ಬಿಗ್ ಬಾಸ್ ಸಂಭಾವನೆ ವಿಚಾರದಲ್ಲಿ ಬಕ್ರಾ ಆಗ್ಬಿಟ್ಟೆ, ಒಂದು ಟನ್ ಇಟ್ಟಿಗೆನೂ ಬರಲ್ಲ: ರಕ್ಷಕ್ ಬುಲೆಟ್
ಅತಿ ಕಡಿಮೆ ಸಂಭಾವನೆ ಪಡೆದ ಪಟ್ಟಿಯಲ್ಲಿ ರಕ್ಷಕಾ. ಇನ್ನಿತರ ಸ್ಪರ್ಧಿಗಳ ಸಂಭಾವನೆ ಕೇಳಿ ಬೇಸರ ಮಾಡಿಕೊಂಡ ರೈಸಿಂಗ್ ಸ್ಟಾರ್.
ಬುಲೆಟ್ ಪ್ರಕಾಶ್ ಪುತ್ರ 'ಗುರು ಶಿಷ್ಯರು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿದ್ದರು.
ಫಿನಾಲೆ ವಾರಕ್ಕೆ ಕಾಲಿಟ್ಟಿರುವ 10ನೇ ಸೀಸನ್‌ನ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಖಾಸಗಿ ಟಿವಿ ಸಂದರ್ಶನದಲ್ಲಿ ತಮ್ಮ ಸಂಭಾವನೆ ವಿಚಾರವನ್ನು ಚರ್ಚೆ ಮಾಡುತ್ತಾರೆ.
ಪೇಮೆಂಟ್ ವಿಚಾರದಲ್ಲಿ ನಿಜಕ್ಕೂ ಬಕ್ರಾ ಆಗ್ಬಿಟ್ಟೆ. ಅಂದು ಯಾವುದೋ ಮೂಡ್‌ನಲ್ಲಿ ಇದ್ದೆ ಯಾವುದೋ ಒಂದು ಕೆಲಸ ಆಗಬೇಕಿತ್ತು ಆಗಿರಲಿಲ್ಲ ಎಂದು ರಕ್ಷಕ್ ಹೇಳುತ್ತಾರೆ.
ಅಂದು ಸುಮ್ಮನೆ ಕಾಲ್ ಬಂದು ಆಯ್ತು ಅಂತ ಒಪ್ಪಿಕೊಂಡು ಬಿಟ್ಟೆ. ದುಡ್ಡಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಹೋಗಿ ಬಾ ಎಂದು ಮನೆಯಲ್ಲಿ ಹೇಳಿದ್ದರು ಎಂದುದ್ದಾರೆ ರಕ್ಷಕ್.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಕೆಲವರ ಪೇಮೆಂಟ್ ಕೇಳಿ ನನ್ನ ಹೊಟ್ಟೆ ಉರಿ ಆಯ್ತು. ಈಗ ಹೊರಗಡೆ ಪ್ರೋಗ್ರಾಂನಲ್ಲಿ ಆ ದುಡ್ಡನ್ನು ಕಿತ್ತುತ್ತಾ ಇರುವೆ.
ತುಂಬಾ ಕಡಿಮೆ ಪೇಮೆಂಟ್ ತೆಗೆದುಕೊಂಡಿರುವುದಕ್ಕೆ ಬೇಸರವಿದೆ. ಈಗ ಇನ್ನಿತರ ಕಾರ್ಯಕ್ರಮಗಳ ಮೂಲಕ ರಿಕವರಿ ಮಾಡಿಕೊಳ್ಳುತ್ತಿರುವೆ.
ಬಿಗ್ ಬಾಸ್‌ನಿಂದ ಬಂದ ಹಣದಲ್ಲಿ ಒಂದು ಮನೆ ಅಥವಾ ಜಾಗ ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದಾಗ ಎಲ್ಲರು ಇಲ್ಲ ಅಂತಾರೆ. ಅಲ್ಲೇ ಕುಳಿತಿದ್ದ ರಕ್ಷಕ್ ಬುಲೆಟ್ ಒಂದು ಟನ್ ಇಟ್ಟಿಗೆನೂ ಖರೀದಿ ಮಾಡೋಕೆ ಆಗಲ್ಲ.
ಈ ಕಾರ್ಯಕ್ರಮದಲ್ಲಿ ಮೈಕಲ್ ಅಜಯ್, ಪವಿ ಪೂವಪ್ಪ, ರಕ್ಷಕ್ ಬುಲೆಟ್, ಸ್ನೇಹಿತ್ ಮತ್ತು ನೀತು ವನಜಾಕ್ಷಿ ಭಾಗಿಯಾಗಿದ್ದರು. ಎಲ್ಲರೂ ತಮ್ಮ ಸಂಭಾವನೆಯನ್ನು ರಿವವೀಲ್ ಮಾಡಿದ್ದಾರೆ.