ವಿದೇಶದಲ್ಲಿ ದುಬಾರಿ ಕಾರು ಖರೀದಿ ಮಾಡಿದ ಕಿರುತೆರೆ ನಟಿ ಅರ್ಚನಾ ದಂಪತಿ!
'ಮನೆದೇವ್ರು' ಧಾರಾವಾಹಿ ಖ್ಯಾತಿಯ ನಟಿ ಅರ್ಚನಾ ಹಾಗೂ ಪತಿ ವಿಘ್ನೇಶ್ ಶರ್ಮಾ. ವಿದೇಶದಲ್ಲಿ ಇವರಿಬ್ಬರ ಕ್ರೇಜಿ ಲೋಕವಿದು...
ಕನ್ನಡ ಕಿರುತೆರೆ ವಾಹಿನಿಯ ಜನಪ್ರಿಯ ನಟಿ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ ಹಾಗೂ ನಟ ವಿಘ್ನೇಶ್ ಶರ್ಮಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ವಿದೇಶದಲ್ಲಿ ನೆಲೆಸಿದ್ದಾರೆ.
ಇಬ್ಬರೂ ತಮ್ಮ ಹೊಸ ಜೀವನ ಶೈಲಿ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಅಪ್ಡೇಟ್ ಮಾಡುತ್ತಾರೆ.
ಇದೀಗ ಅರ್ಚನಾ ಪತಿ ಜೊತೆ ಸೇರಿ ದುಬಾರಿ ಮರ್ಸಿಡಿಸ್ ಬೆಂಜ್ ಜಾಕ್ಸನ್ವಿಲ್ಲೆ ಕಾರು ಖರೀದಿಸಿದ್ದಾರೆ.
ದಂಪತಿ ಕಾರು ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ.
'ಹೊಸ ಆರಂಭ, ಹೊಸ ಜೀವನ. ಎಲ್ಲವೂ ಹೊಸದು. ಜೀವನ ಸದಾ ಖುಷಿಯಿಂದ ಆಸಕ್ತಿದಾಯಕವಾಗಿರುವುದು,' ಎಂದು ಹೇಳಿಕೊಂಡಿದ್ದಾರೆ.
'ಮದುಭಾಲ', 'ಮನೆದೇವ್ರು' ಧಾರಾವಾಹಿಗಳು ಸೇರಿ 2 ತಮಿಳು ಧಾರಾವಾಹಿಗಳಲ್ಲಿ ಅರ್ಚನಾ ಅಭಿನಯಿಸಿದ್ದಾರೆ.
ವಿದೇಶದಲ್ಲಿ HR ಅಗಿ ಕೆಲಸ ಮಾಡುತ್ತಿದ್ದಾರೆ.