ಯಾಕೆ ಇಷ್ಟು ಚೆಂದ ನೀನು...ದೃಷ್ಟಿ ಬೊಟ್ಟು ಇಡಲೇನು?; ಸೋನು ಗೌಡ ಮೇಲೆ ನೆಟ್ಟಿಗರಿಗೆ ಫುಲ್ ಲವ್!
ವೈರಲ್ ಆಯ್ತು ಬಿಗ್ ಬಾಸ್ ಸೋನು ಗೌಡ ಟ್ರೆಡಿಷನಲ್ ಲುಕ್ ಫೋಟೋಗಳು. ಹೀಗೆ ರೀಲ್ಸ್ ಮಾಡಿ ಎಂದು ಡಿಮ್ಯಾಂಡ್ ಮಾಡಿದ ನೆಟ್ಟಿಗರು...
ಸೋಷಿಯಲ್ ಮೀಡಿಯಾ ಸ್ಟಾರ್, ರೀಲ್ಸ್ ಕ್ವೀನ್ ಹಾಗೂ ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ನೆಟ್ಟಿಗರ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಬಿಗ್ ಬಾಸ್ ಓಟಿಟಿ ಸೀಸನ್ 1ರಲ್ಲಿ ಸ್ಪರ್ಧಿಸಿದ ಸೋನು ಶ್ರೀನಿವಾಸ್ ಗೌಡ ಯುಟ್ಯೂಬ್ ಚಾನೆಲ್ ಆರಂಭಿಸಿ ಸಖತ್ ಬ್ಯುಸಿಯಾಗಿಬಿಟ್ಟರು.
ಇನ್‌ಸ್ಟಾಗ್ರಾಂನಲ್ಲಿ ಅಕ್ಟಿವ್ ಆಗಿರುವ ಸೋನು ಕೆಲವು ದಿನಗಳಿಂದ ಟ್ರೆಡಿಷನಲ್ ಡ್ರೆಸ್ ಧರಿಸಿ ಫೋಟೋ ಅಪ್ಲೋಡ್ ಮಾಡುತ್ತಿದ್ದಾರೆ.
ಸದಾ ತುಂಡು ಬಟ್ಟೆ ಹಾಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಸೋನು ಟ್ರೆಡಿಷನಲ್ ಡ್ರೆಸ್ ಆಯ್ಕೆ ಮಾಡಿಕೊಂಡಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಟ್ರೆಡಿಷನಲ್ ಡ್ರೆಸ್‌ನಲ್ಲಿ ರೀಲ್ಸ್ ಮಾಡಿದರೆ ನೋಡಲು ಚಂದಾ. ಹೀಗೆ ರೆಡಿಯಾಗಿರಿ ತುಂಡು ಬಟ್ಟೆ ಬಿಡಿ ಎಂದು ಕಾಮೆಂಟ್ ಮಾಡಿದ್ದಾರೆ.
9 ಲಕ್ಷ 74 ಸಾವಿರ ಫಾಲೋವರ್ಸ್ ಹೊಂದಿರುವ ಸೋನು ಇನ್‌ಸ್ಟಾಗ್ರಾಂ ಖಾತೆಯನ್ನು ತಂಡವೊಂದು ಹ್ಯಾಂಡಲ್ ಮಾಡುತ್ತಾರೆ. ದಿನಕ್ಕೊಂದ ಹೊಸ ಅಪ್ಡೇಟ್ ನೀಡುತ್ತಾರೆ