ನಿವೇದಿತಾ ಗೌಡ ಮನೆಯಲ್ಲಿ ದೀಪಾವಳಿ ಸಂಭ್ರಮ: ಲಂಗ ದಾವಣಿಯಲ್ಲಿ ಮಿಂಚಿದ ಮಿಸಸ್ ಶೆಟ್ಟಿ!
ಬಿಗ್ ಬಾಸ್ ಸ್ಪರ್ಧೆಯಾಗಿದ್ದ ನಿವೇದಿತಾ ಗೌಡ ಮನೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಲಂಗ ದಾವಣಿಯುಟ್ಟು ನಟಿ ನಿವೇದಿತಾ ಗೌಡ ಮಿಂಚುತ್ತಿದ್ದಾರೆ.
ನಿವೇದಿತಾ ಗೌಡ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಜೋರಾಗಿಯೇ ಆಚರಿಸುತ್ತಾರೆ. ನಿವಿ ಪತಿ ಚಂದನ್ ಶೆಟ್ಟಿ ನಿವಾಸದಲ್ಲಿ ಬೆಳಕಿನ ಹಬ್ಬದ ಸಡಗರ ಸಂಭ್ರಮ ಇದೀಗ ಜೋರಾಗಿದೆ.
ಹಬ್ಬಕ್ಕೆಂದು ನಟಿ ನಿವೇದಿತಾ ಗೌಡ ಲಂಗ ದಾವಣಿಯುಟ್ಟಿದ್ದಾರೆ. ಟ್ರೆಡಿಷನಲ್ ಲುಕ್‌ನಲ್ಲಿ ಕ್ಯಾಮೆರಾಗೆ ಕ್ಯೂಟ್ ಪೋಸ್ ಕೊಟ್ಟಿರುವ ಫೋಟೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಾಡಿನ ಜನತೆಗೆ ದೀಪಾವಳಿ ಶುಭಾಶಯವನ್ನು ತಿಳಿಸಿದ್ದಾರೆ.
ಲಂಗ ದಾವಣಿಯಲ್ಲಿ ನಿವೇದಿತಾ ಗೌಡ ಫೋಟೋಗೆ ಪೋಸ್ ಕೊಟ್ಟಿದ್ದು, ಸಖತ್ ವೈರಲ್ ಆಗಿದೆ. ಅಭಿಮಾನಿಗಳು ನಿವಿ ಫೋಟೋಗೆ ಲೈಕ್ಗಳ ಸುರಿಮಳೆಗೈದಿದ್ದಾರೆ. ಜೊತೆಗೆ ಅವರಿಗೂ ದೀಪಾವಳಿ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.
ಬಾರ್ಬಿ ಡಾಲ್ ಎಂದೇ ಫೇಮಸ್ ಆದವರು ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಇದ್ದಾರೆ. ಸದಾ ರೀಲ್ಸ್ ಮಾಡುತ್ತಲೇ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.
ನಿವೇದಿತಾ ಇನ್ಸ್ಟಾಗ್ರಾಮ್ನಲ್ಲಿ ಹಾಕುವ ಎಲ್ಲಾ ವಿಡಿಯೋಗಳು ಸಕತ್ ಸುದ್ದಿ ಮಾಡುತ್ತೆ. ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್ಗಳೂ ಬರುತ್ತವೆ.
ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಸುಮಾರು 1.6 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ನಿವೇದಿತಾ ಅವರು ಈವರೆಗೂ 1,765 ಪೋಸ್ಟ್ಗಳನ್ನು ಮಾಡಿದ್ದಾರೆ. ನಿವೇದಿತಾ ಗೌಡಗೆ ಅಪಾರ ಅಭಿಮಾನಿ ಬಳಗ ಕೂಡ ಇದೆ.