- Home
- Entertainment
- TV Talk
- Bigg Boss Kannada: ಗಿಲ್ಲಿ ನಟನ ಊಟದ ಮೇಲೂ ಕಣ್ಣು ಹಾಕಿದ ಸೀನಿಯರ್ಸ್; ತಿರುಗಿಬಿದ್ದ ಜಗತ್ ಕಿಲಾಡಿ!
Bigg Boss Kannada: ಗಿಲ್ಲಿ ನಟನ ಊಟದ ಮೇಲೂ ಕಣ್ಣು ಹಾಕಿದ ಸೀನಿಯರ್ಸ್; ತಿರುಗಿಬಿದ್ದ ಜಗತ್ ಕಿಲಾಡಿ!
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೀಸನ್ 11 ಶೋನ ಕೆಲ ಸ್ಪರ್ಧಿಗಳು ಬಂದಿದ್ದಾರೆ. ಈ ವೇಳೆ ಸೀಸನ್ 11 ಸ್ಪರ್ಧಿಗಳು ಗಿಲ್ಲಿ ನಟನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈಗ ಮಂಜು ಉಗ್ರಾವತಾರ ತಾಳಿದ್ದಾರೆ. ಈಗ ವಾಹಿನಿಯೊಂದು ಹೊಸ ಪ್ರೋಮೋ ರಿಲೀಸ್ ಮಾಡಿದೆ.

ಮ್ಯಾಕ್ಸ್ ಮಂಜು ಬ್ಯಾಚುಲರ್ ಪಾರ್ಟಿ
ಮ್ಯಾಕ್ಸ್ ಮಂಜು ಅವರ ಬ್ಯಾಚುಲರ್ ಪಾರ್ಟಿಯನ್ನು ಈ ಮನೆಯಲ್ಲಿ ಮಾಡಲಾಗುತ್ತಿದೆ. ಈಗ ಬಿಗ್ ಬಾಸ್ ಮನೆ ರೆಸಾರ್ಟ್ ಆಗಿದೆ, ಹೀಗಾಗಿ ಈ ಸೀಸನ್ ಸ್ಪರ್ಧಿಗಳು ಸಪ್ಲೈಯರ್, ಕುಕ್, ಮ್ಯಾನೇಜರ್ ಎಂದು ವಿಂಗಡಣೆಯಾಗಿ ಅತಿಥಿಗಳಿಗೆ ಸತ್ಕಾರ ಮಾಡಬೇಕಿತ್ತು. ಆದರೆ ಗಿಲ್ಲಿ ನಟನ ಮಾತು, ವರ್ತನೆ, ಸೇವೆ ಎಲ್ಲವೂ ಅತಿಥಿಗಳಿಗೆ ಇರಿಟೇಟ್ ಮಾಡಿದೆ.
ಗಿಲ್ಲಿ ನಟನಿಗೆ ಹೊಸ ನಿಯಮ
ಪ್ರೋಮೋದಲ್ಲಿ ತೋರಿಸಿರುವಂತೆ, ಗಿಲ್ಲಿ ನಟ ಎಲ್ಲರಿಗೂ ಬಡಿಸಿ, ಆಮೇಲೆ ಊಟ ಮಾಡಬೇಕು. ಅಥವಾ ಎಲ್ಲರಿಗು ಆದಮೇಲೆ ಅವನು ಊಟ ಮಾಡಬೇಕು ಎಂದು ಸೀಸನ್ 11 ಸ್ಪರ್ಧಿಗಳು ನಿಯಮ ಮಾಡಿದ್ದಾರೆ. ಆದರೆ ಗಿಲ್ಲಿ ಮಾತ್ರ ಇದನ್ನು ಫಾಲೋ ಮಾಡಿಲ್ಲ. ಕಿಚನ್‌ಗೆ ಹೋಗಿ ಅವರು ಊಟವನ್ನು ಬಡಿಸಿಕೊಂಡಿದ್ದಾರೆ.
ಮ್ಯಾಕ್ಸ್ ಮಂಜುಗೆ ಸಿಟ್ಟು
ಗಿಲ್ಲಿ ನಟ ತಿನ್ನುತ್ತಿರೋದು ಮ್ಯಾಕ್ಸ್ ಮಂಜುಗೆ ಸಿಟ್ಟು ತರಿಸಿದೆ. ಹೀಗಾಗಿ ಅವರು ಕೂಗಾಡಿದ್ದಾರೆ. ಗಿಲ್ಲಿ ನಟ ಆಗ, "ಊಟದ ವಿಷಯದಲ್ಲಿ ನಿಯಮ ಮಾಡಬಾರದು. ಇದೆಲ್ಲ ಮಾಡಬಾರದು. ಅವರು ಸೇವೆಯಲ್ಲಿ ಏನಾದರೂ ಮಾಡಬಹುದು. ಊಟ ಹಾಕಿ ನನಗೆ, ತಲೆ ಕೆಡಿಸ್ಕೋಬೇಡಿ
ಮ್ಯಾಕ್ಸ್ ಮಂಜು ಹೇಳಿದ್ದೇನು?
ಮ್ಯಾಕ್ಸ್ ಮಂಜು ಅವರು, "ಹನ್ನೆರಡು ಜನರು ಇದ್ದೀರಿ. ಹೇಳೋಕೆ ಆಗೋದಿಲ್ಲವಾ? ನಾವು ಆಟ ಆಡೋಕೆ ಬಂದಿದ್ದೇವೆ, ಅವನು ಬೋಂಡ ತಿಂದುಕೊಂಡು ಆರಾಮಾಗಿದಾನೆ, ನಾಳೆ ಆಟ ಏನು ಎಂದು ನಾನು ತೋರಸ್ತೀನಿ. ಎಲ್ಲರೂ ಊಟ ಇಲ್ಲದೆ ಕಾಯುತ್ತಿದ್ದೀರಿ" ಎಂದು ಹೇಳಿದ್ದಾರೆ.
ಯಾರಿಗೆ ಕ್ಲಾಸ್ ತಗೊಳ್ತಾರೆ?
ಈ ವೀಕೆಂಡ್‌ನಲ್ಲಿ ಯಾರಿಗೆ ಕ್ಲಾಸ್ ತಗೊಳ್ತಾರೆ, ಇಲ್ಲವೇ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಇವರಲ್ಲಿ ಯಾರದ್ದು ತಪ್ಪು? ಸರಿ ಎನ್ನುವ ಚರ್ಚೆ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸೀಸನ್ 11 ಸ್ಪರ್ಧಿಗಳು, 12 ಸ್ಪರ್ಧಿಗಳ ಆಟದ ವೈಖರಿ ಬಗ್ಗೆ ಚರ್ಚೆ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

