ಬಿಗ್ ಬಾಸ್ ಆಫರ್‌ನೇ ತಿರಸ್ಕರಿಸಿದ 'ರಾಮಚಾರಿ' ಸಹೋದರಿಯರು; ಅದ್ವಿತಿ - ಅಶ್ವಿತಿ ಪೋಸ್ಟ್ ವೈರಲ್!
ಯಾರು ನಂಬಲ್ಲ ಬಿಗ್ ಬಾಸ್ ಆಫರ್ ತಿರಸ್ಕರಿಸಿದ ಅವಳಿ ಸಹೋರಿಯರು. ಪೋಸ್ಟ್ ವೈರಲ್.....
ಕಲರ್ಸ್ ಕನ್ನಡ ಬಿಗ್ ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮಕ್ಕೆ ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ ಖ್ಯಾತಿಯ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ ಸ್ಪರ್ಧಿಸುತ್ತಾರೆ ಎಂದು ಸುದ್ದಿಯಾಗಿತ್ತು.
ಆದರೆ ನಾವು ಬಿಗ್ ಬಾಸ್‌ಗೆ ಹೋಗುತ್ತಿಲ್ಲ ಎಂದು ಅವಳಿ ಸಹೋದರಿಯರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ಸ್ಪಷ್ಟನೆ ಕೊಟ್ಟಿದ್ದಾರೆ.
'ಎಲ್ಲರಿಗೂ ನಮಸ್ಕಾರ. ಈ ವರ್ಷ ನಾನು ಬಿಗ್ ಬಾಸ್ ಹೋಗ್ತಿದ್ದೀನಾ ಎಂಬುದರ ಬಗ್ಗೆ ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ ಮೆಸೇಜ್ ಮಾಡುತ್ತಿದ್ದಾರೆ'
'ಈ ಬಗ್ಗೆ ನಾನು ಸ್ಪಷ್ಟನೆ ಕೊಡುತ್ತಿದ್ದೇನೆ. ಅಶ್ವಿತಿ ಹಾಗೂ ನನಗೆ ಬಿಗ್ ಬಾಸ್ ಕಡೆಯಿಂದ ಕರೆ ಬಂದಿದ್ದು ಸತ್ಯ.' ಎಂದು ಬರೆದುಕೊಂಡಿದ್ದಾರೆ.
'ನಮಗೆ ಬಿಗ್ ಬಾಸ್ ವೇದಿಕೆ ಮೇಲೆ ಗೌರವ ಇದೆ. ಹೀಗಾಗಿ ಯಾವುದೇ ತಯಾರಿ ಇಲ್ಲದೆ ಅಲ್ಲಿಗೆ ಹೋಗಲು ನಮಗೆ ಇಷ್ಟವಿಲ್ಲ' ಎಂದು ಹೇಳಿದ್ದಾರೆ.
'ಬಿಗ್ ಬಾಸ್ ಒಂದು ಉತ್ತಮ ಅವಕಾಶ. ಕಲಾವಿದರಾಗಿ ಆ ವೇದಿಕೆ ಮೇಲೆ ಗೌರವ ಇಟ್ಟು ಒಳ್ಳೆಯ ಮತ್ತು ಪಾಸಿಟಿವ್ ಆಲೋಚನೆಗಳೊಂದಿಗೆ ಅಲ್ಲಿಗೆ ಹೋಗಬೇಕು'
'ಆದರೆ ಕಳೆದ ಕಲವು ತಿಂಗಳುಗಳಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನಾವು ನಿತ್ರಾಣಗೊಂಡಿದ್ದೇವೆ. ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸಿಲ್ಲ'
'ಅಪ್ಪನ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸುತ್ತಿದ್ವಿ. ಆದರೆ ಅಪ್ಪ ಈ ನಮ್ಮೊಂದಿಗಿಲ್ಲ. ಆ ನೋವು ನಮಗೆ ಕಾಡುತ್ತಿದೆ. ಇಂತಹ ಸಮಯದಲ್ಲಿ ತಾಯಿಯನ್ನಯ ಬಿಟ್ಟು ಹೋಗುವುದಕ್ಕೆ ನಮಗೆ ಕಷ್ಟಕರ ನಿರ್ಧಾರ. ಹೀಗಾಗಿ ಒಪಗಪಿಕೊಳ್ಳಲಿಲ್ಲ' ಎಂದಿದ್ದಾರೆ.