- Home
- Entertainment
- TV Talk
- ಬ್ಲ್ಯಾಕ್ ಡ್ರೆಸ್‌ನಲ್ಲಿ ಬಿಸಿ ಏರಿಸಿದ ರಾಮಾಚಾರಿ ಸೀರಿಯಲ್ ಮೌನ ಗುಡ್ಡೇಮನೆ; ರೆಸ್ಟೋಪಬ್‌ನಲ್ಲಿ ಭರ್ಜರಿ ಭೋಜನ!
ಬ್ಲ್ಯಾಕ್ ಡ್ರೆಸ್‌ನಲ್ಲಿ ಬಿಸಿ ಏರಿಸಿದ ರಾಮಾಚಾರಿ ಸೀರಿಯಲ್ ಮೌನ ಗುಡ್ಡೇಮನೆ; ರೆಸ್ಟೋಪಬ್‌ನಲ್ಲಿ ಭರ್ಜರಿ ಭೋಜನ!
ರಾಮಾಚಾರಿ ಧಾರಾವಾಹಿ ನಟಿ ಮೌನ ಗುಡ್ಡೇಮನೆ ಅವರು ಈ ಬಾರಿ ಸಖತ್ ಸ್ಟೈಲಿಶ್ ಆಗಿ, ವೆಸ್ಟರ್ನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿನ ದಿ ಪಂಪ್ ಹೌಸ್ ಎನ್ನೋ ರೆಸ್ಟೋಪಬ್‌ನಲ್ಲಿ ಊಟ ಸವಿದಿದ್ದಾರೆ.

ಮೌನ ಗುಡ್ಡೇಮನೆ ಅವರು ಆರಂಭದಲ್ಲಿ ಮಾಡೆಲ್ ಆಗಿದ್ದು, ಸಾಕಷ್ಟು ರ್ಯಾಂಪ್ ವಾಕ್ ಮಾಡಿದ್ದರು. ಪಿಯುಸಿಯಲ್ಲಿ ಓದುವಾಗಲೇ ಅವರಿಗೆ ನಟನೆಯ ಅವಕಾಶ ಸಿಕ್ಕಿತ್ತು.
ಮೌನ ಗುಡ್ಡೇಮನೆ ಅವರು ಬ್ಲ್ಯಾಕ್ ವೆಸ್ಟರ್ನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಅನೇಕರು ಈ ಫೋಟೋಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಕೆಲವೇ ಕೆಲವರು ಚೆನ್ನಾಗಿಲ್ಲ ಎಂದಿದ್ದಾರೆ.
ರಾಮಾಚಾರಿ ಧಾರಾವಾಹಿಯಲ್ಲಿ ಟ್ರೆಡಿಷನಲ್ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುವ ಮೌನ ಈ ಬಾರಿ ಈ ರೀತಿ ಹಾಟ್ ಆಗಿ ಕಾಣಿಸಿಕೊಂಡಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ.
ರಾಮಾಚಾರಿ ಧಾರಾವಾಹಿಯಲ್ಲಿ ಚಾರುಲತಾ ಪಾತ್ರದಲ್ಲಿ ಕಾಣಿಸಿಕೊಳ್ತಿರುವ ಮೌನ ಗುಡ್ಡೇಮನೆ ಅವರು ಗಂಡನನ್ನು ಅತಿಯಾಗಿ ಪ್ರೀತಿಸುವ, ಫ್ಯಾಮಿಲಿ ಖುಷಿಗೆ ಏನು ಬೇಕಿದ್ರೂ ಮಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ರಾಮಾಚಾರಿ ಧಾರಾವಾಹಿಯು ಟಾಪ್ 5 ಸ್ಥಾನ ಪಡೆದಿದೆ. ಈ ಸೀರಿಯಲ್‌ನ್ನು ಅನೇಕರು ಇಷ್ಟಪಟ್ಟಿದ್ದಾರೆ.
ಮೌನ ಗುಡ್ಡೇಮನೆ ಅವರು ಕುಲದಲ್ಲಿ ಕೀಳ್ಯಾವುದೋ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಮನು ಮಾಡೆನೂರು ಅವರು ಹೀರೋ ಆಗಿದ್ದಾರೆ. ಈ ಸಿನಿಮಾ ಹೇಗೆ ಮೂಡಿ ಬರಲಿದೆ ಎಂದು ಕಾದು ನೋಡಬೇಕಿದೆ.
ಸದ್ಯ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಮೌನ ಗುಡ್ಡೇಮನೆ ಅವರು ಸಿನಿಮಾದತ್ತವೂ ಮುಖ ಮಾಡಿದ್ದಾರೆ. ಅಂದಹಾಗೆ ವಯಸ್ಸಿಗೂ ಮೀರಿದ ಪಾತ್ರ ಮಾಡುತ್ತಿದ್ದಾರೆ ಎನ್ನಬಹುದು.
ನಟಿ ಮೌನ ಗುಡ್ಡೇಮನೆ ಅವರು ಯುಟ್ಯೂಬ್ ಚಾನೆಲ್ ಹೊಂದಿದ್ದು, ಅಲ್ಲಿಯೂ ತಮ್ಮ ದಿನಚರಿ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.