- Home
- Entertainment
- TV Talk
- ಬೊಗಳುವ ನಾಯಿ ಕಚ್ಚಲ್ಲ, ಅಪಹಾಸ್ಯ ಮಾಡಿದ್ರೆ ದುರಂಕಾರ; ಟ್ರೋಲಿಗರಿಗೆ ಬ್ರಹ್ಮಾಂಡ ಗುರೂಜಿ ತಿರುಗೇಟು
ಬೊಗಳುವ ನಾಯಿ ಕಚ್ಚಲ್ಲ, ಅಪಹಾಸ್ಯ ಮಾಡಿದ್ರೆ ದುರಂಕಾರ; ಟ್ರೋಲಿಗರಿಗೆ ಬ್ರಹ್ಮಾಂಡ ಗುರೂಜಿ ತಿರುಗೇಟು
ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಟ್ರೋಲ್ ಅಗುವ ಬ್ರಹ್ಮಾಂಡ ಗುರೂಜಿ. ರಘುರಾಮ್ ಯುಟ್ಯೂಬ್ ಚಾನಲ್‌ನಲ್ಲಿ ಕೊಟ್ಟ ಉತ್ತರವಿದು....

ಸಾಮಾಜಿಕ ಜಾಲತಾನದಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುವ ಹಾಗೂ ಅತಿ ಹೆಚ್ಚಾಗಿ ಟ್ರೋಲ್ ಆಗುವ ವ್ಯಕ್ತಿ ಅಂದ್ರೆ ಬ್ರಹ್ಮಾಂಡ ಗುರೂಜಿ. ಟ್ರೋಲ್ ಮಾಡುವವರಿಗೆ ಹಾಗೂ ಕಾಲೆಳೆಯುವವರಿಗೆ ರಘುರಾಮ್ ಯುಟ್ಯೂಬ್ ಚಾನೆಲ್‌ನಲ್ಲಿ ಉತ್ತರ ಕೊಟ್ಟಿದ್ದಾರೆ.
ಬೊಗಳುವ ನಾಯಿ ಕಚ್ಚುವುದಿಲ್ಲ ಅನ್ನೋ ರೀತಿ ಸಾಮಾನ್ಯವಾಗಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಜೀವನದಲ್ಲಿ ಬದುಕಿ ಸುಖವಾಗಿ ಇರಬೇಕು ತೀರಾ ಚಿಂತನೆ ಮಾಡಬಾರದು.
ಒಬ್ರು ಬಂದು ಹೇಳಿದ್ದರು ಗುರುಗಳೇ ನಿಮ್ಮನ್ನು ಆ ಟಿವಿಯಲ್ಲಿ ಆ ವ್ಯಕ್ತಿ ಬೈಯುತ್ತಿದ್ದರು ಎಂದು ಹೇಳಿದಾಗ ನಾನು ಅವರನ್ನು ದೂರ ಇಟ್ಟುಬಿಡುತ್ತೀನಿ. ಆ ವಿಡಿಯೋಗಳನ್ನು ನೋಡಿದರೆ ನನ್ನ ನೆಮ್ಮದಿ ಹಾಳಾಗುತ್ತದೆ ಹೀಗಾಗಿ ಆ ವಿಡಿಯೋ ನೋಡಿಲ್ಲ ಎಂದು ಹೇಳಿಬಿಡುತ್ತೀನಿ.
ಆ ಮಾಧ್ಯಮ ಈ ಮಾಧ್ಯಮ ಟ್ರೋಲ್ ಅಂತ ನೂರೆಂಟು ಇದೆ ಆದರೆ ನಾನು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಹಾಸ್ಯ ಮಾಡಿದರೆ ಸಂತೋಷ ಪಡುತ್ತೀನಿ ಅಪಹಾಸ್ಯ ಮಾಡಿದರೆ ದುರಹಂಕಾರ ಅಂದುಕೊಂಡು ಸುಮ್ಮನಾಗುತ್ತೀನಿ.
ಸಗಣಿ ಮೇಲೆ ಕಲ್ಲು ಹಾಕಿದರೆ ಅದು ನಮ್ಮ ಮೇಲೆ ಎಗರುತ್ತದೆ ಹೀಗಾಗಿ ದೂರ ಇದ್ದರೆ ವಾಸಿ. ಕೆಲವೊಂದು ಸಮಯದಲ್ಲಿ ಕೆಲವೊಂದು ರೀತಿಯಲ್ಲಿ ಯಾವುದೇ ಮೀಡಿಯಾ ಆಗಲಿ ಅದು ನಮ್ಮ ಅಗತ್ಯವಾಗಿರುತ್ತದೆ ಅದರಿಂದ ನಮಗೆ ಅಗತ್ಯ ಇರುವ ಮೆಸೇಜ್ ಮಾತ್ರ ತೆಗೆದುಕೊಳ್ಳಬೇಕು.
ನಾವು ಚೆನ್ನಾಗಿದ್ದರೂ ಜನ ಆಡಿಕೊಳ್ಳುತ್ತಾರೆ ಚೆನ್ನಾಗಿ ಇಲ್ಲದಿದ್ದರೂ ಆಡಿಕೊಳ್ಳುತ್ತಾರೆ ಅವರಿಗೆ ತಲೆ ಕೆಡಿಸಿಕೊಳ್ಳಬಾರದು. ಆನೆ ನಡೆದಿದ್ದೇ ದಾರಿ ಎಂದು ನಮ್ಮ ಪಾಡಿಗೆ ನಾವು ನಡೆದುಕೊಂಡು ಹೋಗಬೇಕು.