ಅಲ್ಲಲ್ಲೇ ಪುಷ್ಪಾ ಇಷ್ಟು ಮಾಡರ್ನಾ? ಬೃಂದಾವನ ನಟಿ ಫೋಟೋ ವೈರಲ್
ಬೃಂದಾವನ ಧಾರಾವಾಹಿಯಲ್ಲಿ ಮಿಂಚುತ್ತಿರುವ ಪುಷ್ಪಾ ಯಾರು ಗೊತ್ತಾ? ದಾಸಪುರಂದರ ನೋಡಿದ್ರೆ ನೀವು ಪಕ್ಕಾ ಕಂಡು ಹಿಡಿಯುತ್ತೀರಾ...

ದಾಸಪುರಂದರ (Dasapurandara) ಧಾರಾವಾಹಿಯಲ್ಲಿ ನಟಿಸಿರುವ ಅಮೂಲ್ಯ ಭಾರದ್ವಾಜ್ ಈಗ ಬೃಂದಾವನದಲ್ಲಿ ಪುಷ್ಪಾ ಆಗಿ ಮಿಂಚುತ್ತಿದ್ದಾರೆ.
ಶಾಂತಂ ಪಾಪಂ ಸಂಚಿಕೆಗಳಲ್ಲಿ ಕಾಣಿಸಿಕೊಂಡಿರುವ ಪುಷ್ಪ ಸುಮಾರು 50ಕ್ಕೂ ಹೆಚ್ಚು ಆಡಿಷನ್‌ಗಳನ್ನು ನೀಡಿ ರಿಜೆಕ್ಟ್ ಆಗಿದ್ದರಂತೆ.
ದಾಸಪುರಂದರ ಧಾರಾವಾಹಿ ಸಮಯದಲ್ಲಿ ಸುಮಾರು ಒಂದು ವರ್ಷಗಳ ಕಾಲ ಪುಷ್ಪ ನಟನೆಕಲಿತಿದ್ದರಂತೆ. ಹೀಗಾಗಿ ನಟನೆಯಲ್ಲಿ ಆಸಕ್ತಿ ಜಾಸ್ತಿ.
ಅಮೂಲ್ಯ ಓದಿ ಬೆಳೆದಿದ್ದೆಲ್ಲಾ ಮೈಸೂರಿನಲ್ಲಿ ಧಾರಾವಾಹಿ ಕಾರಣಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಮೂಲ್ಯ ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಫುಡಿ.
ದಿನ ರುಚಿ ರುಚಿಯಾಗಿ ತಿನ್ನಲು ಇಷ್ಟ ಪಡುವ ಅಮೂಲ್ಯ ವರ್ಷ ಪೂರ್ತಿ ಬಿಸಿಬೇಳೆ ಬಾತ್ ತಿನ್ನಲು ಇಷ್ಟ ಪಡುತ್ತಾರೆ. ಇವರು ಪಕ್ಕಾ ವೆಜಿಟೇರಿಯನ್ ಅಂತೆ.
ಸದಾ ಸೀರೆಯಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಪುಷ್ಪಾ ರಿಯಲ್ ಜೀವನದಲ್ಲಿ ಸಖತ್ ಸ್ಟೈಲಿಷ್. ಇನ್‌ಸ್ಟಾಗ್ರಾಂನಲ್ಲಿ ಮಾಡರ್ನ್ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ಅಲ್ಲಲ್ಲೇ ಪುಷ್ಪ ನೀನು ಇಷ್ಟೋಂದು ಮಾಡರ್ನ್ ಅಂತಾನೇ ಗೊತ್ತಿಲ್ಲ...ನೀನು ಪುಷ್ಪಾ ಅಲ್ಲದೆ ಅಮೂಲ್ಯ ಆಗಿದ್ರೆ ನೋಡು ನಮ್ಮ ಆಕಾಶ್ ತಟ್ ಅಂತ ಇಷ್ಟ ಪಡುತ್ತಿದ್ದ ಅಂತ ಕಾಮೆಂಟ್ ಮಾಡಿದ್ದಾರೆ ನೆಟ್ಟಿಗರು.