ಬಿಗ್‌ಬಾಸ್ ಸೀಸನ್ 10 ಮಹಾಭಾರತಕ್ಕೆ ಹೋಲಿಕೆ: ಶ್ರೀಕೃಷ್ಣ ಕಿಚ್ಚ ಸುದೀಪ್, ಶಕುನಿ ತುಕಾಲಿ ಸಂತು, ದ್ರೌಪದಿ ಯಾರು ಗೊತ್ತಾ?
ಕಲರ್ಸ್ ಕನ್ನಡದ ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ಎರಡನೇ ವಾರಕ್ಕೆ ಕಾಲಿಟ್ಟಿರುವುದು ಗೊತ್ತೇ ಇದೆ. ಈಗ ಟ್ರೋಲರ್ಸ್ ಬಿಗ್‌ಬಾಸ್ ಮನೆಯ ಎಲ್ಲ ಕಂಟೆಸ್ಟಂಟ್‌ಗಳನ್ನು ಮಹಾಭಾರತದ ಪಾತ್ರಗಳಿಗೆ ಹೋಲಿಕೆ ಮಾಡಿದ್ದಾರೆ.
ಗಿಚ್ಚಿ ಗಿಲಿಗಿಲಿ ಖ್ಯಾತಿಯ ತುಕಾಲಿ ಸಂತು ಅವರನ್ನು ಬಿಬ್‌ಬಾಸ್ ಮನೆಯಲ್ಲಿ ಶಕುನಿ ಪಾತ್ರಕ್ಕೆ ಹೋಲಿಕೆ ಮಾಡಲಾಗಿದ್ದು, ಮನೆಯ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ಮಾಡಿ ಜಗಳ ತಂದಿಡುತ್ತಾನೆ ಎಂದು ಬಿಂಬಿಸಲಾಗಿದೆ.
ಕನ್ನಡದ ಬಿಗ್‌ಬಾಸ್ 10 ಸೀಸನ್ ನಲ್ಲಿ ಧಾರಾವಾಹಿ ನಟ ಕಾರ್ತಿಕ್ ಅವರು ಸ್ಟ್ರಾಂಗ್ ಕಂಟೆಸ್ಟಂಟ್ ಆಗಿದ್ದಾರೆ. ಹೀಗಾಗಿ, ಕಾರ್ತಿಕ್‌ಗೆ ಅರ್ಜುನನ ಪಾತ್ರ ಹಂಚಿಕೆ ಮಾಡಲಾಗಿದೆ.
ಬಿಗ್‌ಬಾಸ್ 10 ಸೀಸನ್ ನಡೆಸಿಕೊಡುತ್ತಿರುವ ನಿರೂಪಕ ಹಾಗೂ ಖ್ಯಾತ ನಟ ಕಿಚ್ಚ ಸುದೀಪ್ ಅವರನ್ನು ಮಹಾಭಾರತದ ಸೂತ್ರಧಾರಿ ಶ್ರೀ ಕೃಷ್ಣನಿಗೆ ಹೋಲಿಕೆ ಮಾಡಲಾಗಿದೆ.
ಡ್ರೋನ್ ಪ್ರತಾಪ್ ಅವರನ್ನು ಇಡೀ ಕರ್ನಾಟಕದ ಬಹುಭಾಗ ಜನರು ಸುಳ್ಳುಗಾರ ಎಂದು ನಂಬಿದ್ದು, ಬಿಗ್ ಬಾಸ್ ಮನೆಯಲ್ಲೂ ಆತನನ್ನು ಎಲ್ಲರೂ ವಿಭಿನ್ನವಾಗಿ ನೋಡುತ್ತಿದ್ದಾರೆ. ಹೀಗಾಗಿ, ಟ್ರೋಲರ್ಸ್ ಪ್ರತಾಪ್‌ಗೆ ಕರ್ಣನ ಪಾತ್ರ ಕೊಟ್ಟಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಎಲ್ಲರಿಗೂ ನೇರವಾಗಿ ಮಾತನಾಡುವ ವಿನಯ್‌ಗೆ ಮಹಾಭಾರತದ ಕೌರವರ ಹಿರಿಯ ದುರ್ಯೋಧನ ಪಾತ್ರವನ್ನು ಹಂಚಿಕೆ ಮಾಡಲಾಗಿದೆ.
ಮಹಾಭಾರತದಲ್ಲಿ ದ್ರೌಪದಿ ಸೀರೆಯನ್ನು ಸೆಳೆದು ಸೇಡು ಹಾಗೂ ಯುದ್ಧಕ್ಕೆ ಮುನ್ನುಡಿ ಬರೆದ ದುಶ್ಯಾಸನ ಪಾತ್ರವನ್ನು ದಿ.ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್‌ಗೆ ನೀಡಲಾಗಿದೆ.
ಬೆಂಗಳೂರಿನ ನಿವಾಸಿ ಆಗಿದ್ದರೂ ಯಾವುದೇ ಐಷಾರಾಮಿ ಜೀವನಕ್ಕೆ ಒಗ್ಗಿಕೊಳ್ಳದೇ ಕನ್ನಡ ನಾಡಿನ ಪ್ರಸಿದ್ಧ ಗೋ ತಳಿಯಾದ ಹಳ್ಳಿಕಾರ್ ತಳಿ ಸಂರಕ್ಷಣೆ ಮಾಡುತ್ತಿರುವ ಸಂತೋಷ್‌ಗೆ ಭೀಮನ ಪಾತ್ರ ಹಂಚಿಕೆ ಮಾಡಲಾಗಿದೆ. ದ್ರೌಪದಿ ಪಾತ್ರವನ್ನೂ ಸ್ಯಾಂಡಲ್‌ವುಡ್ ನಟಿಗೆ ಹೋಲಿಸಲಾಗಿದ್ದು, ಅದು ಅವರಿಗೆ ಯಾವ ರೀತಿ ಒಪ್ಪುತ್ತೋ ಎಂಬುವುದು ಮಾತ್ರ ಅರ್ಥವಾಗುತ್ತಿಲ್ಲ.
https://www.instagram.com/reel/Cykgh69SOCE/?igshid=MWQyMGUwaGh5aHdzMA%3D%3D