು, ಹಸೆಮಣೆ ಏರುತ್ತಿರುವ ಸುಳಿವು ಕೊಟ್ಟಿದ್ದರು.
ಈ ಪ್ರಿವೆಡ್ಡಿಂಗ್ ಶೂಟ್ (Pre wedding shoot) ವಿಡಿಯೋದಲ್ಲಿ ಪ್ರೇರಣ ಲಂಗ ದಾವಣಿ ಮತ್ತು ಶ್ರೀಪಾದ್ ಕುರ್ತಾ ಧರಿಸಿದ್ದು, ಇಬ್ಬರು ಟ್ರೆಡಿಶನಲ್ ಲುಕ್ ನಲ್ಲಿ ಮುದ್ದಾಗಿ ಕಾಣಿಸುತ್ತಿದ್ದರು. ಆದರೆ ಇವರು ತಮ್ಮ ಮದುವೆ ಬಗ್ಗೆ ಎಲ್ಲೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಜೋಡಿಯ ಫೋಟೊ ಎಲ್ಲೆಡೆ ವೈರಲ್ ಆಗುತ್ತಿದೆ. ಅವರ ವೈವಾಹಿಕ ಜೀವನ ಶುಭವಾಗಿರಲಿ.