MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • BBK 12: ಕನ್ನಡ ಸರಿಯಾಗಿ ಬರಲ್ಲ ಎಂದು Rakshitha Shetty ಸುಳ್ಳು ಹೇಳ್ತಿದ್ದಾರಾ? ಅಶ್ವಿನಿ SN ಹೇಳಿದ್ದೇನು?

BBK 12: ಕನ್ನಡ ಸರಿಯಾಗಿ ಬರಲ್ಲ ಎಂದು Rakshitha Shetty ಸುಳ್ಳು ಹೇಳ್ತಿದ್ದಾರಾ? ಅಶ್ವಿನಿ SN ಹೇಳಿದ್ದೇನು?

ಬಿಗ್​ಬಾಸ್​ ಮನೆಯಲ್ಲಿ ರಕ್ಷಿತಾ ಶೆಟ್ಟಿಯವರ ಕನ್ನಡ ಭಾಷೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅವರು ಉದ್ದೇಶಪೂರ್ವಕವಾಗಿ ಅರ್ಧಂಬರ್ಧ ಕನ್ನಡ ಮಾತನಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಬಗ್ಗೆ ಮನೆಯಿಂದ ಹೊರಬಂದಿರುವ ಸ್ಪರ್ಧಿ ಅಶ್ವಿನಿ SN ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

1 Min read
Suchethana D
Published : Oct 22 2025, 12:34 PM IST
Share this Photo Gallery
  • FB
  • TW
  • Linkdin
  • Whatsapp
16
ರಕ್ಷಿತಾ ಹವಾ
Image Credit : Asianet News

ರಕ್ಷಿತಾ ಹವಾ

ಸದ್ಯ ಬಿಗ್​ಬಾಸ್​ (Bigg Boss)ನಲ್ಲಿ ರಕ್ಷಿತಾ ಶೆಟ್ಟಿಯ ಹವಾ ಜೋರಾಗಿಯೇ ಇದೆ. ಕೆಲ ದಿನಗಳ ಹಿಂದೆ ಇವರ ವೈಯಕ್ತಿಕ ನಿಂದನೆ ಮಾಡುವ ಮೂಲಕ ಜಾನ್ವಿ ಮತ್ತು ಅಶ್ವಿನಿ ಗೌಡ ಸುದೀಪ್​ ಅವರಿಂದ ತರಾಟೆಗೆ ಒಳಗಾಗಿದ್ದರ ಜೊತೆಗೆ ವೀಕ್ಷಕರಿಂದಲೂ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಇದೀಗ ಈ ಬಗ್ಗೆ ಖುದ್ದು ಜಾನ್ವಿ ಕೂಡ ಮಾಡಿರೋದು ತಪ್ಪಾಗಿದೆ ಎಂದು ಕಣ್ಣೀರು ಇಟ್ಟಿದ್ದಾರೆ.

26
ಕನ್ನಡದ ಬಗ್ಗೆ ಸುಳ್ಳು ಹೇಳ್ತಿದ್ದಾರಾ ರಕ್ಷಿತಾ?
Image Credit : Asianet News

ಕನ್ನಡದ ಬಗ್ಗೆ ಸುಳ್ಳು ಹೇಳ್ತಿದ್ದಾರಾ ರಕ್ಷಿತಾ?

ಇದರ ನಡುವೆಯೇ ರಕ್ಷಿತಾ ಶೆಟ್ಟಿ ಅವರಿಗೆ ಕನ್ನಡ ಬಂದರೂ ಸುಳ್ಳು ಹೇಳ್ತಿರೋದಾಗಿ ಬಿಗ್​ಬಾಸ್​​ ಮನೆಯಲ್ಲಿ ಗುಸುಗುಸು ಶುರುವಾಗಿತ್ತು. ತುಳು ನಾಡಿನ ರಕ್ಷಿತಾ ಶೆಟ್ಟಿ ಅವರು ಅರ್ಧಂಬರ್ಧ ಕನ್ನಡ ಮಾತನಾಡುತ್ತಲೇ ಸಕತ್​ ಫೇಮಸ್​ ಆದವರು. ಇವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್​ ಹೊಂದಿರುವುದಕ್ಕೂ ಒಂದು ಇದೇ ಕಾರಣ.

Related Articles

Related image1
Lakshmi Nivasa ಜಯಂತ್​ಗೆ ಪ್ರಶಸ್ತಿಯಲ್ಲಿ ಅನ್ಯಾಯ? ನಟ ದೀಪಕ್​ ಅಭಿಮಾನಿಗಳು ಸಿಕ್ಕಾಪಟ್ಟೆ ಗರಂ
Related image2
Bigg Bossಗೆ ಎಂಟ್ರಿ ಕೊಡುತ್ತಲೇ ಷರ್ಟ್​ ಬಿಚ್ಚಿ ಹೆಣ್ಮಕ್ಕಳ ಎದೆಬಡಿತ ತಪ್ಪಿಸಿರೋ ಸೂರಜ್​ ಯಾರು? ಕೆನಡಾದಿಂದ ಬಂದದ್ಯಾಕೆ?
36
ಅವಕಾಶ ಸಿಕ್ಕಿದ್ದೂ ಇದಕ್ಕಾಗಿಯೇ
Image Credit : colors kannada instagram

ಅವಕಾಶ ಸಿಕ್ಕಿದ್ದೂ ಇದಕ್ಕಾಗಿಯೇ

ಅಷ್ಟೇ ಅಲ್ಲದೇ ಇವರಿಗೆ ಇದೇ ಅರ್ಧಂಬರ್ಧ ಕನ್ನಡದ ಖ್ಯಾತಿಯೇ ಬಿಗ್​ಬಾಸ್​ ಮನೆಯೊಳಕ್ಕೂ ಹೋಗಲು ಅವಕಾಶ ಕಲ್ಪಿಸಿದೆ. ಕನ್ನಡ ಭಾಷೆ ಅಲ್ಲದಿದ್ದರೂ ಕನ್ನಡವನ್ನು ಕಲಿತು ಇಷ್ಟಾದರೂ ಮಾತನಾಡುತ್ತಾರೆ ಎಂದು ಅವರ ಅಭಿಮಾನಿಗಳೂ ಅಂದುಕೊಳ್ಳುವುದು ಇದೆ. ಆದರೆ ನಿಜಕ್ಕೂ ಇವರು ಫೇಕ್​ ಮಾಡ್ತಿದ್ದಾರಾ?

46
ರಕ್ಷಿತಾ ಕನ್ನಡದ ಚರ್ಚೆ
Image Credit : Colors Kannada

ರಕ್ಷಿತಾ ಕನ್ನಡದ ಚರ್ಚೆ

ರಕ್ಷಿತಾ ಶೆಟ್ಟಿಯ ಕನ್ನಡದ ಬಗ್ಗೆ ಬಿಗ್​ಬಾಸ್​ ಸ್ಪರ್ಧಿಗಳಲ್ಲಿ ಒಂದು ಹಂತದಲ್ಲಿ ಚರ್ಚೆಯಾಗಿತ್ತು. ಆಕೆ ಫೇಕ್​ ಮಾಡುತ್ತಿದ್ದಾಳೆ ಎಂದಿದ್ದರು ಕೆಲವರು. ಇದೀಗ ಬಿಗ್​ಬಾಸ್​​ನಿಂದ ಹೊರಬಂದಿರುವ ಅಶ್ವಿನಿ SN (Bigg Boss Ashwini SN) ಈ ಬಗ್ಗೆ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

56
ಜಗಳ ಮಾಡುವಾಗ...
Image Credit : Instagram

ಜಗಳ ಮಾಡುವಾಗ...

ಜಗಳ ಮಾಡುವಾಗ ರಕ್ಷಿತಾ ಕನ್ನಡವನ್ನು ಫ್ಲುಯೆಂಟ್​ ಆಗಿಯೇ ಮಾತನಾಡ್ತಾರೆ, ಬೇರೆ ಸಮಯದಲ್ಲಿ ಅರ್ಧಂಬರ್ಧ ಮಾತನಾಡ್ತಾರೆ. ಸೋ ಒಂದು ಹಂತದಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು ನಿಜ ಎಂದಿದ್ದಾರೆ.

66
ತುಂಬಾ ದಿನ ಫೇಕ್​ ಆಗಲ್ಲ
Image Credit : Instagram

ತುಂಬಾ ದಿನ ಫೇಕ್​ ಆಗಲ್ಲ

ಆದರೆ ಯಾರದ್ದೇ ಮಾತೃಭಾಷೆ ಕನ್ನಡ ಆಗಿದ್ದರೆ, ಅವರು ತುಂಬಾ ದಿನ ಫೇಕ್​ ಮಾಡಲು ಆಗುವುದಿಲ್ಲ. ಒಂದಿಲ್ಲೊಂದು ದಿನ ಅದು ಬಹಿರಂಗವಾಗಲೇಬೇಕು. ಆದ್ದರಿಂದ ರಕ್ಷಿತಾ ಶೆಟ್ಟಿ ಅವರು ಫೇಕ್​ ಮಾಡುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ ಎಂದು ಹೇಳಿದ್ದಾರೆ ಅಶ್ವಿನಿ SN

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ರಕ್ಷಿತ್ ಶೆಟ್ಟಿ
ಬಿಗ್ ಬಾಸ್
ಕಿಚ್ಚ ಸುದೀಪ್
ಕಲರ್ಸ್ ಕನ್ನಡ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved