ಬಿಗ್ ಬಾಸ್ ಸುಂದರಿಯರ ಜೊತೆ ರಾಕೇಶ್ ಅಡಿಗ ಪಾರ್ಟಿ; 'ಸಪ್ಪೆ ಗ್ಯಾಂಗ್' ಎಂದ ಅನುಪಮಾ
ಬಿಗ್ ಬಾಸ್ ರನ್ನರ್ ಅಪ್ ರಾಕೇಶ್ ಅಡಿಗ ಅಮೂಲ್ಯಾ ಗೌಡ, ಅನುಪಮಾ, ದಿವ್ಯಾ ಸೇರಿದಂತೆ ಕೆಲವರ ಜೊತೆ ಪಾರ್ಟಿ ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ 9 ಮುಕ್ತಾಯವಾಗಿ ಅನೇಕ ದಿನಗಳೇ ಆಗಿದೆ. ಬಿಗ್ ಬಾಸ್ ಬಳಿಕ ಸ್ಪರ್ಧಿಗಳು ಒಟ್ಟಿಗೆ ಸೇರಿ ಪಾರ್ಟಿ ಮಾಡುವುದು ಸಾಮಾನ್ಯ. ಇದೀಗ ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಅಡಿಗ ಸುಂದರಿಯಾರ ಜೊತೆ ಪಾರ್ಟಿ ಮಾಡುದ್ದಾರೆ. ರಾಕೇಶ್ ಮತ್ತು ಹುಡುಗಿಯರ ಜೊತೆ ಮಾಡಿದ ಪಾರ್ಟಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ರಾಕೇಶ್ ಜೊತೆ ಪಾರ್ಟಿಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಅಮೂಲ್ಯಾ ಗೌಡ, ದಿವ್ಯಾ ಉರುಗುಡ, ನೇಹಾ ಗೌಡ, ಅನುಪಮಾ ಗೌಡ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ, ಸಂಭ್ರಮಿಸಿದ್ದಾರೆ. ಎಲ್ಲರಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಎಲ್ಲರ ಜೊತೆಯೂ ಸ್ನೇಹ ಬಾಂಧವ್ಯದಿಂದ ಇದ್ದರು. ಹೆಚ್ಚಾಗಿ ಅಮೂಲ್ಯಾ ಗೌಡ ಜೊತೆ ಆಪ್ತರಾಗಿದ್ದರು. ಇಬ್ಬರ ನಡುವೆ ಸ್ನೇಹಿಕ್ಕಿಂತ ಮಿಗಿಲಾದ ಬಂಧವಿದೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ. ಬಿಗ್ ಬಾಸ್ ಇಬ್ಬರೂ ಒಟ್ಟಿಗೆ ಸೇರಿದ್ದರು. ಕೆಫೆಯಲ್ಲಿ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇದೀಗ ಮತ್ತೆ ಪಾರ್ಟಿ ವಿಚಾರವಾಗಿ ಒಂದಾಗಿದ್ದಾರೆ.
ಇತ್ತೀಚಿಗಷ್ಟೆ ದಿವ್ಯಾ ಉರುಡುಗ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದೀಗ ಎಲ್ಲರೂ ಒಟ್ಟಿಗೆ ಸೇರಿ ದಿವ್ಯಾ ಬರ್ತಡೇ ಆಚರಿಸಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ದಿವ್ಯಾ ಉರುಡುಗಾಗೆ ವಿಶ್ ಮಾಡಿ ಅನುಪಮಾ ಗೌಡ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಶುಭಾಶಯದ ಜೊತೆಗೆ ಬಿಸಿ ನೀರು ಕೊಡದ. ಪ್ರೀತಿ, ಸ್ನೇಹಾ, ಖುಷಿ ಬಡಿಸಿದ. ಸಪ್ಪೆ ಹೋಟೆಲ್ಲು ಗ್ಯಾಂಗ್ ಎಂದು ಹೇಳಿದ್ದಾರೆ.
ಅನುಪಮಾ ಗೌಡ ಫೋಟೋಗಳಿಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಮೆಚ್ಚಿಕೊಂಡರೆ ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ದಿವ್ಯಾ ಉರುಡುಗ ಡವ್ ರಾಣಿ ಎಂದು ಹೇಳುತ್ತಿದ್ದಾರೆ. ಆಕೆಯನ್ನು ದೂರ ಇಡಿ ಎಂದು ಓರ್ವ ಕಾಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಬಳಿಕ ಸ್ಪರ್ಧಿಗಳು ಏನ್ಮಾಡ್ತಾರೆ ಎನ್ನುವ ಕುತೂಹಲ ಕೂಡ ಇತ್ತು. ಅನೇಕರು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಕೆಲವರು ಸಿನಿಮಾ ಮಾಡುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 9 ರೂಪೇಶ್ ಶೆಟ್ಟಿ ಗೆದ್ದಿದ್ದರು. ರನ್ನಪ್ ಆಪ್ ಆಗಿ ರಾಕೇಶ್ ಹೊರಹೊಮ್ಮಿದ್ದರು.