ಕೊನೆಗೂ ಕನಸಿನಂತೆ ಮನಾಲಿಯಲ್ಲಿ ವೆಡ್ಡಿಂಗ್ ಆನಿವರ್ಸರಿ ಸಂಭ್ರಮಿಸಿದ ಲಾವಣ್ಯ -ಶಶಿ ಜೋಡಿ !
ಕಿರುತೆರೆಯ ಮುದ್ದಾದ ಜೋಡಿಗಳಾದ ಲಾವಣ್ಯ ಭಾರಧ್ವಜ್ ಮತ್ತು ಶಶಿಧರ್ ಹೆಗ್ಡೆ ತಮ್ಮ ಎರಡನೇ ವಿವಾಹ ವಾರ್ಷಿಕೊತ್ಸವದ ಸಂಭ್ರಮದಲ್ಲಿದ್ದಾರೆ. ಕಾಶ್ಮೀರಕ್ಕೆ ತೆರಳಿ ಎಂಜಾಯ್ ಮಾಡ್ತಿದ್ದಾರೆ ಜೋಡಿ.
ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಮುದ್ದಾದ ರಿಯಲ್ ಜೋಡಿ ಎಂದರೆ ಅದು ಲಾವಣ್ಯ ಭಾರಧ್ವಜ್ (Lavanya Bharadwaj) ಮತ್ತು ಶಶಿಧರ್ ಹೆಗ್ಡೆ (Shashidhar Hegde). ಈ ಜೋಡಿ ಇದೀಗ ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಆ ಕುರಿತು ವಿಡೀಯೋ ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
ಲಾವಣ್ಯ ಭಾರಧ್ವಜ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆನಿವರ್ಸರಿ ಸ್ಪೆಷಲ್ ವಿಡಿಯೋ ಅಪ್ ಲೋಡ್ ಮಾಡಿದ್ದು, ಹೀಗೆ ಅಜ್ಜಿ, ತಾತ ಆಗೋಣ ಎಂದು ಕ್ಯಾಪ್ಶನ್ ಹಾಕಿದ್ದಾರೆ. ವಿಡಿಯೋದಲ್ಲಿ ಲಾವಣ್ಯ ವಿಂಟರ್ ವೇರ್, ವೂಲನ್ ಕ್ಯಾಪ್ ಧರಿಸಿ, ಹಿಮದ ಮೇಲೆ ಮಲಗಿ ತುಂಬಾ ಖುಷಿಯಾಗ್ತಿದೆ ಇವತ್ತು, ಹ್ಯಾಪಿ ಆನಿವರ್ಸರಿ (Anniversary) ಚಿನ್ನ ಎಂದಿದ್ದಾರೆ.
ಶಶಿ ಲಾವಣ್ಯ ಹತ್ತಿರ ಬಂದು ಐ ಲವ್ ಯೂ ಎಂದು ಮಂಜನ್ನು ಲಾವಣ್ಯ ಮೇಲೆ ಎಸೆದಿದ್ದು, ಲಾವಣ್ಯ ಕೂಡ ಲವ್ ಯು ಟೂ ಎಂದಿದ್ದಾರೆ. ಹಿನ್ನೆಲೆಯಲ್ಲಿ ಏನೇ ಬರಲಿ ಜೊತೆಯಾಗಿ, ನೀನೆ ನನ್ನ ಕಥೆಯಾಗಿ ನೀಡುವ ಬಂಧನ ಎನ್ನುವ ಹಾಡು ಪ್ಲೇ ಆಗುತ್ತಿದ್ದು, ಇಬ್ಬರ ಮದುವೆ ಮತ್ತು ಪ್ರಿವೆಡ್ಡಿಂಗ್ ವಿಡಿಯೋ, ಜೊತೆಗೆ ಮಂಜಿನಲ್ಲಿ ಎಂಜಾಯ್ ಮಾಡ್ತಿರೋ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.
ಮನಾಲಿಗೆ ಹೋಗಬೇಕೆನ್ನೋದು ಲಾವಣ್ಯ ಅವರ ಬಹುದಿನಗಳ ಕನಸು. ಮದುವೆಯಾಗೋ ಮೊದಲೇ ಹನಿಮೂನ್ ಗೆ ಮನಾಲಿ ಹೋಗಬೇಕೆಂದು ಪ್ಲ್ಯಾನ್ ಮಾಡಿದ್ದ ಲಾವಣ್ಯ, ಆದ್ರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಲಾವಣ್ಯ ಮಗು ಬೇಕಂದ್ರೆ ಮನಾಲಿ ಮತ್ತೊಂದು ಫಾರಿನ್ ಟ್ರಿಪ್ ಮಾಡ್ಲೇಬೇಕು ಎಂದಿದ್ದರು. ಇದೀಗ ವಿಡಿಯೋ ನೋಡಿದ್ರೆ ಆ ಕನಸು ನನಸಾದಂತಿದೆ.
ಶಶಿ ಮತ್ತು ಲಾವಣ್ಯ ಇಬ್ಬರೂ ನಟರೇ ಇಬ್ಬರೂ ರಾಜಾ ರಾಣಿ ಸೀರಿಯಲ್ ನಲ್ಲಿ ಜೊತೆಯಾಗಿ ಅಣ್ಣ ತಂಗಿಯಾಗಿ ನಟಿಸುತ್ತಿದ್ದ ಸಮಯದಲ್ಲಿ ಲವ್ವಲ್ಲಿ ಬಿದ್ದಿದ್ದ ಈ ಜೋಡಿ, ನಂತರ ಪೋಷಕರ ಒಪ್ಪಿಗೆ ಪಡೆದು 2022 ರಲ್ಲಿ ಇಬ್ಬರೂ ಮದುವೆನೂ ಆದ್ರು. ಇದೀಗ ಎರಡನೇ ವರ್ಷದ ಸಂಭ್ರಮದಲ್ಲಿದ್ದಾರೆ ಜೋಡಿ.
ಸದ್ಯ ಈ ಜೋಡಿ ಝೀ ಕನ್ನಡದಲ್ಲಿ ತಮ್ಮ ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಲಾವಣ್ಯ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಮಾಧವನ ಸೊಸೆ ಪೂರ್ಣಿ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಶಶಿ ಹೆಗ್ಡೆ ಝೀಕನ್ನಡದಲ್ಲಿ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಭೂಮಿಕಾ ತಮ್ಮನಾಗಿ ಅಭಿನಯಿಸುತ್ತಿದ್ದಾರೆ.
ಲವ್ ಡೇಟಿಂಗ್ ಮಾಡಿ 4 ವರ್ಷ ಮತ್ತು ಮದುವೆಯಾಗಿ ಎರಡು ವರ್ಷ ಪೂರ್ಣಗೊಳಿಸಿರುವ ಈ ಜೋಡಿ ಝೀ ಕನ್ನಡದ ಜೋಡಿ ನಂ 1 ಸೀಸನ್ 2ನಲ್ಲೂ ಸಹ ಭಾಗವಹಿಸಿದ್ದು, ವಿಜೇತರಾಗಿ ಹೊರಹೊಮ್ಮಿದ್ದರು. ಇದೀಗ ವಾರ್ಷಿಕೋತ್ಸವ ಸಂಭ್ರಮಿಸುತ್ತಿರುವ ಈ ಜೋಡಿಗೆ ಯಾವುದೇ ದೃಷ್ಟಿ ಬೀಳದೆ, ನೂರಾರು ಕಾಲ ಸುಖವಾಗಿ ಬಾಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.