BBK 12: ಥೂ ಥೂ ಎಂದು ಉಗಿದ್ರು; ಆರ್ಭಟಿಸಿದ ಉತ್ತರ ಕರ್ನಾಟಕದ ಹುಲಿ ಮಾಳು ನಿಪನಾಳ!
BBK 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ನಿತ್ಯವೂ ಹೊಸ ಹೊಸ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಅದರಂತೆ ಈ ಬಾರಿ ಸ್ಪರ್ಧಿಗಳು ಸೂಕ್ತವಾದ ಕಾರಣ ನೀಡಿ, ಅವರು ಸಗಣಿ, ಕಸ ಎಂದು ಟೈಟಲ್ ಕೊಟ್ಟು ಮೈಮೇಲೆ ಸಗಣಿ ಸುರಿಯಬೇಕು, ಮೈಮೇಲೆ ಕಸ ಹಾಕಬೇಕಿತ್ತು.

ಜಗಳ ಶುರುವಾಯ್ತು
ಈ ವೇಳೆ ಮಾಳು ನಿಪನಾಳ ಹಾಗೂ ಕಾಕ್ರೋಚ್ ಸುಧಿ ಅವರಿಗೂ, ಕಾಕ್ರೋಚ್ ಸುಧಿ, ರಾಶಿಕಾ ಶೆಟ್ಟಿ ನಡುವೆ ಜಗಳ ನಡೆದಿದೆ. ಇನ್ನೊಂದು ಕಡೆ ಈ ಜಗಳವು ಥೂ ಥೂ ಎಂದು ಇನ್ನಷ್ಟು ಮುಂದುವರೆದಿದೆ.
ಸಂಭಾಷಣೆ ಏನು?
ಮಾಳು ನಿಪನಾಳ: ಇವರ ತಲೆಯಲ್ಲಿ ಸಗಣಿ ತುಂಬಿದೆ
ಕಾಕ್ರೋಚ್ ಸುಧಿ: ಅವನು ನಿನ್ನನ್ನು ಕ್ಯಾಪ್ಟನ್‌ಮಾಡಿದ. ಅದಿಕ್ಕೆ ಕ್ಯಾಪ್ಟನ್‌ಮಾಡಿದ
ಮಾಳು ನಿಪನಾಳ: ಯಾರಿಗೆ ಏನೇನು ಕೊಡಬೇಕು ಎನ್ನೋದು ನನಗೆ ಗೊತ್ತಿದೆ
ಕಾಕ್ರೋಚ್ ಸುಧಿ: ನಿಮಗೆ ಆಟ ಏನು ಎಂದು ಗೊತ್ತೇ ಆಗಿಲ್ಲ
ರಾಶಿಕಾ ಶೆಟ್ಟಿಗೆ ಕಸ ಹಾಕಿದ್ರು
ಮಾಳು ನಿಪನಾಳ: ನನಗೆ ಹುಚ್ಚಿಲ್ಲ
ಕಾಕ್ರೋಚ್ ಸುಧಿ: ಹುಚ್ಚಿರೋಕೆ ತಲೆಯಲ್ಲಿ ಮಿದುಳು ಇರಬೇಕು
ಅಂದಹಾಗೆ ರಾಶಿಕಾ ಶೆಟ್ಟಿಗೆ ಮಾಳು ಅವರು ಕಸ ಹಾಕಿದ್ದಾರೆ. ನನಗೆ ಸರಿಯಾದ ಕಾರಣ ಕೊಟ್ಟಿಲ್ಲ ಎಂದು ರಾಶಿಕಾ ಆರೋಪ ಮಾಡಿದ್ದರು.
ಮುಚ್ಕೊಂಡು ಕೂತ್ಕೋ ಎಂದ್ರು
ಆಗ ರಾಶಿಕಾ ಅವರು ಥೂ ಎಂದಿದ್ದಾರೆ. ಮಾಳು ನಿಪನಾಳ ಅವರು, “ಥೂ ಎಲ್ಲ ಬೇಡ” ಎಂದಿದ್ದಾರೆ. ಆಗ ಗಿಲ್ಲಿ ನಟ ಕೂಡ “ಥೂ ಬಿಡಿ” ಎಂದಿದ್ದಾರೆ. ರಾಶಿಕಾ ಅವರು ಮತ್ತೆ “ಮುಚ್ಕೊಂಡು ಕೂತ್ಕೋ” ಎಂದಿದ್ದಾರೆ.
ಆಟ ಫುಲ್ ಚೇಂಜ್
ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದವರು, ಶತ್ರುಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಆಟ ಯಾವ ಸ್ವರೂಪ ಪಡೆಯಲಿದೆ ಎಂದು ಕಾದು ನೋಡಬೇಕಿದೆ.