ಸ್ನೇಹಿತರ ಮದುವೆಯಲ್ಲಿ ಸಂಗೀತಾ ಶೃಂಗೇರಿ;ಎಲ್ಲೋದ್ರೂ ಸನ್ಮಾನ್ ಮಾಡಿಸಿಕೊಳ್ಳುತ್ತಿರುವುದಕ್ಕೆ ನೆಟ್ಟಿಗರಿಂದ ಟೀಕೆ....
ಮದುವೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ಸಂಗೀತಾ ಶೃಂಗೇರಿ. ಎಲ್ಲೋದ್ರೂ ಸನ್ಮಾನ್ ಮಾಡಿಸಿಕೊಳ್ಳುತ್ತಿರುವುದಕ್ಕೆ ನೆಟ್ಟಿಗರಿಂದ ಟೀಕೆ....
ಜನ ಮೆಚ್ಚಿದ ಹರಹರ ಮಹಾದೇವ್ ಧಾರಾವಾಹಿಯಲ್ಲಿ ಸತಿ ಪಾತ್ರದಲ್ಲಿ ಮಿಂಚಿ ಕನ್ನಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾದ ಸಂಗೀತಾ ಶೃಂಗೇರಿ.
ಬಿಗ್ ಬಾಸ್ ಸೀಸನ್ 10ರಲ್ಲಿ ಟಫ್ ಫೈಟ್ ಕೊಟ್ಟು, ಹುಡುಗರಿಗೆ ಚಾಲೆಂಜ್ ಮಾಡಿದ ಗಟ್ಟಿಗಿತ್ತಿ ಸಂಗೀತಾ ಶೃಂಗೇರಿ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಗಳಿಸಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಸಂಗೀತಾ ಸಾಕಷ್ಟು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸ್ನೇಹಿತರ ಮದುವೆ, ಶೂ ರೂಮ್ ಓಪನಿಂಗ್...ಹೀಗೆ.....
ಸಂಗೀತಾ ಎಲ್ಲೇ ಹೋದರು ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ ಅಷ್ಟೇ ಅಲ್ಲದೆ ಶಾಲು, ಪೇಟಾ, ಹಾರ ಹಾಕಿ ಸನ್ಮಾನ ಮಾಡುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಜನರ ಪ್ರೀತಿ ಮತ್ತು ಸನ್ಮಾನವನ್ನು ಸಂಗೀತಾ ಶೃಂಗೇರಿ ಎಂಜಾಯ್ ಮಾಡುತ್ತಿರಬಹುದು ಆದರೆ ನೆಟ್ಟಿಗರು ನೆಗೆಟಿವ್ ಆಗಿ ಟ್ರೋಲ್ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಯಾವ ಸಾಧನೆ ಮಾಡಿದ್ದೀರಿ ಎಂದು ಇಷ್ಟೋಂದು ಸನ್ಮಾನ ಮಾಡುತ್ತಿದ್ದಾರೆ? ನೀವು ಕೂಡ ಹಣ ಪಡೆದುಕೊಂಡು ನೇಮ್ ಆಂಡ್ ಫೇಮ್‌ಗಳಿಸಲು ಹೋಗಿರುವ ಅವಕಾಶವಾಧಿ ಎಂದು ಕಾಲೆಳೆದಿದ್ದಾರೆ.