ಆ.7 ಮತ್ತು 8ರಂದು ಬಿಗ್‌ಬಾಸ್ ಸೀಸನ್ 8 ಫಿನಾಲೆ!
ಜನಪ್ರಿಯ ರಿಯಾಲಿಟಿ ಶೋ ಫಿನಾಲೆ ಹಂತ ತಲುಪುತ್ತಿದೆ. ಆಗಸ್ಟ್ 7 ಮತ್ತು 8ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
15

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ.

Bigg Boss New Season Sudeep
25

ಆಗಸ್ಟ್ 7 ಹಾಗೂ 8ರಂದು ಸಂಜೆ 6 ರಿಂದ ಫಿನಾಲೆ ಕಾರ್ಯಕ್ರಮ ನಡೆಯಲಿದೆ ಎಂದು ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ತಿಳಿಸಿದ್ದಾರೆ.

Big Boss Sudeep
35

ಈ ಬಗ್ಗೆ ಕನ್ನಡಪ್ರಭ ಜೊತೆಗೆ ಮಾತನಾಡಿದ ಅವರು, ‘ಬಿಗ್‌ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್‌ಗೆ ಅದ್ಭುತ ರೆಸ್ಪಾನ್ಸ್ ಬಂದಿದೆ. ಇದೊಂದು ಅನಿರೀಕ್ಷಿತ ಸಂಭ್ರಮ. ನಾನು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಬೇಕು ಅಂತ ಅಂದುಕೊಂಡಾಗ ಎಲ್ಲರೂ ಇದು ರಿಸ್ಕ್, ಬೇಡ ಅಂತಲೇ ಹೇಳಿದರು.'

Kiccha sudeep
45

' ನನಗೂ ಭಯ ಇತ್ತು. ಆದರೆ ಒಬ್ಬರಿಗೊಬ್ಬರು ಗೊತ್ತಿರೋದು ಅಥವಾ ಇಂಥವರೇ ಬರುತ್ತಾರೆ ಅನ್ನುವುದು ಯಾವ ರೀತಿಯಲ್ಲೂ ಈ ಆಟವನ್ನು ಬದಲಾಯಿಸಲ್ಲ ಅನ್ನೋದು ನನ್ನ ಬಲವಾದ ನಂಬಿಕೆ ಆಗಿತ್ತು. ಆ ನಂಬಿಕೆ ಮೇಲೆ ಹೋದೆ. ಅದು ಬಹಳ ಚೆನ್ನಾಗಿ ವರ್ಕ್ ಆಯ್ತು. ಶೇ.50 ರಷ್ಟುವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಯ್ತು. ಭರ್ಜರಿ ಯಶಸ್ಸು ಸಿಕ್ಕಿತು’ ಎಂದಿದ್ದಾರೆ.

sudeep bigg boss 8
55

‘ಬಿಗ್‌ಬಾಸ್ ಫಿನಾಲೆ ಎಂದಿನ ಜೋಶ್‌ನಲ್ಲೇ ನಡೆಯಲಿದ್ದು, ವಿಜೇತರಿಗೆ 50 ಲಕ್ಷ ರು. ಕ್ಯಾಶ್‌ಪ್ರೈಸ್ ಸಿಗಲಿದೆ. ರನ್ನರ್ ಅಪ್‌ಗೂ ಉತ್ತಮ ಮೊತ್ತ ಸಿಗಲಿದೆ. ಜೊತೆಗೆ ಪ್ರಾಯೋಜಕರ ಮೂಲಕ ಐದೂ ಜನ ಸ್ಪರ್ಧಿಗಳಿಗೂ ಈ ಬಾರಿ ಬಹುಮಾನ ಸಿಗಲಿದೆ’ ಎಂದೂ ತಿಳಿಸಿದ್ದಾರೆ

Bigg boss sudeep
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos