- Home
- Entertainment
- TV Talk
- BBK 12: ಗಿಲ್ಲಿ ನಟ ಬಡವ ಅಂತ ನಾಟಕ ಮಾಡ್ತಾರೆ; ವಿಷ ಕಾರಿದ ಧ್ರುವಂತ್, ಸೇಡು ತೀರಿಸಿಕೊಂಡ್ರು
BBK 12: ಗಿಲ್ಲಿ ನಟ ಬಡವ ಅಂತ ನಾಟಕ ಮಾಡ್ತಾರೆ; ವಿಷ ಕಾರಿದ ಧ್ರುವಂತ್, ಸೇಡು ತೀರಿಸಿಕೊಂಡ್ರು
Bigg Boss Kannada Season 12 Show Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಕಂಡರೆ ಧ್ರುವಂತ್‌ಗೆ ಆಗೋದಿಲ್ಲ. ಧ್ರುವಂತ್‌ಗೆ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಅವರು ಒಂದೆರಡು ಪಟ್ಟ ಕೊಟ್ಟಿದ್ದರು. ಈಗ ಧ್ರುವಂತ್ ಅವನ್ನು ತಿರುಗಿಸಿ ಕೊಟ್ಟಿದ್ದಾರೆ.

ಗಿಲ್ಲಿ ನಟ, ರಕ್ಷಿತಾ ವಿರುದ್ಧ ಧ್ರುವಂತ್ ಮಾತು
ಬಿಗ್ ಬಾಸ್ ಮನೆಯಲ್ಲಿ ಇಂದು ಹೊಸ ಟಾಸ್ಕ್‌ಗಳನ್ನು ಕೊಡಲಾಗಿದೆ. ಆ ಟಾಸ್ಕ್‌ನಲ್ಲಿ ಗಿಲ್ಲಿ ನಟ, ರಕ್ಷಿತಾ ವಿರುದ್ಧ ಧ್ರುವಂತ್ ಮಾತನಾಡಿದ್ದಾರೆ. ರಕ್ಷಿತಾ ಮೇಲೆ ಧ್ರುವಂತ್ ವಿಷ ಕಾರುತ್ತಿದ್ದಾರೆ ಎಂದು ಮಾಳು ನಿಪನಾಳ ಹೇಳಿದ್ದಾರೆ.
ಧ್ರುವಂತ್ ವಿರುದ್ಧ ಮಾತಾಡಿದ್ದ ಗಿಲ್ಲಿ, ರಕ್ಷಿತಾ
ಬೇರೆಯವರನ್ನು ಕೆಳಗಡೆ ಹಾಕಿ, ಹಾಸ್ಯ ಮಾಡೋದು ಹಾಸ್ಯ ಅಲ್ಲ ಎಂದು ಧ್ರುವಂತ್ ಹೇಳಿದ್ದಾರೆ. ಸಾಕಷ್ಟು ಬಾರಿ ಇದೇ ವಿಚಾರಕ್ಕೆ ಧ್ರುವಂತ್ ಹಾಗೂ ಗಿಲ್ಲಿ ನಟನ ಮಧ್ಯೆ ಜಗಳ ಆಗಿದೆ. ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಧ್ರುವಂತ್ ಅವರು ನಕಲಿ ಎಂದು ರಕ್ಷಿತಾ ಹೇಳಿದ್ದರೆ, ಅರ್ಥಹೀನ ಎಂದು ಗಿಲ್ಲಿ ನಟ ಹೇಳಿದ್ದರು.
ರಕ್ಷಿತಾ ನಾಟಕ ಮಾಡುತ್ತಿದ್ದಾಳೆ
ರಕ್ಷಿತಾ ಶೆಟ್ಟಿ ಕನ್ನಡ ಭಾಷೆ ಬರುತ್ತದೆ, ಆದರೂ ನಾಟಕ ಮಾಡುತ್ತಿದ್ದಾಳೆ ಎಂದು ಧ್ರುವಂತ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಸಾಕಷ್ಟು ಬಾರಿ ಅವರ ಬಗ್ಗೆ ಹಿಂದಿನಿಂದ ಮಾತನಾಡಿದ್ದುಂಟು. ಅಂದಹಾಗೆ ಗಿಲ್ಲಿ ನಟನ ಆಟದ ಬಗ್ಗೆಯೂ ಧ್ರುವಂತ್ ಮಾತನಾಡಿದ್ದರು.
ಬಡವನಾಗಿ ನಾಟಕ ಮಾಡ್ತಿದ್ದಾರೆ
ಬನಿಯನ್ ಹಾಕಿಕೊಂಡು, ತಾನು ಬಡವನಾಗಿ ಮುಖವಾಡ ಹಾಕ್ಕೊಂಡು, ತಾನು ಬಡವ ಎಂದು ನಾಟಕ ಮಾಡುತ್ತಿದ್ದಾರೆ. ಅಣ್ಣ ಹತ್ರ ಒಂದು ನೂರು ಕುರಿ ಇದೆ ಎನ್ನುತ್ತಾರೆ. ಬಟ್ಟೆ ಹಾಕದೆ, ವಾಶ್ ಮಾಡದೆ ಕೆರಕೊಂಡು ಇರುತ್ತಾರೆ. ನೀವು ಸಿರಿವಂತರು ಎಂದು ಹೇಳಿ ಏನು ಬಿಂಬಿಸುತ್ತಿದ್ದಾರೆ? ಎಂದು ಗಿಲ್ಲಿ ನಟನ ವಿರುದ್ಧ ಧ್ರುವಂತ್ ಹೇಳಿದ್ದಾರೆ.
ರಕ್ಷಿತಾ ಶೆಟ್ಟಿ ಮುಖವಾಡವಿದು
ನಾನು ಮಂಗಳೂರಿನವನು. ಎಂಥ ಗೊತ್ತುಂಟ ಗಾಯ್ಸ್ ಎಂದು ನಾಟಕ ಆಡಲ್ಲ. ಶನಿವಾರ ಮಾತ್ರ ಕನ್ನಡ ಬರಲ್ಲ, ಆದರೆ ಜಗಳ ಆಡುವಾಗ ಅವರಿಗೆ ಯಾವುದೇ ಭಾಷೆ ಸಮಸ್ಯೆ ಆಗಲ್ಲ, ಇದು ನಾಟಕ, ಮುಖವಾಡ ಎಂದು ರಕ್ಷಿತಾ ಶೆಟ್ಟಿ ವಿರುದ್ಧ ಕೂಡ ಮಾತನಾಡಿದ್ದಾರೆ.