- Home
- Entertainment
- TV Talk
- BBK 12: ಗಳಗಳನೆ ಅತ್ತ Suraj Singh; ವೀಕ್‌ನೆಸ್ ಕಂಡುಹಿಡಿದ್ರು, ದ್ವೇಷ ತೀರಿಸಿಕೊಂಡ್ರು! ನಟಿಯ ರಿವೆಂಜ್!
BBK 12: ಗಳಗಳನೆ ಅತ್ತ Suraj Singh; ವೀಕ್‌ನೆಸ್ ಕಂಡುಹಿಡಿದ್ರು, ದ್ವೇಷ ತೀರಿಸಿಕೊಂಡ್ರು! ನಟಿಯ ರಿವೆಂಜ್!
Bigg Boss Kannada Season 12: ಸೂರಜ್ ಸಿಂಗ್ ಅವರು ನಿರ್ಧಾರಗಳನ್ನು ತಗೊಳ್ಳುವಾಗ, ತುಂಬ ಯೋಚನೆ ಮಾಡಿ ತಗೊಳ್ತಾರೆ. ಹಾಗೆಯೇ ರಿಷಾ ಗೌಡ ಮುಂದೆ ಮಾತಾಡಿ, ನನಗೂ ಕೂಡ ಮಾತನಾಡೋಕೆ ಬರತ್ತೆ ಎಂದು ತೋರಿಸಿಕೊಟ್ಟಿದ್ದರು. ಈಗ ಅವರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ನಿಜಕ್ಕೂ ಏನಾಯ್ತು?

ಫಿಸಿಟಕಲ್ ಟಾಸ್ಕ್ ಇಲ್ಲ
ಈ ವಾರ ಪೂರ್ತಿ ಫಿಸಿಕಲ್ ಟಾಸ್ಕ್ ಇರುತ್ತದೆ. ಇಲ್ಲಿ ವ್ಯಕ್ತಿತ್ವದ ಆಟಗಳು ಇರುತ್ತವೆ, ಭಾವನಾತ್ಮಕವಾಗಿ ನೋವಾಗುವ ಸಂದರ್ಭ ಕೂಡ ಬರುವುದು. ಈಗ ಮನೆಯವರು ಸ್ಪರ್ಧಿಗಳಿಗೋಸ್ಕರ ಪತ್ರ ಬರೆದಿದ್ದರು.
ಬಿಗ್ ಬಾಸ್ ನೀಡಿದ ಟಾಸ್ಕ್ ಏನು?
ಏಳು ಸದಸ್ಯರ ಮನೆಯ ಪತ್ರಗಳ ಪೈಕಿ ಇಬ್ಬರ ಪತ್ರವನ್ನು ಹರಿದು ಹಾಕಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ರಿಷಾ ಗೌಡ ಅವರು ತಮಗೆ ಕೊಟ್ಟ ಸೂಚನೆಯನ್ನು ಪಾಲಿಸಿದ್ದಾರೆ.
ಪತ್ರವನ್ನು ಹರಿದು ಹಾಕಿದ ರಿಷಾ ಗೌಡ
ಆಗ ರಿಷಾ ಗೌಡ ಅವರು ಸ್ಪಂದನಾ ಸೋಮಣ್ಣ, ಸೂರಜ್ ಸಿಂಗ್ ಅವರ ಮನೆಯ ಪತ್ರವನ್ನು ಹರಿದು ಹಾಕಿದ್ದಾರೆ. ಇದನ್ನು ನೋಡಿ ಸ್ಪಂದನಾ ಸೋಮಣ್ಣ, ಸೂರಜ್ ಅಂತೂ ತುಂಬ ಬೇಸರ ಮಾಡಿಕೊಂಡಿದ್ದಾರೆ.
ಸ್ಪಂದನಾ ಸೋಮಣ್ಣ ಕಣ್ಣೀರು
ಪತ್ರ ಹರಿದು ಹೋಯ್ತು ಎಂದು ಸ್ಪಂದನಾ ಸೋಮಣ್ಣ ಅವರು ಬೇಸರ ಮಾಡಿಕೊಂಡಿದ್ದಾರೆ, ಆಮೇಲೆ ಧನುಷ್ ಗೌಡ ಅವರು ಬಂದು ಸಮಾಧಾನ ಮಾಡಿದ್ದಾರೆ.
ರಿಷಾಗೆ ಯಾಕೆ ಕೋಪ?
ಇನ್ನೊಂದು ಕಡೆ ಸೂರಜ್ ಅವರು, “ನಾನು ಏನು ಮಾಡಿದೆ? ಕೊಡೋರಿಗೆ ತಗೊಳೋ ತಾಕತ್ತು ಇರಬೇಕಿತ್ತು?” ಎಂದು ಹೇಳಿದ್ದಾರೆ. ಮಸಿ ಬಳಿಯುವ ಟಾಸ್ಕ್‌ನಲ್ಲಿ ರಿಷಾ ಗೌಡಗೆ ಮಸಿ ಬಳಿದಿದ್ದ ಸೂರಜ್, ಅವರು ಸಖತ್ ಕೌಂಟರ್ ಕೊಟ್ಟಿದ್ದರು. ಇದು ರಿಷಾ ಪಿತ್ತ ನೆತ್ತಿಗೇರಿಸಿದೆ.
ಮಳ್ಳ ನನ್ ಮಗನನ್ನು ನಂಬಲ್ಲ
“ತಗೋ, ನಿನ್ನೆ ನೀನು ಆಡಿದ ಆಟವನ್ನು ನೋಡಿದೆ. ಈ ಕಳ್ಳನನ್ನು ನಂಬಿದರೂ ಈ ಮಳ್ಳ ನನ್ ಮಗನನ್ನು ನಂಬಲ್ಲ. ಆ ಮುಗ್ಧ ಮುಖಗಳನ್ನು ನೋಡೋಕೆ ಆಗೋದಿಲ್ಲ” ಎಂದು ರಿಷಾ ಗೌಡ ಹೇಳಿದ್ದಾರೆ.