- Home
- Entertainment
- TV Talk
- BBK 12: Suraj ಹೀಗೆಲ್ಲ ಮಾತಾಡ್ತಾರಾ? ಗಿಲ್ಲಿ ನಟನಿಗೆ ದಿಗ್ಭ್ರಮೆ; ಏಟು ಮೇಲ್ ಏಟು, ಉರಿಸೋದ್ರಲ್ಲಿ PHD ಬಿಡಿ
BBK 12: Suraj ಹೀಗೆಲ್ಲ ಮಾತಾಡ್ತಾರಾ? ಗಿಲ್ಲಿ ನಟನಿಗೆ ದಿಗ್ಭ್ರಮೆ; ಏಟು ಮೇಲ್ ಏಟು, ಉರಿಸೋದ್ರಲ್ಲಿ PHD ಬಿಡಿ
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಸೂರಜ್ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಅನೇಕ ದಿನ ಅವ್ರು ರಾಶಿಕಾ ಶೆಟ್ಟಿ ಜೊತೆಯೇ ಮಾತನಾಡುತ್ತ ಸಮಯ ಕಳೆದಿದ್ರು. ಯಾರು ಈ ಮನೆಯಲ್ಲಿ ಇರೋಕೆ ಅರ್ಹರಲ್ಲ ಅವರಿಗೆ ಮಸಿ ಬಳಿಯಿರಿ ಎಂದು ಬಿಗ್ ಬಾಸ್ ಹೇಳಿದ್ದರು. ಆಗ ಸೂರಜ್, ರಿಷಾ ಗೌಡಗೆ ಮಸಿ ಬಳಿದಿದ್ದರು.

ಸೂರಜ್ ಹೇಳಿದ್ದೇನು?
ಸೂರಜ್ ಅವರು “ಇಂದು ರಿಷಾ ಗೌಡ ಅವರು ಇಲ್ಲಿ ಬಂದು ನಿಂತುಕೊಂಡಾಗಲೂ ಕೂಡ ನನಗೆ ಜಾಸ್ತಿ ಜನರು ಕಲರ್ ಬಳಿತಿದ್ದಾರೆ ನಾನು ಜಾಸ್ತಿ ಕ್ಯಾಮರಾದಲ್ಲಿ ಕಾಣಿಸಿಕೊಳ್ತೀನಿ ಅಂತ ನೀನು ಅಂದುಕೊಳ್ಳಬಹುದು. ನೀನು ಉಳಿದವರಿಗೆ ಡವ್ ಡವ್ ಅಂತ ಹೇಳ್ತೀಯಾ, ಆದರೆ ನೀನು ಡವ್ ಪ್ರೋ ಮ್ಯಾಕ್ ಎನ್ನೋದು ನಿನಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ.
ಎಲ್ಲ ಕಡೆ ಇಣುಕಿ ನೋಡ್ತೀಯಾ
“ಎಲ್ಲೇ ಜಗಳ ಆಗಲೀ ನಾನು ಇಣುಕಿ ನೋಡಿದರೆ ನಾನು ಕ್ಯಾಮರಾದಲ್ಲಿ ಕಾಣಿಸ್ತೀನಿ ಅಂತ ನೀನು ಅಂದುಕೊಳ್ಳಬಹುದು. ರಿಯಲ್ ರಿಷಾ ಬರತ್ತೆ, ರಿಯಲ್ ರಿಷಾ ಬರತ್ತೆ ಅಂತ ನೀನು ಹೇಳ್ತೀಯಾ ಅಂತ. ನಿನಗೆ ರಿಯಲ್ ರಿಷಾ ಏನು ಅಂತ ಕ್ಲಾರಿಟಿ ಇಲ್ಲ. ಯಾರನ್ನೋ ಯೂಸ್ ಮಾಡಿಕೊಂಡು ಪ್ಲೇ ಮಾಡ್ತಿದೀಯಾ ಅಂತ ನೀನು ಹೇಳ್ತೀಯಾ, ಆದರೆ ನಾವು ಏನು ಮಾತಾಡ್ತಿದೀವಿ ಅಂತ ನಿನಗೆ ಗೊತ್ತಿಲ್ಲ, ಅಲ್ಲೂ ನೀನು ಬಂದು ಇಣುಕಿ ನೋಡ್ತೀಯಾ” ಎಂದು ಸೂರಜ್ ಹೇಳಿದ್ದಾರೆ.
ರಿಷಾ ಗೌಡ ಕೌಂಟರ್ ಏನು?
ಸೂರಜ್ ಮಾತಿಗೆ ರಿಷಾ ಗೌಡ ಅವರು “ಗುಡ್ ಬುಕ್ಸ್‌ನಲ್ಲಿ ಇರೋದಿಕ್ಕೆ ನೋಡ್ತೀಯಾ. ಇಲ್ಲಿ ಒಳ್ಳೆಯವರಾಗಿದ್ರೂ ಕೊಡ್ತಾರೆ, ಕೆಟ್ಟವರಾಗಿದ್ರೂ ಕೊಡ್ತಾರೆ. ಮಾತಾಡಿದ್ರೂ ಕೊಡ್ತಾರೆ, ಮಾತಾಡದಿದ್ರೂ ಕೊಡ್ತಾರೆ. ನೀನು ಊಸರವಳ್ಳಿ. ನಿನ್ನ ಆಟವನ್ನು ನಾನು ನೋಡಿದೀನಿ. ಆಚೆ ನಾನು ಕ್ಯಾಮರಾ ಮುಂದೆ ಬಣ್ಣ ಹಚ್ಚಿ ಬಂದಿದೀನಿ. ಮುಂದಿನ ದಿನಗಳಲ್ಲಿ ಏನಾಗತ್ತೆ ಅಂತ ನಿನಗೆ ಗೊತ್ತಿಲ್ಲ. ಬಾಯಲ್ಲಿ ಬೆರಳಿಟ್ಟುಕೊಂಡು ಸುಮ್ಮನೆ ನಿಂತುಕೋ” ಎಂದು ಹೇಳಿದ್ದಾರೆ.
ಸೂರಜ್‌ಗೆ ಜೈ
ಸೂರಜ್ ಅವರು “ನಾನು ಹಿಂದಿನ ದಿನಗಳ ಬಗ್ಗೆ ಮಾತನಾಡಿದೀನಿ, ಮುಂದೆ ಏನಾಗತ್ತೆ ಅಂತ ನನಗೆ ಗೊತ್ತಿಲ್ಲ" ಎಂದು ಹೇಳಿದ್ದಾರೆ.
"ನಿನಗೆ ಜೈ ಸೂರಜ್ ಅಂದರೆ ಜೈ, ನಿನಗೆ ಆಗಲ್ಲ ಅಂದ್ರೆ ಆಗಲ್ಲ. ನಾವು ಕೂಡ ಕನ್ನಡಿಯೇ. ಚೆನ್ನಾಗಿ ಮಾತಾಡಿದ್ರೆ ನಾವು ಚೆನ್ನಾಗಿ ಮಾತಾಡ್ತೀವಿ, ಚೆನ್ನಾಗಿ ಮಾತಾಡಿ ಅಂತ ಹೇಳೋದಿಕ್ಕೆ ನೀನು ಯಾರು?” ಎಂದು ರಿಷಾ ಗೌಡ ಹೇಳಿದ್ದಾರೆ.
ಯಾವಾಗ ಕೈ ಕೊಡ್ತಾರೋ ಏನೋ!
“ನನಗೆ ಎಲ್ಲರೂ ಸೇರಿ ಜೈ ಅಂದ್ರು, ನಿನಗೆ ಎಲ್ಲರೂ ಕೈ ಅಂದ್ರು” ಎಂದು ಸೂರಜ್ ಹೇಳಿದ್ದಾರೆ. ಆಗ ರಿಷಾ ಗೌಡ ಅವರು, “ಕೈ ಅಂತಾರಲ್ಲ ಅವರು ಯಾವಾಗ ಕೈ ಕೊಡ್ತಾರೆ ನೋಡಿಕೋ” ಎಂದು ಹೇಳಿದ್ದಾರೆ.