ಬಾಲಿವುಡ್‌ಗೆ ಹಾರಿದ್ರೂ ತುಳುನಾಡ ಸಂಸ್ಕೃತಿ ಮರೆಯದ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ
actress shilpa shetty visit mangaluru : ನಟಿ ಶಿಲ್ಪಾ ಶೆಟ್ಟಿ ಮಂಗಳೂರಿನವರು. ಇಂದು ಮುಂಬೈನಲ್ಲಿ ಸೆಟಲ್ ಆಗಿದ್ದರೂ ಕೂಡ ಅವರು ತಮ್ಮ ಮಾತೃಭಾಷೆ ತುಳು, ತುಳುನಾಡಿನ ಸಂಸ್ಕೃತಿಯನ್ನು ಮರೆಯೋದಿಲ್ಲ. ವರ್ಷಕ್ಕೊಮ್ಮೆ ಮಂಗಳೂರಿಗೆ ಬಂದು, ಇಲ್ಲಿನ ದೇವಸ್ಥಾನಗಳಿಗೆ ಅವರು ಭೇಟಿ ಕೊಡ್ತಾರೆ. ಈಗ ಅವರು ಮಂಗಳೂರಿಗೆ ಭೇಟಿ ಕೊಟ್ಟು, ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
15

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಮಂಗಳೂರಿನ ದೇವಸ್ಥಾನಕ್ಕೆ ಭೇಟಿ ಕೊಟ್ಟು, ದೇವರ ಆಶೀರ್ವಾದ ಪಡೆದಿದ್ದಾರೆ. ಇದು ನನ್ನ ಬೇರು ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
25
ಶಿಲ್ಪಾ ಶೆಟ್ಟಿ ಅವರು ತಾಯಿ, ಸಹೋದರಿ ಶಮಿತಾ ಶೆಟ್ಟಿ ಅವರೊಂದಿಗೆ ಮಂಗಳೂರಿಗೆ ಭೇಟಿ ಕೊಟ್ಟಿದ್ದಾರೆ. ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಅವರು ದೇವಸ್ಥಾನಕ್ಕೆ ತೆರಳಿದ್ದಾರೆ.
35
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಮಗಳು ಸಮಿಶಾ ಶೆಟ್ಟಿ, ಮಗ ವಿಯಾನ್, ಶಮಿತಾ ಶೆಟ್ಟಿ, ತಾಯಿ ಜೊತೆಗೆ ಮಂಗಳೂರಿಗೆ ಭೇಟಿ ಕೊಟ್ಟಿದ್ದಾರೆ.
45
ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಮಾತ್ರ ಹಾಜರಿ ಹಾಕಿರಲಿಲ್ಲ. ಕೆಲಸದ ನಿಮಿತ್ತ ರಾಜ್ ಕುಂದ್ರಾ ಬಂದಿರಲಿಲ್ಲ ಎಂದು ಕಾಣುತ್ತದೆ.
55
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಂಗಳೂರು ಮಲ್ಲಿಗೆ ಹೂ ಮುಡಿದಿದ್ದಾರೆ. ಇನ್ನು ಅವರು ಸಿನಿಮಾಗಳಲ್ಲಿ ಕೂಡ ಬ್ಯುಸಿ ಆಗುತ್ತಿದ್ದಾರೆ.
Latest Videos