Nammane Yuvarani ಧಾರಾವಾಹಿಯಲ್ಲಿ ಪ್ರಣಾಮ್ ಆಗಿ ಎಂಟ್ರಿ ಕೊಟ್ಟ ನಟ Snehith Gowda!
ದೊಡ್ಡ ಬದಲಾವಣೆ ಪಡೆದುಕೊಂಡ ಧಾರಾವಾಹಿಯಲ್ಲಿ ನಟ ಸ್ನೇಹಿತ್ ಗೌಡ. ದೊಡ್ಡವನಾದ ಪ್ರಣಾಮ್...
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಇಬ್ಬರು ಹೊಸ ಪಾತ್ರಧಾರಿಗಳನ್ನು ಪರಿಚಯ ಮಾಡಿಕೊಡಲಾಗಿದೆ.
ಅನಿಕೇತ್ ಮತ್ತು ಮೀರಾ ಪಾತ್ರಕ್ಕೆ ಅಂತ್ಯ ಹಾಡಿದ ನಂತರ ಕಥೆ 8 ವರ್ಷ ಮುಂದಕ್ಕೆ ಹೋಗಿದೆ. ಈ ಧಾರಾವಾಹಿಯಲ್ಲಿದ್ದ ಪುಟ್ಟ ಹುಡುಗ ದೊಡ್ಡವನಾಗಿದ್ದಾನೆ.
ಸಾಕೇತ್ ಮತ್ತು ಅನಿಕೇತ್ ಸಹೋದರನಾಗಿದ್ದ ಪ್ರಣಾಮ್ ಈಗ ದೊಡ್ಡವನಾಗಿದ್ದಾನೆ. ಪ್ರಣಾಮ್ ಸ್ಥಾನಕ್ಕೆ ಈಗ ನಟ ಸ್ನೇಹಿತ್ ಗೌಡ ಆಗಮಿಸಿದ್ದಾರೆ.
'ನಮ್ಮನೆ ಯುವರಾಣಿ ಧಾರಾವಾಹಿಯ ನನ್ನ ಎಪಿಸೋಡ್‌ಗಳು ಪ್ರಸಾರವಾಗುತ್ತಿವೆ. ವಂಡರ್‌ಫುಲ್ ಪ್ರಪಂಚಕ್ಕೆ ಕಾಲಿಡುತ್ತಿದ್ದಂತೆ, ನಾನು ಅನೇಕರಿಗೆ ಧನ್ಯವಾದಗಳನ್ನು ಹೇಳಬೇಕು,' ಎಂದು ಸ್ನೇಹಿತ್ ಹೇಳಿದ್ದಾರೆ.
'ನನ್ನ ಇಡೀ ತಂಡ ನನಗೆ ಸ್ಫೂರ್ತಿ ನೀಡುತ್ತಾರೆ. ಶ್ರಮವಹಿಸಿ ಕೆಲಸ ಮಾಡುತ್ತಾರೆ. ಈ ಧಾರಾವಾಹಿಗಿರುವ ಅಭಿಮಾನಿಗಳಿಗೆ ನಾನು ಬೇಸರ ಮಾಡಿಲ್ಲ ಎಂದುಕೊಳ್ಳುವೆ, ನನ್ನ ಹೆಗಲ ಮೇಲಿರುವ ಜವಾಬ್ದಾರಿಯನ್ನು ನಿಭಾಯಿಸುವೆ,' ಎಂದು ಸ್ನೇಹಿತ್ ಬರೆದುಕೊಂಡಿದ್ದಾರೆ.
ಅನೀರಾ ಕಾಣೆಯಾಗಿ 8 ವರ್ಷ ಕಳೆದಿವೆ. ಇವರನ್ನು ಇನ್ನೂ ಹುಡುಕುತ್ತಿರುವ ಸಾಕೇತ್, ಅಹಲ್ಯಾ ಮತ್ತು ಪ್ರಣಾಮ್‌ಗೆ ಸಣ್ಣ ಸುಳಿವು ಸಿಕ್ಕಿದೆ. ದೇಗುಲದಲ್ಲಿ ಅರ್ಚಕರು ಹೇಳಿದ್ದ ಮಾತುಗಳನ್ನು ಕೇಳಿ ಭರವಸೆ ಹುಟ್ಟು ಕೊಂಡಿದೆ.
ಸುಮಾರು 100 ನಾಟಕಗಳಲ್ಲಿ ಅಭಿನಯಿಸಿರುವ ಸ್ನೇಹಿತರ ಗಾಸ್ ಕೇಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಬೇರೊಂದು ಸಿನಿಮಾಗೆ ಆಡಿಕ್ಷನ್ ನೀಡುವಾಗ ಈ ಧಾರಾವಾಹಿಗೆ ಆಯ್ಕೆ ಆದರಂತೆ.