- Home
- Entertainment
- TV Talk
- 'ನನಗೆ ಡುಮ್ಮಿ, ಮೊಸರನ್ನ, ವೆಜಿಟೇರಿಯನ್ ಅಂತ ಹೀಯಾಳಿಸಿದ್ದಕ್ಕೆ ಈ ಥರ ಮಾಡಿದೆʼ-ಬಿಗ್ ಬಾಸ್ ಧನುಶ್ರೀ
'ನನಗೆ ಡುಮ್ಮಿ, ಮೊಸರನ್ನ, ವೆಜಿಟೇರಿಯನ್ ಅಂತ ಹೀಯಾಳಿಸಿದ್ದಕ್ಕೆ ಈ ಥರ ಮಾಡಿದೆʼ-ಬಿಗ್ ಬಾಸ್ ಧನುಶ್ರೀ
ಬಿಗ್ ಬಾಸ್ ಕನ್ನಡ ಖ್ಯಾತಿಯ ಧನುಶ್ರೀ ಅವರಿಗೆ ಓರ್ವರು, ಡುಮ್ಮಿ, ಮೊಸರನ್ನ, ವೆಜಿಟೇರಿಯನ್ ಅಂತ ಹೀಯಾಳಿಸಿದ್ದರಂತೆ.

ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿ, ರೀಲ್ಸ್ ಮೂಲಕ ಸದ್ದು ಮಾಡುವ ಧನುಶ್ರೀ ಅವರು ಸಿಕ್ಕಾಪಟ್ಟೆ ಸಣ್ಣಗಾಗಿ ಬಳುಕುವ ಬಳ್ಳಿಯಂತಾಗಿದ್ದಾರೆ. ಏಕಾಏಕಿ ಧನುಶ್ರೀ ಯಾಕೆ ಸಣ್ಣಗಾದರು ಎಂದು ಅನೇಕರಿಗೆ ಆಶ್ಚರ್ಯ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಇದ್ದ ಧನುಶ್ರೀ, ಆ ಬಳಿಕ ಹೊರಗಡೆ ಬಂದು ಸಿನಿಮಾ ಮಾಡುವ ಪ್ರಯತ್ನ ಮಾಡಿದರು. ಆದರೆ ಚಿತ್ರರಂಗದಲ್ಲಿ ಅವರು ಆಕ್ಟಿವ್ ಆಗಿಲ್ಲ.
ಅಂದಹಾಗೆ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಳ್ಳುವಷ್ಟು ದಪ್ಪ ಇಲ್ಲದಿದ್ರೂ ಕೂಡ ಧನುಶ್ರೀ ಸಣ್ಣಗಾಗಿದ್ದಾರೆ. ಧನುಶ್ರೀ ಅವರು ಏಕಾಏಕಿ ಫಿಟ್‌ನೆಸ್‌ಗೆ ಗಮನ ಕೊಟ್ಟಿದ್ದು ಸಾಕಷ್ಟು ಜನರಿಗೆ ಆಶ್ಚರ್ಯವನ್ನುಂಟು ಮಾಡಿತ್ತು.
ಯಾಕೆ ತಾನು ಸಣ್ಣಗಾದೆ ಎಂದು ಧನುಶ್ರೀ ಅವರು ಹೇಳಿದ್ದಾರೆ. “ನಾನು ನನ್ನ ಸ್ನೇಹಿತರ ತಾಯಿಯನ್ನು ನನ್ನ ತಾಯಿ ಅಂತ ಟ್ರೀಟ್ ಮಾಡುತ್ತಿದ್ದೆ. ನನ್ನ ತಾಯಿಗೆ ಏನೇ ತಂದರೂ ಕೂಡ, ಅವರಿಗೂ ಕೂಡ ಅದನ್ನು ತಂದುಕೊಡುತ್ತಿದ್ದೆ” ಎಂದು ಧನುಶ್ರೀ ಹೇಳಿದ್ದಾರೆ.
“ನಾನು ಡುಮ್ಮಿ, ವೆಜಿಟೇರಿಯನ್, ಮೊಸರನ್ನ ಅಂತ ನನ್ನ ಫ್ರೆಂಡ್ ತಾಯಿ ರೇಗಸ್ತಿದ್ರು. ಇದು ನನಗೆ ಬಹಳ ಬೇಸರ ತಂದಿತು. ನಾನು ಸಣ್ಣ ಆಗಬಲ್ಲೆ ಎಂದು ಅವಳು ತೋರಿಸಿಕೊಡಬೇಕಿತ್ತು” ಎಂದು ಧನುಶ್ರೀ ಹೇಳಿದ್ದಾರೆ.