ಅಬ್ಬಬ್ಬಾ! ಬಿಗ್ ಬಾಸ್ ಫಿನಾಲೆಯಲ್ಲಿ 1 ಲಕ್ಷ ರೂ. ಬಟ್ಟೆ ಧರಿಸಿದ ನಾಗಾರ್ಜುನ; ಫೋಟೋ ನೋಡಿ ನೆಟ್ಟಿಗರು ಶಾಕ್
ಬಿಗ್ ಬಾಸ್ ಫಿನಾಲೆಯಲ್ಲಿ 1 ಲಕ್ಷ ರೂ. ಬಟ್ಟೆ ಧರಿಸಿದ ನಾಗಾರ್ಜುನಾ; ಸೋತವರಿಗೆ ಆ ದುಡ್ಡು ಕೊಡ್ಬೋದಿತ್ತು ಎಂದ ನೆಟ್ಟಿಗರು
ತೆಲುಗು ಸ್ಟಾರ್ ನಟ ನಾಗಾರ್ಜುನ ನೇತೃತ್ವದಲ್ಲಿ ಮೂಡಿ ಬರುವ ತೆಲುಗು ಬಿಗ್ ಬಾಸ್ ಸೀಸನ್ 7 ಸಖತ್ ವಿಜೃಂಭಣೆಯಲ್ಲಿ ನಡೆಯಿತ್ತು. ರೈತ ಪಲ್ಲವಿ ಪ್ರಕಾಶ್ ಟ್ರೋಫಿ ಹಿಡಿದರು.
ತೆಲಂಗಾಣದ ಸಣ್ಣ ಊರಿನಲ್ಲಿ ಯುಟ್ಯೂಬ್ ಮಾಡಿಕೊಂಡು ಹೆಸರು ಮಾಡಿರುವ ರೈತ, ಕಾಮನ್ ಮ್ಯಾನ್ ಪಲ್ಲವಿ ಪ್ರಕಾಶ್ ಬಿಗ್ ಬಾಸ್ ಟ್ರೋಫಿ ಮತ್ತು 35 ಲಕ್ಷ ರೂಪಾಯಿ ಗೆದ್ದಿದ್ದಾರೆ.
ಅಮರ್‌ದೀಪ್ ಎರಡನೇ ಸ್ಥಾನ ಪಡೆದಿದ್ದಾರೆ. ಸಖತ್ ಅದ್ಧೂರಿಯಾಗಿ ನಡೆದ ಫಿನಾಲೆಯಲ್ಲಿ ನಾಗಾರ್ಜುನ ಧರಿಸಿದ ಬಟ್ಟೆ ನೆಟ್ಟಿಗರ ಗಮನ ಸೆಳೆದಿದೆ.
ವರುಣ್ ಚಕ್ಕಿಲಮ್ ಡಿಸೈನ್ ಮಾಡಿರುವ ಎಬೋನಿ ಬ್ಲಾಕ್ ಮೆಟಾಲಿಕ್ ಓಪನ್ ಜಾಕೆಟ್ ಸೆಟ್ ಬಟ್ಟೆಗೆ ಬರೋಬ್ಬರಿ 1 ಲಕ್ಷದ 10 ಸಾವಿರ ರೂಪಾಯಿ ಎನ್ನಲಾಗಿದೆ.
ಇಡೀ ಬಿಗ್ ಬಾಸ್ ಸೀಶನ್‌ನಲ್ಲಿ ನಾಗಾರ್ಜುನ ಧರಿಸಿರುವ ಬಟ್ಟೆಗಳನ್ನು ಶ್ರಾವ್ಯ ಶರ್ಮಾ ಸ್ಟೈಲಿಂಗ್ ಮಾಡಿರುವುದು. ಸೋಷಿಯಲ್ ಮೀಡಿಯಾದಲ್ಲಿ ಪ್ರತಿಯೊಂದು ಉಡುಪಿನ ಬಗ್ಗೆ ಮಾಹಿತಿ ಶೇರ್ ಆಗಿರುತ್ತದೆ.
ಬೆಲೆ ಕೇಳಿ ಶಾಕ್ ಆದ ನೆಟ್ಟಿಗರು ಹತ್ತಿರದಿಂದ ಬಟ್ಟೆ ನೋಡಿ ಮತ್ತೊಮ್ಮೆ ಶಾಕ್ ಆಗಿದ್ದಾರೆ. ಮಾರ್ಕೆಟ್‌ನಲ್ಲಿ ಮೀಟರ್ ಲೆಕ್ಕದಲ್ಲಿ ಬಟ್ಟೆ ತೆಗೆದುಕೊಂಡು ಹೊಲಿದರೂ ಇಷ್ಟು ದುಡ್ಡು ಆಗಲ್ಲ ಏಂದು ಕಾಲೆಳೆದಿದ್ದಾರೆ.