ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ಹೊರ ಬಂದ ಶ್ರೇಷ್ಠ; ವೈಯಕ್ತಿಕ ಕಾರಣ ಕೊಟ್ಟ ನಟಿ!
ಭಾಗ್ಯಲಕ್ಷ್ಮಿ ಧಾರಾವಾಹಿಗೆ ಗುಡ್ ಬೈ ಹೇಳಿದ ನಟಿ ಗೌತಮಿ ಗೌಡ. ಮಿಸ್ ಮಾಡಿಕೊಳ್ಳುತ್ತೀವಿ ಎಂದು ಕಾಮೆಂಟ್ ಮಾಡಿದ ಅಭಿಮಾನಿಗಳು...

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಲವು ತಿಂಗಳುಗಳ ಹಿಂದೆ ಭಾಗ್ಯಲಕ್ಷ್ಮಿ ಧಾರಾವಾಹಿ ಆರಂಭವಾಗಿತ್ತು. ಪ್ರಮುಖ ಪಾತ್ರದಲ್ಲಿ ಸುಶ್ಮಾ ಮತ್ತು ಸುದರ್ಶನ್ ಕಾಣಿಸಿಕೊಂಡಿದ್ದಾರೆ.
ಧಾರಾವಾಹಿ ಅಂದ್ಮೇಲೆ ವಿಲನ್ ಇರ್ಬೇಕು ಅಲ್ವಾ? ಲೇಡಿ ವಿಲನ್ ಶ್ರೇಷ್ಠ ಪಾತ್ರದಲ್ಲಿ ಗೌತಮಿ ಗೌಡ ಕಾಣಿಸಿಕೊಳ್ಳುತ್ತಿದ್ದರು. ಇದ್ದಕ್ಕಿದ್ದಂತೆ ಹೊರ ನಡೆದಿದ್ದಾರೆ.
'ನನ್ನ ವೈಯಕ್ತಿಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಇಂದು ಹೊರ ಬರಬೇಕಾಯಿತ್ತು. ಇಷ್ಟು ದಿನ ನೆಗೆಟಿವ್ ಪಾತ್ರದಲ್ಲೂ ನನ್ನ ಒಪ್ಪಿ ಹರಸಿದ ನಿಮ್ಮಲ್ಲರಿಗೂ ನನ್ನ ಧನ್ಯವಾದಗಳು' ಎಂದು ಗೌತಮಿ ಗೌಡ ಬರೆದುಕೊಂಡಿದ್ದಾರೆ.
'ತುಂಬಾ ಕಷ್ಟದ ನಿರ್ಧಾರ ಆದರೆ ಅನಿವಾರ್ಯ ಪರಿಸ್ಥಿತಿ. ಆದಷ್ಟು ಬೇಗ ನಿಮಗೆ ಹೇಳುತ್ತೇನೆ. ನಗುನಗುತಾ ಹೊರ ಬಂದಿದ್ದೇನೆ. ಬೇರೆ ಯಾವುದೇ ಕಾರಣ ಇಲ್ಲ. ಇನ್ನು ಮುಂದೆಯೂ ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ' ಎಂದಿದ್ದಾರೆ.
ತಾಂಡವ್ ಪಾತ್ರದಲ್ಲಿ ಮಿಂಚುತ್ತಿರುವ ಸುದರ್ಶನ್ ರಂಗಪ್ರಸಾದ್ 'ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೀವಿ' ಎಂದು ಕಾಮೆಂಟ್ ಮಾಡಿದ್ದಾರೆ.
ಭಾಗ್ಯ ಮತ್ತು ತಾಂಡವ್‌ನ ದೂರ ಮಾಡಬೇಕು ಸಂಪೂರ್ಣ ಆಸ್ತೆಗೆ ಒಡತಿ ನಾನಾಗ ಬೇಕು ಎಂದು ಶ್ರೇಷ್ಠ ಮಕ್ಕಳಿಗೆ ಪಾಠ ಹೇಳಿಕೊಡುವ ನೆಪದಲ್ಲಿ ಮನೆ ಸೇರಿಕೊಂಡಿದ್ದಾರೆ.
ಗೌತಮಿ ಅವರ ಮುಂದಿನ ಪ್ರಾಜೆಕ್ಟ್ ಯಾವುದು? ಯಾವ ಕಥೆ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ರಿವೀಲ್ ಮಾಡಿಲ್ಲ. ಆದರೆ ಶುಭವಾಗಲಿ ಎಂದು ಕಾಮೆಂಟ್‌ಗಳು ಹರಿದು ಬಂದಿದೆ.