- Home
- Entertainment
- TV Talk
- Brahmagantu Serial: ಅಕ್ಕನ ಮಾತು ಕೇಳಿ ದೀಪಾಗೆ ಬಡಿಯಿತು ಸಿಡಿಲು! ತ್ಯಾಗಮಯಿ, ಗಂಡನನ್ನು ಬಿಟ್ಟು ಕೊಡ್ತಾಳಾ?
Brahmagantu Serial: ಅಕ್ಕನ ಮಾತು ಕೇಳಿ ದೀಪಾಗೆ ಬಡಿಯಿತು ಸಿಡಿಲು! ತ್ಯಾಗಮಯಿ, ಗಂಡನನ್ನು ಬಿಟ್ಟು ಕೊಡ್ತಾಳಾ?
‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ, ದಿಶಾ ರೂಪದಲ್ಲಿ ಸೌಂದರ್ಯಗೆ ಸೆಡ್ಡು ಹೊಡೆಯುತ್ತಿರುವ ದೀಪಾ, ತನ್ನ ಗಂಡ ಚಿರುವನ್ನು ಪಡೆಯುವ ಅಕ್ಕ ರೂಪಾಳ ಉದ್ದೇಶ ತಿಳಿದು ಆಘಾತಕ್ಕೊಳಗಾಗಿದ್ದಾಳೆ. ಹೆಜ್ಜೆ ಹೆಜ್ಜೆಗೂ ಅವಮಾನಿಸಿದರೂ ಅಕ್ಕನ ಮೇಲಿನ ಮಮಕಾರ ತೋರುವ ದೀಪಾ ಗಂಡನನ್ನು ಬಿಟ್ಟುಕೊಡ್ತಾಳಾ?

ಅತೀ ಎನ್ನುವಷ್ಟು ಒಳ್ಳೆಯತನ
ಸೀರಿಯಲ್ ಎಂದರೆ ಹಾಗೆನೇ, ನಾಯಕ, ನಾಯಕಿಯರನ್ನು ಅತಿ ಹೆಚ್ಚು ಎನ್ನುವ ರೀತಿಯಲ್ಲಿ ಒಳ್ಳೆಯರನ್ನಾಗಿ ಮಾಡುವುದು ಬಹುತೇಕ ಧಾರಾವಾಹಿಗಳಲ್ಲಿ ಮಾಮೂಲು. ನಿಜ ಜೀವನದಲ್ಲಿ ಇಂಥ ಅತಿಯಾದ ಒಳ್ಳೆಯವರು ಇರುವುದಿಲ್ಲವೆಂದೇನಲ್ಲ. ಆದರೂ ಸೀರಿಯಲ್ಗಳಲ್ಲಿ ತುಸು ಹೆಚ್ಚೇ ಒಳ್ಳೆಯನ ತೋರಿಸಲಾಗುತ್ತದೆ. ಅದರಲ್ಲಿ ಒಂದು ಕ್ಯಾರೆಕ್ಟರ್ ಬ್ರಹ್ಮಗಂಟು (Brahmagantu Serial) ನಾಯಕಿ ದೀಪಾಳದ್ದು.
ಸೌಂದರ್ಯಳ ಬೆವರು ಇಳಿಸ್ತಿರೋ ದೀಪಾ
ವಿಲನ್ ಸೌಂದರ್ಯ ವಿರುದ್ಧ ಸಿಡಿದೆದ್ದು ಆಕೆಯ ಬೆವರು ಇಳಿಸುತ್ತಿರುವ ದೀಪಾ, ಅದೇ ಇನ್ನೊಂದೆಡೆ ತನ್ನ ಜೀವನವನ್ನೇ ಹಾಳು ಮಾಡಿರೋ ಅಕ್ಕ ರೂಪಾ ವಿರುದ್ಧ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾಳೆ. ಹೆಜ್ಜೆ ಹೆಜ್ಜೆಗೂ ಅವಮಾನ ಮಾಡಿದರೂ ಅಕ್ಕ ಎನ್ನುವ ಮಮಕಾರ ಆಕೆಯದ್ದು. ಇದು ಸೀರಿಯಲ್ ಪ್ರೇಮಿಗಳನ್ನು ಕೆರಳಿಸುತ್ತಿದೆ ಕೂಡ.
ಪಿಎ ಆಗಿ ನೇಮಕ
ಇದೀಗ ಚಿರುವಿಗೆ ರೂಪಾ ಮೇಲೆ ಪ್ರೀತಿ ಬರುವಂತೆ ಮಾಡಲು ಸೌಂದರ್ಯ ಅವಳನ್ನು ತನ್ನ ಪಿಎ ಆಗಿ ನೇಮಿಸಿಕೊಂಡಿದ್ದಾಳೆ. ಆದರೆ ಅದೇ ಇನ್ನೊಂದೆಡೆ ದಿಶಾ ಬಂದ ಮೇಲೆ ಚಿರು ಮತ್ತು ದಿಶಾಳನ್ನು ಒಂದು ಮಾಡಲು ನೋಡುತ್ತಿದ್ದಾಳೆ. ದೀಪಾನೇ ಆಗಿರೋ ದಿಶಾ ಮಾತ್ರ ಹೆಜ್ಜೆಹೆಜ್ಜೆಗೂ ಸೌಂದರ್ಯಳಿಗೆ ಅವಮಾನ ಮಾಡುತ್ತಿದ್ದಾಳೆ.ಆದರೆ ತನ್ನ ಉದ್ದೇಶ ಈಡೇರಲು ಎಲ್ಲವನ್ನೂ ಸಹಿಸಿಕೊಳ್ತಿದ್ದಾಳೆ ಸೌಂದರ್ಯ.
ರೂಪಾಳನ್ನು ಬಚಾವ್ ಮಾಡುವ ದೀಪಾ
ಇದೀಗ ದಿಶಾಳ ಮೇಲಿನ ಸಿಟ್ಟನ್ನು ಸೌಂದರ್ಯ ರೂಪಾಳ ಮೇಲೆ ತೋರಿಸಿದಾಗಲೆಲ್ಲಾ ದಿಶಾ ರೂಪದಲ್ಲಿ ಇರುವ ದೀಪಾ ಬಂದು ಅಕ್ಕನನ್ನು ಬಚಾವ್ ಮಾಡುತ್ತಿದ್ದಾಳೆ.
ಅಕ್ಕಳಿಗೆ ಸಹಾಯ
ಕೊನೆಗೆ ಹಾಸ್ಟೆಲ್ಗೆ ಹೋಗಿ ಅಕ್ಕನಿಗೆ ಸಹಾಯ ಮಾಡಲು ಹೋದಾಗಲೂ ದುಡ್ಡನ್ನು ಮುಖದ ಮೇಲೆ ಎಸೆದು ಕಳುಹಿಸಿದ್ದಾಳೆ ರೂಪಾ. ಇಷ್ಟೆಲ್ಲಾ ಆದರೂ ದೀಪಾಳಿಗೆ ಅಕ್ಕನ ಮೇಲೆ ಪ್ರೀತಿ.
ರೂಪಾಳ ಉದ್ದೇಶ ತಿಳಿದ ದೀಪಾ
ಇದೀಗ ದೀಪಾ, ನೀವ್ಯಾಕೆ ಹಾಸ್ಟೆಲ್ನಲ್ಲಿ ಇರಬೇಕು, ಮನೆಗೆ ಹೋಗಿ. ಇಲ್ಲಿ ಇಷ್ಟೊಂದು ಇನ್ಸಲ್ಟ್ ಮಾಡಿಕೊಂಡು ಇರುವ ಕೆಲಸ ಬೇಕಾ ಎಂದಾಗ ತಾನು ಇಲ್ಲಿಗೆ ಬಂದಿರುವ ಉದ್ದೇಶವನ್ನು ಹೇಳುತ್ತಾಳೆ ರೂಪಾ.
ದೀಪಾಳ ಮುಂದಿನ ನಡೆದ ಏನು?
ಅದೇ ಚಿರುವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶ ಎಂದಾಗ ದೀಪಾ ಬೆಚ್ಚಿ ಬೀಳುತ್ತಾಳೆ. ಶಾಕ್ ಆಗುತ್ತಾಳೆ ದೀಪಾ. ತುಂಬಾ ತ್ಯಾಗಮಯಿ ಅಲ್ವಾ, ಗಂಡನನ್ನು ಬಿಟ್ಟುಕೊಡು ಎಂದು ನೆಟ್ಟಿಗರು ದೀಪಾಳ ಒಳ್ಳೆಯತನಕ್ಕೆಟೀಕಿಸಿ ಹೇಳುತ್ತಿದ್ದಾರೆ. ಗಂಡನನ್ನು ಅಕ್ಕನಿಗೆ ಬಿಟ್ಟುಕೊಟ್ಟುಬಿಡು, ತ್ಯಾಗಮಯಿ ಅಲ್ವಾ ಎನ್ನುತ್ತಿದ್ದಾರೆ. ದೀಪಾಳ ಮುಂದಿನ ನಡೆದ ಏನು?