- Home
- Entertainment
- TV Talk
- BBK 12: ಒಂದಾದ್ಮೇಲೆ ಒಂದು ಕಂಪ್ಲೇಂಟ್ ಮಾಡಿದ ರಾಶಿಕಾಗೆ ಮುಖಭಂಗ; Kiccha Sudeep ಮುಂದೆ ಆ ಘಟನೆ ನಡೀತು
BBK 12: ಒಂದಾದ್ಮೇಲೆ ಒಂದು ಕಂಪ್ಲೇಂಟ್ ಮಾಡಿದ ರಾಶಿಕಾಗೆ ಮುಖಭಂಗ; Kiccha Sudeep ಮುಂದೆ ಆ ಘಟನೆ ನಡೀತು
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಈ ವಾರ ಕಾಲೇಜು ಟಾಸ್ಕ್‌ನಲ್ಲಿ ರಘು ಅವರು ಪ್ರಿನ್ಸಿಪಾಲ್ ಆಗಿದ್ದರು. ಪ್ರಿನ್ಸಿಪಾಲ್ ಆಗಿ ಅವರು ಚೆನ್ನಾಗಿ ಟಾಸ್ಕ್ ಮಾಡಿದರಾ? ಫೇವರಿಸಂ ಮಾಡಿದ್ದಾರಾ ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದಾಗ, ರಾಶಿಕಾ ಶೆಟ್ಟಿ ಮಾತ್ರ ಫೇವರಿಸಂ ಮಾಡಿದರು ಎಂದು ಆರೋಪ ಮಾಡಿದ್ರು.

ರಾಶಿಕಾ ಶೆಟ್ಟಿ ಆರೋಪ ಏನು?
“ಕ್ಲಾಸ್ ಗೌರವದಿಂದ ಶುರುವಾಗುತ್ತದೆ, ಆಮೇಲೆ ಬಿಗ್ ಬಾಸ್ ಡಿಬೇಟ್ ಟಾಸ್ಕ್ ಕೊಡುತ್ತಾರೆ. ಅವರಿಗೆ ಇಷ್ಟ ಆಗಿರುವವರಿಗೆ ಮಾತ್ರ ಪಾಸ್ ಮಾಡಿದರು ಅಂತ ಅನಿಸುತ್ತದೆ. ಕಾವ್ಯ ಶೈವ, ಸ್ಪಂದನಾ ಸೋಮಣ್ಣ, ರಕ್ಷಿತಾ ಶೆಟ್ಟಿ, ಜಾಹ್ನವಿ ಅವರನ್ನು ಪಾಸ್ ಮಾಡಿದರು, ಅವೆಲ್ಲವೂ ರೆಡ್ ಟೀಂ. ಹೀಗಾಗಿ ಅವರಿಗೆ ಸಪೋರ್ಟ್ ಮಾಡಿದರು ಅಂತ ಅನಿಸಿತು. ಏನೇ ಬಂದ್ರೂ ರೆಡ್ ಟೀಂ ಅಂತ ಹೇಳುತ್ತಿದ್ದರು. ರೆಡ್ ಟೀಂ ಜೊತೆ ಜಾಸ್ತಿ ಮಾಡುತ್ತಿದ್ದರು” ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ.
ಬ್ಲೂ ಟೀಂ ಜೊತೆ ಮಾತಾಡಿಲ್ಲ
“ಬ್ಲೂ ಟೀಂ ಜೊತೆ ಅವರು ಅಷ್ಟು ಮಾತನಾಡಿಲ್ಲ, ಸಂಭಾಷಣೆ ಮಾಡಿದ್ದು ನಾನು ನೋಡಿಲ್ಲ. ನಾನು ಬಹುತೇಕ ಟೀಂ ಜೊತೆ ಇದ್ದರೂ ಕೂಡ ಚರ್ಚೆ ಮಾಡಿದ್ದು ನೋಡಿಲ್ಲ” ಎಂದು ರಾಶಿಕಾ ಶೆಟ್ಟಿ ಆರೋಪ ಮಾಡಿದ್ದಾರೆ.
ರಘು ಚೆನ್ನಾಗಿ ಟಾಸ್ಕ್ ಮಾಡಿದ್ರಾ?
“ಇಲ್ಲಿದ್ದವರ ವಿದ್ಯಾರ್ಥಿ ಎಂಥೆಂಥವರು ಎನ್ನೋದು ಗೊತ್ತಿದೆ. ಒಬ್ಬೊಬ್ಬರ ವ್ಯಕ್ತಿತ್ವವನ್ನು ಒಂದೊಂದು ತೂಕ ಮಾಡಿ, ಅವರಿಗೆ ಕೊಟ್ಟ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸಿದರು ಎನ್ನೋದನ್ನು ಎಷ್ಟು ಜನರು ಒಪ್ಪುತ್ತೀರಿ?” ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದರು.
ರಘು ಸಖತ್ ಆಗಿ ನಿಭಾಯಿಸಿದ್ರು
“ಈ ಪ್ರಶ್ನೆಗೆ ಇಡೀ ಮನೆ ಒಪ್ಪಿತ್ತು. ರಘು ಅವರು ಚೆನ್ನಾಗಿ ಕ್ಯಾಪ್ಟನ್ಸಿ ಟಾಸ್ಕ್ ಮಾಡಿದರು, ಪ್ರಿನ್ಸಿಪಲ್ ಆಗಿ ಅವರ ಪಾತ್ರವನ್ನು ಮರೆಯಲಿಲ್ಲ. ಇಡೀ ಮನೆ ಒಂದು ಕಡೆಯಾದರೆ, ರಘು ಮಾತ್ರ ಒಂದು ಕಡೆ. ಯಾರು ಎಷ್ಟೇ ಟಾರ್ಚರ್ ಮಾಡಿದರೂ, ತಿವಿದರೂ ಕೂಡ ಮೊದಲಿನಿಂದಲೂ ತಾಳ್ಮೆಯಿಂದ ಇಡೀ ಮನೆಯನ್ನು ನಿಭಾಯಿಸಿದ್ದಾರೆ. ಪೇರೆಂಟ್ಸ್, ಟೀಚಿಂಗ್ ಡಿಸ್ಕಶನ್ ಮಾಡಿದಾಗ ಅವಮಾನ ಆದರೂ ಕೂಡ ಅದನ್ನು ನಿಭಾಯಿಸಿದ್ದಕ್ಕೆ ಕಿಚ್ಚನ ಚಪ್ಪಾಳೆ ಕೊಡುವೆ” ಎಂದು ಸುದೀಪ್ ಹೇಳಿದ್ದಾರೆ.
ಚಾಲೆಂಜಿಂಗ್ ಆಗಿತ್ತು
ಸ್ಪರ್ಧಿಗಳ ಮನೆಯವರಿಗೆ ಫೋನ್ ಕನೆಕ್ಟ್ ಆದಾಗ, ಬೇರೆಯವರ ಮನೆಯಿಂದ ಆ ರೀತಿ ಮಾತುಗಳು ಬಂದಾಗ ತುಂಬ ಅವಮಾನ ಆಗಿರುತ್ತದೆ. ಮನೆಯವರ ಮಾತು ಕೇಳಿ ಕೆಲವರು ನಿಮ್ಮ ಮೇಲೆ ಎಗರಿ ಬೀಳ್ತಾರೆ. ಅದನ್ನು ಕೂಡ ನೀವು ಸ್ವೀಕಾರ ಮಾಡ್ತೀರಿ. ಇದು ನಿಜಕ್ಕೂ ಚಾಲೆಂಜಿಂಗ್ ಆಗಿತ್ತು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.