- Home
- Entertainment
- TV Talk
- ಅಮ್ಮ ಕಣ್ಣಕಪ್ಪುನ ಚೆನ್ನಾಗಿ ತಿದ್ದಿದ್ದಕ್ಕೆ ಇಷ್ಟು ದಪ್ಪ ಇದೆ; ನೆಟ್ಟಿಗರಿಗೆ ಕೆಂಡಸಂಪಿಗೆ ಸುಮನಾ ಐಬ್ರೋ ಮೇಲೆ ಕಣ್ಣು!
ಅಮ್ಮ ಕಣ್ಣಕಪ್ಪುನ ಚೆನ್ನಾಗಿ ತಿದ್ದಿದ್ದಕ್ಕೆ ಇಷ್ಟು ದಪ್ಪ ಇದೆ; ನೆಟ್ಟಿಗರಿಗೆ ಕೆಂಡಸಂಪಿಗೆ ಸುಮನಾ ಐಬ್ರೋ ಮೇಲೆ ಕಣ್ಣು!
ಸುಮನಾ ನಟನೆಗಿಂತ ಗಮನ ಸೆಳೆಯುತ್ತಿತ್ತು ಆ ಐಬ್ರೋ. ಕಣ್ಣುಕಪ್ಪಾ ಅಥವಾ ನೀಡಲಿಂಗ್ ಮಾಡಿಸಿದ್ದೀರಾ ಅಂತ ಕೇಳ್ತಾನೆ ಇದ್ದರೆ ಫ್ಯಾನ್ಸ್.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಸುಮನಾ ಪಾತ್ರದಲ್ಲಿ ಮಿಂಚುತ್ತಿದ್ದರು ಕಾವ್ಯಾ ಶೈವ.
ಗಟ್ಟಿಗಿತ್ತಿ ಹಾಗೂ ವಿಭಿನ್ನ ಪಾತ್ರವಾಗಿದ್ದ ಕಾರಣ ಕಾವ್ಯಾ ಶೈವ ಅಪಾರ ಸಂಖ್ಯೆಯಲ್ಲಿ ಕಿರುತೆರೆ ಅಭಿಮಾನಿಗಳನ್ನು ಗಳಿಸಿದ್ದರು.
'ನಾನಾ ಕಾರಣದಿಂದ ನಾನು ಆ ಪ್ರಾಜೆಕ್ಟ್‌ನ ಕಂಪ್ಲೀಟ್ ಮಾಡೋಕೆ ಆಗಲ್ಲ ಕ್ಷಮೆ ಇರಲಿ ನಾನು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ' ಎಂದು ಕಾವ್ಯಾ ಪೋಸ್ಟ್ ಹಾಕಿದ್ದರು.
ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರ ಬಂದುಬಿಟ್ಟರು. ಸ್ಪಷ್ಟವಾದ ಕಾರಣ ಈವರೆಗೂ ತಿಳಿದು ಬಂದಿಲ್ಲ ಆದರೆ ಎಲ್ಲರೂ ಕಾವ್ಯಾರನ್ನು ಮಿಸ್ ಮಾಡಿಕೊಳ್ಳುತ್ತಾರೆ.
ಕಾವ್ಯಾ ನಟನೆಗಿಂತ ಆಕೆಯ ಊಬ್ರೋಗೆ ಸಖತ್ ಮೆಚ್ಚುಗೆ ಪಡೆದುಕೊಂಡಿದ್ದರು. ಐಬ್ರೋ ಶೇಪ್ ಹಾಗೂ ದಪ್ಪ ಹೆಣ್ಣುಮಕ್ಕಳಿಗೆ ಇಷ್ಟವಾಗಿತ್ತು.
ನಿಮ್ಮ ಅಮ್ಮ ಚೆನ್ನಾಗಿ ಕಣ್ಣುಕಪ್ಪು ಹಾಕಿದ್ದಾರೆ ಅದಿಕ್ಕೆ ಇಷ್ಟೋಂದು ದಪ್ಪ ಐಬ್ರೋ ಇರುವುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇಲ್ಲ ನೀವು ಲೇಜರ್ ಅಥವಾ ನೀಡಲಿಂಗ್ ಮಾಡಿಸಿರಬೇಕು ಎನ್ನುತ್ತಾರೆ.