ತನ್ನ 2ನೇ ಹೆಂಡ್ತಿ ಸುಂದರವಾಗಿದ್ದಾಳೆ ಎಂದ ಸಹಸ್ಪರ್ಧಿಯ ಕೆನ್ನೆಗೆ ಬಾರಿಸಿದ ಬಿಗ್‌ಬಾಸ್ ಒಟಿಟಿ ಸ್ಪರ್ಧಿ
ಬಿಗ್ ಬಾಸ್ ಒಟಿಟಿ 3 ರ ಇತ್ತೀಚಿನ ಸಂಚಿಕೆಯಲ್ಲಿ, ಕೃತಿಕಾ ಮಲಿಕ್ ಬಗ್ಗೆ ಕಾಮೆಂಟ್ ಮಾಡಿದ ಸ್ಪರ್ಧಿ ವಿಶಾಲ್ ಪಾಂಡೆಗೆ ಸಹಸ್ಪರ್ಧಿ ಅರ್ಮಾನ್ ಮಲಿಕ್ ಹೊಡೆದ ಘಟನೆ ನಡೆದಿದೆ.
ಹಿಂದಿ ಬಿಗ್ ಬಾಸ್ ಒಟಿಟಿ (Bigg Boss OTT) ಈ ಸಲ ಭಾರಿ ಸದ್ದು ಮಾಡುತ್ತಿದೆ. ಈ ಕಾರ್ಯಕ್ರಮಕ್ಕೆ ಯೂಟ್ಯೂಬರ್ ಆಗಿರುವ ಅರ್ಮಾನ್ ಮಲಿಕ್ ತಮ್ಮ ಇಬ್ಬರು ಪತ್ನಿಯರಾದ ಕೃತಿಕಾ ಮತ್ತು ಪಾಯಲ್ ಜೊತೆ ಎಂಟ್ರಿ ಕೊಟ್ಟಿದ್ದರು. ಇದೀಗ ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳ ಹೈಡ್ರಾಮ ನಡೆದಿದ್ದು, ಸಹ ಕಂಟೆಸ್ಟಂಟ್ ಗೆ ಅರ್ಮಾನ್ ಕಪಾಳ ಮೋಕ್ಷ ಮಾಡಿದ ಘಟನೆ ಕೂಡ ನಡೆದಿದೆ.
ಪತ್ನಿಯನ್ನು ಸುಂದರಿ ಎಂದು ಕರೆದಿದ್ದಕ್ಕೆ ಸಹ ಸ್ಪರ್ಧಿಗೆ ಕಪಾಳಮೋಕ್ಷ ಮಾಡಿದ ಅರ್ಮಾನ್ ಮಲಿಕ್. ಬಿಗ್ ಬಾಸ್ ನಲ್ಲಿ ಆಗಿರುವುದು ಇಷ್ಟು ಸಹ ಸ್ಪರ್ಧಿ ವಿಶಾಲ್ ಪಾಂಡೆ (Vishal Pandey) ಅರ್ಮಾನ್ ಮಲೀಕ್ ಎರಡನೇ ಪತ್ನಿ ಕೃತಿಕಾ ಸೌಂದರ್ಯದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಇದು ಅರ್ಮಾನ್ ಗೆ ಇಷ್ಟವಾಗದೇ ಮಾತಿಗೆ ಮಾತು ಬೆಳೆದು ಅರ್ಮಾನ್ ವಿಶಾಲ್ ಕೆನ್ನೆಗೆ ಭಾರಿಸಿದ್ದಾನೆ. ಇದೀಗ ಈ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ.
ಅರ್ಮಾನ್ ಮಲ್ಲಿಕ್ (Armaan Malik( ಅವರ ಇಬ್ಬರು ಪತ್ನಿಯರಲ್ಲಿ, ಮೊದಲ ಪತ್ನಿ ಪಾಯಲ್ ಈಗಾಗಲೇ ಬಿಗ್ ಬಾಸ್ ನಿಂದ ಹೊರ ಬಂದಿದ್ದಾರೆ. ಎರಡನೇ ಪತ್ನಿ ಕೃತಿಕಾ ಇನ್ನೂ ಮನೆಯಲ್ಲಿದ್ದಾರೆ. ವಿಶಾಲ್ ಪಾಂಡೆ ಸಹ ಸ್ಪರ್ಧಿ ಲವಕೇಶ್ ಕಟಾರಿಯಾ ಜೊತೆ ಮಾತನಾಡುವಾಗ ಕೃತಿಕಾ ಸೌಂದರ್ಯ ಬಗ್ಗೆ ಹೊಗಳಿದ್ದಾರೆ. ಹಾಗಾಗಿ ಅರ್ಮಾನ್, ವಿಶಾಲ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ, ವಿಶಾಲ್ ಮೇಲೆ ಕೈ ಮಾಡಿದ್ದಾನೆ. ಹಲ್ಲೆ ಮಾಡಿದ ವಿರುದ್ಧ ವಿಶಾಲ್ ಫ್ಯಾಮಿಲಿ ಮತ್ತು ಸೆಲೆಬ್ರಿಟಿಗಳು ಅರ್ಮಾನ್ ವಿರುದ್ಧ ಕಿಡಿ ಕಾರಿದ್ದಾರೆ. ಈಗಲೇ ಆತನನ್ನು ಶೋನಿಂದ ಹೊರ ಹಾಕುವಂತೆ ಕೋರಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಹಂಚಿಕೊಂಡ ಕೆಲವು ಅಭಿಪ್ರಾಯಗಳು ಇಲ್ಲಿವೆ. ರಿಯಾಲಿಟಿ ಶೋನಲ್ಲಿ ವಿಶಾಲ್ಗೆ ಕಪಾಳಮೋಕ್ಷ ಮಾಡಿದ ನಂತರ ವಿಶಾಲ್ ಪಾಂಡೆ ಅವರ ಪೋಷಕರು ಮತ್ತು ಸಹೋದರಿ ನೇಹಾ ಪಾಂಡೆ (Neha Pandey( ಸೇರಿದಂತೆ ಅವರ ಕುಟುಂಬವು ಅರ್ಮಾನ್ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಕೋರಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ನೇಹಾ, ಕೃತಿಕಾ ಮಲಿಕ್ ಬಗ್ಗೆ ವಿಶಾಲ್ ಅವರ ಹೊಗಳಿಕೆಯನ್ನು ಸಮರ್ಥಿಸಿಕೊಂಡರು ಮತ್ತು ವಿಶಾನ್ ಮಾತಿನಲ್ಲಿ ಯಾವ ಕೆಟ್ಟ ಉದ್ದೇಶ ಇರಲಿಲ್ಲ ಎಂದಿದ್ದಾರೆ. ವಿಶಾಲ್ ಅವರಿಗೆ ನ್ಯಾಯ ಮತ್ತು ಬೆಂಬಲ ನೀಡುವಂತೆ ನೇಹಾ ಕೋರಿದ್ದಾರೆ, ಅರ್ಮಾನ್ ಅವರನ್ನು ರಿಯಾಲಿಟಿ ಶೋನಿಂದ ವಜಾಗೊಳಿಸಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
Vishal Pandey Armaan Malik
ದೈಹಿಕ ಆಕ್ರಮಣಕ್ಕಾಗಿ ಬಿಗ್ ಬಾಸ್ 7 ರಿಂದ ನಟ ಕುಶಾಲ್ ಟಂಡನ್ ನ್ನು(Kushal Tondon) ಹೊರಹಾಕಲಾಗಿತ್ತು, ಆದರೆ ಅರ್ಮಾನ್ ಮಲಿಕ್ ಸಹ ಸ್ಪರ್ಧಿಗೆ ಕಪಾಳಮೋಕ್ಷ ಮಾಡಿದ ನಂತರವೂ ಮಲಿಕ್ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ಕುಶಲ್ ನಿರಾಶೆ ವ್ಯಕ್ತಪಡಿಸಿದರು. ಸುಂದರವಾಗಿದ್ದಾಳೆ ಅಂದ್ರೆ ಸ್ಪರ್ಧಿ ಮೇಲೆ ಕೈ ಮಾಡೋದು ಎಷ್ಟು ಸರಿ ಎಂದು ಸಹ ಪ್ರಶ್ನಿಸಿದ್ದಾರೆ.
Vishal Pandey Armaan Malik
ಅನೇಕರು ಶೋನಲ್ಲಿ ಹಿಂಸಾತ್ಮಕವಾಗಿ ವರ್ತಿಸಿದ್ದಕ್ಕಾಗಿ ಅರ್ಮಾನ್ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಕಾರ್ಯಕ್ರಮ ನಿರ್ಮಾತೃಗಳನ್ನು ಪ್ರಶ್ನಿಸಿದ್ದಾರೆ. ಬಿಗ್ ಬಾಸ್ ನಿಯಮದ ಪ್ರಕಾರ ಕೈ ಮಾಡುವವರು, ದೈಹಿಕವಾಗಿ ಹಲ್ಲೆ ಮಾಡುವವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಬೇಕು. ಆದರೆ ಅರ್ಮಾನ್ ಇನ್ನೂ ಅಲ್ಲಿಯೇ ಇದ್ದಾರೆ. ಇದು ವೀಕ್ಷಕರಲ್ಲಿ ಬೇಸರಕ್ಕೆ ಹಾಗೂ ಕೋಪಕ್ಕೆ ಕಾರಣವಾಗಿದೆ.