ಲೆಕ್ಕಾಚಾರ ಹಾಕಿಲ್ಲ; ಬಿಗ್ ಬಾಸ್ ಸಂಭಾವನೆ ರಿವೀಲ್ ಮಾಡಿದ ಸಿರಿ
ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆದ ನಟಿ ಸಿರಿ. ಸೀರಿಯಲ್‌ಗಳಿಗಿಂತ ಬಿಗ್ ಬಾಸ್‌ನಲ್ಲಿ ನೋಡಿದ ಸಿರಿ ಅವರನ್ನು ಇಷ್ಟ ಪಟ್ಟ ನೆಟ್ಟಿಗರು. ಸಂಭಾವನೆ ಎಷ್ಟು ಇರಬಹುದು?

ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 10ರ ರಿಯಾಲಿಟಿ ಶೋನಲ್ಲಿ ಸಿಂಪಲ್ ಮತ್ತು ಕ್ಯೂಟ್ ಆಗಿ ಕಾಣಿಸಿಕೊಂಡ ಕಿರುತೆರೆ ನಟಿ ಸಿರಿ. 3 ತಿಂಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು. ಹೀಗಾಗಿ ಅವರ ಉಡುಪು ಮತ್ತು ಸಂಭಾವನೆ ಬಗ್ಗೆ ಪ್ರಶ್ನೆ ಮಾಡಲಾಗಿತ್ತು.
ಬಿಗ್ ಬಾಸ್ ಹೋಗುವ ಮುನ್ನ ಅಕ್ಕ ಮತ್ತು ಅಕ್ಕನ ಮಗಳು ಹಾಗೂ ಸ್ನೇಹಿತ ಪ್ರಭಾಕರ್ ಅವರು ನನ್ನ ವಸ್ತ್ರಗಳನ್ನು ಸೆಲೆಕ್ಟ್ ಮತ್ತು ಡಿಸೈನ್ ಮಾಡುವ ಜವಾಬ್ದಾರಿ ಹೊತ್ತಿದ್ದರು.
ನನ್ನ ಆನ್‌ಸ್ಕ್ರೀನ್ ಉಡುಪುಗಳ ಕ್ರೆಡಿಟ್ ಅವರಿಗೆ ಹೋಗಬೇಕು. ನಾನು ಕೇಳಿದ ಪ್ಯಾಟರ್ನ್‌ಗಳಲ್ಲಿ ಡಿಸೈನರ್‌ಗಳು ಮಾಡಿಕೊಟ್ಟರು ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಸಿರಿ ಮಾತನಾಡಿದ್ದಾರೆ
ನಾನು ಪಡೆದಿರುವ ಸಂಭಾವನೆ ವಿಚಾರವನ್ನು ರಿವೀಲ್ ಮಾಡುವಂತಿಲ್ಲ. ಸಂಭಾವನೆ ಲೆಕ್ಕಾಚಾರ ಮಾಡಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿಲ್ಲ.
ಒಂದು ದೊಡ್ಡ ಪ್ರಾಜೆಕ್ಟ್ ಮುಗಿಸಿಕೊಂಡು ಒಂದು ತಿಂಗಳ ಬ್ರೇಕ್‌ನಲ್ಲಿ ಇದ್ದೆ. ಅದೇ ಸಮಯದಲ್ಲಿ ಮತ್ತೊಂದು ಪ್ರಜೆಕ್ಟ್ ಬಂತು ನವೆಂಬರ್ ತಿಂಗಳಿನಲ್ಲಿ ಶುರು ಮಾಡಬೇಕಿತ್ತು.
ಬಿಗ್ ಬಾಸ್ ಆಫರ್ ಬಂದಾಗ ಬೇಡ ಅಂತ ಹೇಳಲು ಮನಸ್ಸು ಇರಲಿಲ್ಲ. ಸಮಯ ತೆಗೆದುಕೊಂಡು ಯೋಚನೆ ಮಾಡಿ ಒಪ್ಪಿಕೊಂಡಿ ಎಂದು ಸಿರಿ ಹೇಳಿದ್ದಾರೆ.
ಸೀರಿಯಲ್ ಹೊರತು ಪಡಿಸಿ ನಾನು ಯಾವ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ. ಜನರಿಗೆ ಹತ್ತಿರ ಆಗಬೇಕು. ಹೀಗಾಗಿ ಹಣ ಮುಖ್ಯವಾಗಲಿಲ್ಲ.
ಬಿಗ್ ಬಾಸ್ ಜರ್ನಿ ನನಗೆ ದೊಡ್ಡ ಅನುಭವ ಕೊಟ್ಟಿದ್ದೆ. ಮೂರು ತಿಂಗಳು ಅಲ್ಲಿ ಇರುತ್ತೀನಿ ಅಂದುಕೊಂಡಿರಲಿಲ್ಲ ಹೀಗಾಗಿ ಹಣ ರಿವೀಲ್ ಮಾಡುವುದು ಬೇಡ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.