ಬ್ಲ್ಯಾಕ್ ಡ್ರೆಸ್ನಲ್ಲಿ ಕಿಚ್ಚು ಹಚ್ಚಿದ ಸಾನ್ಯಾ ಅಯ್ಯರ್: ಸಖತ್ ಹಾಟ್ ಮಗಾ ಎಂದ ಫ್ಯಾನ್ಸ್!
ನಟಿ ಸಾನ್ಯಾ ಐಯ್ಯರ್ ಸ್ವಿಮ್ಮಿಂಗ್ ಫೂಲ್ ಬಳಿ ಕುಳಿತು ಪೋಸ್ ಕೊಟ್ಟಿದ್ದಾರೆ. ನಟಿ ಬ್ಲ್ಯಾಕ್ ಕಲರ್ ಪ್ಯಾಂಟ್ ಹಾಗೂ ಟಾಪ್ ಧರಿಸಿಕೊಂಡು ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ.
ಸದಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಸಾನ್ಯಾ ಐಯ್ಯರ್ ಇದೀಗ ಬ್ಲ್ಯಾಕ್ ಡ್ರೆಸ್ ಧರಿಸಿ ಭರ್ಜರಿಯಾಗಿ ಪೋಸ್ ಕೊಟ್ಟಿದ್ದು, ವೈರಲ್ ಆಗಿದೆ.
ಬಿಗ್ ಬಾಸ್ 9 ಸೀಸನ್ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ ನಟಿ ಸಾನ್ಯಾ ಐಯ್ಯರ್ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆ್ಯಕ್ಟಿವ್. ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
ಹೌದು, ಸಾನ್ಯಾ ಸ್ವಿಮ್ಮಿಂಗ್ ಫೂಲ್ ಬಳಿ ಕುಳಿತು ಪೋಸ್ ಕೊಟ್ಟಿದ್ದಾರೆ. ನಟಿ ಬ್ಲ್ಯಾಕ್ ಕಲರ್ ಪ್ಯಾಂಟ್ ಹಾಗೂ ಟಾಪ್ ಧರಿಸಿಕೊಂಡು ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ. ಅವರ ಹೇರ್ಸ್ಟೈಲ್ ಕೂಡಾ ತುಂಬಾ ವಿಭಿನ್ನವಾಗಿದೆ.
ಇದನ್ನು ನೋಡಿದ ನೆಟ್ಟಿಗರು ಅಯ್ಯೋ ಹಿಂಗೆ ನೋಡ್ಬೇಡಿ ಮೇಡಂ ತುಂಬಾ ಲವ್ ಆಯ್ತದೇ ಅಂದಿದ್ದಾರೆ. ಅಲ್ಲದೇ ಅವರ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಗೌರಿ ಚಿತ್ರದ ಮೂಲಕ ಸಾನ್ಯಾ ಅಯ್ಯರ್ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಚಿತ್ರ ತಂಡದೊಂದಿಗೆ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ.
ಸಾನ್ಯಾ ಐಯ್ಯರ್ ಇತ್ತೀಚೆಗೆ ತುಂಬಾ ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಸಿನಿಮಾ ಮಾಡಲು ರೆಡಿಯಾಗಿರುವ ಈ ಬ್ಯೂಟಿ ಬಾಲಿವುಡ್ ಫೋಟೋಗ್ರಫರ್ ಜೊತೆಗೂ ಶೂಟ್ ಮಾಡಿಸಿಕೊಂಡಿದ್ದಾರೆ.
ಡ್ಯಾನ್ಸಿಂಗ್ ಚಾಂಪಿಯನ್ ಮತ್ತು ಡ್ಯಾನ್ಸಿಂಗ್ ಸ್ಟಾರ್ನಂತಹ ರಿಯಾಲಿಟಿ ಶೋಗಳಲ್ಲಿ ಸಾನ್ಯಾ ಐಯ್ಯರ್ ಅವರು ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.