ಅಮೆರಿಕದಲ್ಲಿ ಟೀಚರ್ ಆದ ಬಿಗ್ ಬಾಸ್ ನಯನಾ ಪುಟ್ಟಸ್ವಾಮಿ; ನಿಜವಾದ ಕನ್ನಡತಿ ನೀನು ಎಂದ ನೆಟ್ಟಿಗರು!
ಅಮೇರಿಕದಲ್ಲಿ ಟೀಚರ್ ಆಗಿದ್ದಾರೆ ಕನ್ನಡತಿ ನಯನಾ.ಭೇಷ್ ಎನ್ನುತ್ತಿದ್ದಾರೆ ನೆಟ್ಟಿಗರು....
ಕನ್ನಡ ಕಿರುತೆರೆ ಜನಪ್ರಿಯ ನಟಿ ನಯನಾ ಪುಟ್ಟಸ್ವಾಮಿ ಅಮೆರಿಕದಲ್ಲಿ ಟೀಚರ್ ಆಗಿ ಕೆಲಸ ಆರಂಭಿಸಿದ್ದಾರೆ. ಈ ಬಗ್ಗೆ ನಯನಾ ಪೋಸ್ಟ್ ಹಾಕಿದ್ದಾರೆ.
'ಜೀವನದ ಹೊಸ ಅಧ್ಯಾಯ ಶುರುವಾಗುತ್ತಿದೆ. ನನ್ನ ಜೀವನದ ತುಂಬಾ ಥ್ರಿಲಿಂಗ್ ಆಗಿರುವ ಜರ್ನಿ ಆರಂಭವಾಗಿದೆ ಎಂದು ನಿಮ್ಮ ಜೊತೆ ಖುಷಿಯಿಂದ ಹಂಚಿಕೊಳ್ಳುತ್ತಿರುವೆ' ಎಂದು ನಯನಾ ಬರೆದುಕೊಂಡಿದ್ದಾರೆ.
'ಸಾಕಷ್ಟು ಟ್ವಿಸ್ಟ್ ಆಂಡ್ ಟರ್ನ್‌ಗಳನ್ನು ಪಡೆದುಕೊಂಡು ನನ್ನ ಜೀವನದ ಬ್ರ್ಯಾಂಡ್ ನ್ಯೂ ಚ್ಯಾಪ್ಟರ್ ಆರಂಭವಾಗಿದೆ. ನಮ್ಮಳ ಮೇಲಿರುವ ಪ್ರೀತಿ ನನ್ನ ಈ ದಾರಿಗೆ ಕರೆದುಕೊಂಡು ಬಂದಿದೆ'
'ಈ ಜರ್ನಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಟೀಚಿಂಗ್ ಜೊತೆಗೆ ನಾನು ಕೂಡ ಪಾಠ ಕಲಿಯುವುದು. STEM ಸ್ಕೂಲ್‌ನಲ್ಲ ನಾನು ಲೀಡ್ ಟೀಚರ್ ಆಗಿರುವೆ'
'ಈಗಾಗಲೆ ಮೂರು ತಿಂಗಳುಗಳ ಕಾಲ ಜರ್ನಿ ಸಾಗಿದೆ ತುಂಬಾ ಕಲಿತಿರುವೆ ಹಾಗೂ ನನ್ನಲ್ಲಿ ಒಂದು ಟ್ರಾನ್ಸ್‌ಫಾರ್ಮೆಷನ್ ಆಗಿದೆ. ನನ್ನ ಜೀವನಕ್ಕೆ ಹೊಸ ಅರ್ಥ ನೀಡಿದೆ'
'ನನ್ನ ಬದುಕಿಗೆ ಒಂದು ಅರ್ಥ ಮಾತ್ರವಲ್ಲದೆ ನನ್ನ ಪರ್ಸನಾಲಿಟಿಯನ್ನು ಶೇಪ್ ಮಾಡಿದೆ. ಯಾವ subject ಪಾಠ ಮಾಡುತ್ತೀವಿ ಅನ್ನೋದಲ್ಲ ನಾವು ಹೇಗೆ ಕನೆಕ್ಷನ್ ಹುಟ್ಟಿಸುತ್ತೀವಿ ಎಂದು'
'Knowledeg is power..ಈ ನಿಟ್ಟಿನಲ್ಲಿ ಮಕ್ಕಳ ಮನಸ್ಥಿತಿ ಹಾಗೂ ಅವರಲ್ಲಿ ಜ್ಞಾನದ ಬೆಳಕು ಹುಟ್ಟಿಸುವ ಸಲುವಾಗಿ ಕೆಲಸ ಮಾಡುತ್ತಿರುವೆ' ಎಂದು ನಯನಾ ಬರೆದುಕೊಂಡಿದ್ದಾರೆ.