ರೂಪೇಶ್ ಶೆಟ್ಟಿ ಜೊತೆ ಬರ್ತೇ ಡೇ ಆಚರಿಸಿಕೊಂಡ ಸಾನ್ಯಾ ಆಯ್ಯರ್, ಮದ್ವೆ ಯಾವಾಗ ಕೇಳ್ತಿದ್ದಾರೆ ಫ್ಯಾನ್ಸ್!
ಬಿಗ್ ಬಾಸ್ ಖ್ಯಾತಿಯ ಸಾನ್ಯ ಅಯ್ಯರ್ ಇತ್ತೀಚಿಗೆ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಸಮಾರಂಭಕ್ಕೆ ರೂಪೇಶ್ ಶೆಟ್ಟಿ ಆಗಮಿಸಿದ್ದು, ಅಭಿಮಾನಿಗಳಂತೂ ಇಬ್ಬರನ್ನು ನೋಡಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದಿರುವ ಸಾನ್ಯಾ ಅಯ್ಯರ್ (Saanya Iyer) ಇತ್ತೀಚೆಗೆ ಗ್ರ್ಯಾಂಡ್ ಆಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಕಾರ್ಯಕ್ರಮಕ್ಕೆ ಬಿಗ್ ಬಾಸ್ ವಿನ್ನರ್ ಹಾಗೂ ಸಾನ್ಯ ಬೆಸ್ಟ್ ಫ್ರೆಂಡ್ ರೂಪೇಶ್ ಶೆಟ್ಟಿ ಸೇರಿ ಹಲವು ಸೆಲೆಬ್ರಿಟಿಗಳು ಆಗಮಿಸಿದ್ದರು.
ಪುಟ್ಟ ಗೌರಿಯ ಮದುವೆ ಮೂಲಕ ಬಾಲನಟಿಯಾಗಿ ಕಿರುತೆರೆಗೆ ಕಾಲಿಟ್ಟ ಸಾನ್ಯಾ ಅಯ್ಯರ್, ಬಳಿಕ ಬಿಗ್ ಬಾಸ್ ಒಟಿಟಿ ಮತ್ತು ಬಿಗ್ ಬಾಸ್ ಸೀಸನ್ 9 (Bigg Boss Season 9) ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದರು. ಇದೀಗ ಸಂಭ್ರಮದಿಂದ ತಮ್ಮ ಜನ್ಮ ದಿನ ಆಚರಿಸಿಕೊಂಡಿದ್ದಾರೆ.
ಬಿಳಿ ಬಣ್ಣದ ಡೀಪ್ ನೆಕ್ ಕ್ರಾಪ್ ಟಾಪ್ ಜೊತೆಗೆ ಟ್ರಾನ್ಸಪರೆಂಟ್ ಪ್ಯಾಂಟ್ ವಿತ್ ಕ್ರೀಂ ಕಲರ್ ಶಾರ್ಟ್ಸ್ ನಲ್ಲಿ ಸಾನ್ಯಾ ಅಯ್ಯರ್ ಸಿಕ್ಕಾಪಟ್ಟೆ ಮುದ್ದಾಗಿ ಕಾಣಿಸುತ್ತಿದ್ದರು. ತಮ್ಮ ಡ್ರೆಸ್ ಗೆ ಮ್ಯಾಚ್ ಆಗುವಂತೆ ನೆಕ್ ಪೀಸ್ ಧರಿಸಿದ್ದು, ತುಂಬಾನೆ ಸ್ಟೈಲಿಶ್ ಲುಕ್ ಅಲ್ಲಿ ಮಿಂಚಿದ್ದಾರೆ.
ಸಾನ್ಯಾ ಬರ್ತ್ ಡೇ ಸೆಲೆಬ್ರೇಷನ್ ಗೆ ಸಿನಿಮಾ ರಂಗದ ಸ್ನೇಹಿತರು, ಫ್ರೆಂಡ್ಸ್, ಜೊತೆಗೆ ಬಿಗ್ ಬಾಸ್ ನಲ್ಲಿ ಜೊತೆಯಾಗಿದ್ದ ಸ್ಪರ್ಧಿಗಳು, ತನ್ನ ಹೊಸ ಸಿನಿಮಾದ ನಾಯಕ್ ಸಮರ್ ಜಿತ್ ಲಂಕೇಶ್ ಕೂಡ ಆಗಮಿಸಿ ಶುಭ ಕೋರಿದ್ದರು.
ಸಾನ್ಯಾ ಹುಟ್ಟು ಹಬ್ಬಕ್ಕೆ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ (roopesh Shetty) ಆಗಮಿಸಿದ್ದು, ಇಬ್ಬರನ್ನು ಮತ್ತೆ ಜೊತೆಯಾಗಿ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಬಿಗ್ ಬಾಸ್ ಓಟಿಟಿ ಮತ್ತು ಬಿಗ್ ಬಾಸ್ ಸೀಸನ್ 9ರಲ್ಲಿ ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದರು. ಇಬ್ಬರಿಗೆ ಸಾಕಷ್ಟು ಫ್ಯಾನ್ ಪೇಜಸ್ ಕೂಡ ಹುಟ್ಟಿಕೊಂಡಿದೆ.
ಸಾನ್ಯಾ ಹುಟ್ಟುಹಬ್ಬದಲ್ಲಿ (Saanya Birthday) ರೂಪೇಶ್ ನೋಡಿದ ಅಭಿಮಾನಿಗಳು ಮತ್ತೆ ಮದುವೆ ಯಾವಾಗ ಎಂದು ಕೇಳಿದ್ದಾರೆ. ಇನ್ನೂ ಕೆಲವರು, ಇಬ್ಬರನ್ನು ನೋಡಿ ಖುಷಿಯಾಯ್ತು, ಯಾಕೆ ಸೋನು ಗೌಡನ್ನ ಕರಿಲಿಲ್ವಾ ಹುಟ್ಟು ಹಬ್ಬಕ್ಕೆ ಎಂದು ಪ್ರಶ್ನಿಸಿದ್ದಾರೆ.
ಸೆಪ್ಟೆಂಬರ್ 21ರಂದು ನಟಿ ಸಾನ್ಯಾ ಅಯ್ಯರ್ ಹುಟ್ಟುಹಬ್ಬ ಆಚರಿಸಿಕೊಂಡ್ರು. ಅನೇಕ ಸಿನಿಮಾ ನಟ-ನಟಿಯರು ಸಾನ್ಯಾಗೆ ಶುಭಕೋರಿದ್ರು. ಸಮಾರಂಭಕ್ಕೆ ಅನುಪಮಾ ಗೌಡ, ಕಾರ್ತಿಕ್ ಶರ್ಮಾ, ಬಿಗ್ ಬಾಸ್ ಖ್ಯಾತಿಯ ಆರ್ಯವರ್ಧನ್ ಮೊದಲಾದವರು ಆಗಮಿಸಿದ್ದರು.
ಇನ್ನು ಕರಿಯರ್ ವಿಷ್ಯ ಹೇಳೋದಾದ್ರೆ ಇದೀಗ ಸಾನ್ಯಾ ಇಂದ್ರಜಿತ್ ಲಂಕೇಶ್ ಅವರ ‘ಗೌರಿ’ ಸಿನಿಮಾದ ಮೂಲಕ ದೊಡ್ಡದಾಗಿ ಲಾಂಚ್ ಆಗಿದ್ದಾರೆ. ಈ ಸಿನಿಮಾದಲ್ಲಿ ಇಂದ್ರಜಿತ್ ಪುತ್ರ ಸಮರ್ ಜಿತ್ ಜೊತೆ ಸಾನ್ಯ ತೆರೆ ಹಂಚಿಕೊಂಡಿದ್ದಾರೆ.
ಸ್ಟಾರ್ ಡೈರೆಕ್ಟರ್ ಇಂದ್ರಜಿತ್ (Indrajeet Lankesh) ಕೂಡ ಸಾನ್ಯಾಗೆ ಬರ್ತ್ಡೇ ವಿಶ್ ಮಾಡಿದ್ದು. ಜೊತೆಯಾಗಿ ಪಾರ್ಟಿ ಮಾಡಿದ ಚಿತ್ರತಂಡ ಫೋಟೋಗೆ ಪೋಸ್ ನೀಡಿದೆ. ಇಡೀ ಚಿತ್ರತಂಡದ ಜೊತೆಯೂ ಸಾನ್ಯಾ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.